ಕೊನೆಗೂ ಪ್ರಾಣ ‘ಪಕ್ಷಿ’ ಉಳಿಸಿದ ಯತಿವರೇಣ್ಯ!

February 21, 2018 ⊄   By: ಶೋಭಾ.ವಿ

ಜೀವನ್ಮರಣ ಸ್ಥಿತಿಯಲ್ಲಿದ್ದ ಪಕ್ಷಿಯೊಂದನ್ನು ನೀರುಣಿಸಿ ಆಶ್ರಯಕೊಟ್ಟು ಯತಿಯೊಬ್ಬರು ಕಾಪಾಡಿ ನೈಜ ಜೀವಧರ್ಮವನ್ನು ಮೆರೆದಿದ್ದಾರೆ. ಗೋಸೋವೆ, ಪರಿಸರ ಸಂರಕ್ಷಣೆ, ವೃಕ್ಷಾರೋಪಣೆ ಸೇರಿದಂತೆ ಹಲವು ಪರಿಸರ ಪೂರಕ ಚಟುವಟಿಕೆಗಳ ಮೂಲಕ ವಿಭಿನ್ನವಾಗಿ ನಿಲ್ಲುವ ಉಡುಪಿ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಸೋಮವಾರ ತಮ್ಮ ಮಠದ ಆವರಣದಲ್ಲಿನ ಪಾಠ ಶಾಲೆಯಲ್ಲಿ ಪುಟಾಣಿ ಬುಲ್ ಬುಲ್ (ಪಿಕರಾಳ) ಒಂದಕ್ಕೆ ನೀರು ಹನಿಸುತ್ತಿರುವ ಚಿತ್ರ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳವಾರ ಉಡುಪಿಯ ಪೇಜಾವರ ಮಠದ ಆವರಣದಲ್ಲೇ ಈ ಘಟನೆ ನಡೆದದ್ದು. ಎಂದಿನಂತೆ ಕಿರಿಯ ಶ್ರೀಗಳು ಬೆಳಗ್ಗೆ ಎಂಟುವರೆ ಸುಮಾರಿಗೆ ತಮ್ಮ ಪೂಜಾ ಅನುಷ್ಠಾನಾದಿಗಳನ್ನು ಮುಗಿಸಿ ನೀಲಾವರದ ಗೋಶಾಲೆ ಭೇಟಿ ಮಾಡಿ ಅಲ್ಲಿನ ಗೋವುಗಳ ವ್ಯವಸ್ಥೆಯ ದೇಕರೇಖಿ ಕೈಗೊಂಡು ಅಲ್ಲಿಂದ ಮಠದಿಂದ ನಡೆಸಲ್ಪಡುವ ಪ್ರಹ್ಲಾದ ಗುರುಕುಲಕ್ಕೆ ಬಂದಿದ್ದರು.

ಬಿಸಿಲಿನ ಝಳ ತುಸು ಹೆಚ್ಚೇ ಇತ್ತು. ಅಷ್ಟರಲ್ಲಿ ಪಾಠಶಾಲೆಯ ಆವರಣದಲ್ಲಿ ಒಂದಷ್ಟು ಪುಟ್ಟ ಮಕ್ಕಳು ಗುಂಪುಗೂಡಿ ಏನೋ ಗದ್ದಲ ನಡೆಸುತ್ತಿದ್ದುದು ಶ್ರೀಗಳ ಗಮನಕ್ಕೆ ಬಂತು. ಸಹಜ ಕುತೂಹಲದಿಂದ ಮಕ್ಕಳ ಬಳಿಸಾರಿ ನೋಡಿದಾಗ ಬುಲ್ ಬುಲ್ ಪಕ್ಷಿಯೊಂದು ನೀರು ಅರಸುತ್ತಾ ಬಂದು ಬಳಲಿ ಬಸವಳಿದು ಮಠದ ತೋಟದ ಬಳಿ ಬಂದು ಹಾರಲಾಗದೆ ಬಿದ್ದಿತ್ತು. ಅದನ್ನು ವಿದ್ಯಾರ್ಥಿಗಳು ಪಾಠಶಾಲೆಯ ಆವರಣಕ್ಕೆ ತಂದು ಇಟ್ಟುಕೊಂಡು ಮುಂದೇನು ಮಾಡುವುದೆಂದು ತಿಳಿಯದೇ ಗದ್ದಲ ನಡೆಸುತ್ತಿದ್ದರು. ಶ್ರೀಗಳನ್ನು ಕಂಡ ತಕ್ಷಣ ಮಕ್ಕಳೆಲ್ಲರೂ ಪಕ್ಷಿಯ ದೈನೇಸಿ ಸ್ಥಿತಿಯನ್ನ ಶ್ರೀಗಳ ಗಮನಕ್ಕೆ ತಂದು ಏನಾದರೂ ಪರಿಹಾರ ದೊರಕಿಸಿಕೊಡುವಂತೆ ಕೋರಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಶ್ರೀಗಳು ಉತ್ತರೀಯವನ್ನು ಬಿಸಿಲಿಗೆ ಅಡ್ಡವಾಗಿ ಹಾಸಿ ಪುಟಾಣಿ ಬುಲ್ ಬುಲ್ ಮರಿಯನ್ನು ತಂದು ಸಂತೈಸಿದರು. ಹಕ್ಕಿ ದಾಹದಿಂದ ಬಾಯಿ ಕಳೆದುಕೊಂಡು ಅಂಗಲಾಚುತ್ತಿತ್ತು. ತಕ್ಷಣ ಶ್ರೀಗಳು ಬಾಟಲಿಯ ಮುಚ್ಚಳದಲ್ಲಿ ಅತೀ ಎಚ್ಚರಿಕೆಯಿಂದ ಹನಿಹನಿಯಾಗಿ ನೀರನ್ನು ಅದಕ್ಕೆ ಉಣಿಸಿದರು. ಆ ದೃಶ್ಯ ತಾಯಿ ಹಕ್ಕಿ ಮರಿಗೆ ಗುಟುಕು ನೀಡುವ ಪರಿಯನ್ನು ನೆನಪಿಸಿದ್ದು ಸುಳ್ಳಲ್ಲ. ಕೆಲವೇ ಕ್ಷಣದಲ್ಲಿ ಚೇತರಿಸಿಕೊಂಡ ಪಕ್ಷಿ ಸುಮಾರು ಒಂದು ಒಂದೂವರೆ ತಾಸು ಶ್ರೀಗಳ ಕೋಣೆಯಲ್ಲೇ ಹಾರಾಡಿಕೊಂಡು ಇತ್ತು. ನಂತರ ಪ್ರಾಥಮಿಕ ಶೈಚೋಪಚಾರ ಮಾಡಿಸಿ ರಕ್ಷಣೆಯ ಕ್ರಮ ಕೈಗೊಂಡಾಗ ಎಲ್ಲರಲ್ಲಿ ಕೃತಾರ್ಥ ಭಾವ. ಅಲ್ಲಿನ ವಿದ್ಯಾರ್ಥಿಗಳ ಸಮಯೋಚಿತ ಪ್ರಯತ್ನದಿಂದ ಆ ಪಕ್ಷಿ ನಿಟ್ಟುಸಿರು ಬಿಡುತ್ತಾ ಸಂತೋಷದಿಂದ ಹಾರಿಯೋಯಿತು. ತಕ್ಷಣವೇ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ‘ ಮುಂಬರುವುದು ಬೇಸಿಗೆ ಎಲ್ಲೆಲ್ಲೂ ನೀರಿನ ಹಾಹಾಕಾರವಿರುತ್ತದೆ ಹಾಗಾಗಿ ಪಶು ಪಕ್ಷಿಗಳಿಗೆ ನಿಮ್ಮ ಮನೆಯಲ್ಲಿ ನೀರು ಹಾಗೂ ಆಹಾರ ಇಡುವ ವ್ಯವಸ್ಥೆ ಮಾಡಬೇಕು ಇದು ಸಹ ಶ್ರೀಕೃಷ್ಣನ ಸೇವೆಯ ಭಾಗವೇ. ಹಾಗಾಗಿ ಎಲ್ಲರೂ ಮನೆಯಲ್ಲೂ ನೀರು ಇಡುತ್ತೀರಾ ತಾನೆ? ಎಂದು ಮಕ್ಕಳಿಗೆ ಕರೆ ನೀಡಿ ಮಾನವತೆಯ ಪಾಠ ಮಾಡಿದರು.ಗರುಡನ ಸಂರಕ್ಷಣೆ
ಕಳೆದ ವಾರವೂ ಕೂಡ ಯಾವುದೋ ಕಾರಣದಿಂದ ತನ್ನ ಎರಡೂ ಕಣ್ಣಿನ ದೃಷ್ಟಿ ಕಳಕೊಂಡ ಗರುಡ(ಬ್ರಾಹ್ಮಿಣಿ ಕೈಟ್ಸ್) ಪಕ್ಷಿಗೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಿದ್ದರು.

ಮಠದ ಬಳಿ ಇರುವ ಮರದಿಂದ ಗರುಡ ಪಕ್ಷಿ ಕೆಳಗೆ ಬಿದ್ದಿತ್ತು. ಇದನ್ನು ಗಮನಿಸಿದ ಪೇಜಾವರ ಕಿರಿಯ ಯತಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆರೈಕೆ ಮಾಡಿ ಬಳಿಕ ಪ್ರಸಾದ್ ನೇತ್ರಾಲಯಕ್ಕೆ ಚಿಕಿತ್ಸೆ ನೀಡುವಂತೆ ಕೋರಿದ್ದರು. ವಿದ್ಯುತ್ ತಂತಿಗೆ ಸಿಲುಕಿ ಅಘಾತ ಅಥವಾ ಆಂತರಿಕ ಒತ್ತಡದಿಂದ ಕಣ್ಣಿನ ಕಪ್ಪುಗುಡ್ಡೆ ಬೆಳ್ಳಗಾಗಿರುವುದು ಕಾರಣವಿರಬಹುದು ಎಂದು ಹೇಳಿದ್ದರು.
ಈ ಸಂಬಂಧ ಹಸಿರುವಾಸಿಯ ಜತೆ ಮಾತನಾಡಿದ ಶ್ರೀವಿಶ್ವ ಪ್ರಸನ್ನ ತೀರ್ಥರು ‘’ಪರಿಸರವೆಲ್ಲಾ ಬರಡಾಗಿ ಕಾಂಕ್ರಿಟ್ ಮಯವಾಗಿವೆ. ನೀರು, ಆಹಾರ ಸಿಗದೆ ಕುಸಿದು ಬೀಳುವ ಪ್ರಾಣಿ, ಪಕ್ಷಿಗಳ ಬಗ್ಗೆ ಧಯೆ ಇರಲಿ, ಆದಷ್ಟು ಎಲ್ಲರೂ ಮನೆಯ ಚಾವಣಿಗಳಲ್ಲಿ, ಎಲ್ಲಾದರೂ ಒಂದು ಕಡೆ ತಟ್ಟೆ, ಪಾತ್ರೆ ಅಥವಾ ಮಡಿಕೆಯಲ್ಲಿ ನೀರು ಇಟ್ಟು ಪುಣ್ಯ ಕಟ್ಟಿಕೊಳ್ಳಬೇಕು. ಪಶು ಪಕ್ಷಿಗಳ ನೀರಿನ ದಾಹ ತೀರಿಸಿ ಅವುಗಳ ಉಳಿವಿಗೆ ನೀವು ಕಾರಣರಾಗಿ ’’ ಎಂದು ಕರೆ ನೀಡಿದ್ದಾರೆ.

ಪಿಕರಾಳದ ಪರಿಚಯ
ಪಿಕರಾಳ ಪುಟ್ಟ ಗಾತ್ರದ ಅತಿ ಸುಂದರ ಪಕ್ಷಿ. ಬುಲ್ ಬುಲ್ ಎಂದೇ ಜನಪ್ರಿಯವಾಗಿರುವ ಈ ಹಕ್ಕಿಯ ವೈಜ್ಞಾನಿಕ ಹೆಸರು pycnonotidae ಎಂದು. ಈ ಹಕ್ಕಿಯನ್ನು ಕೆಂಪು ಕಪೋಲದ ಪಿಕರಾಳ ಅಥವಾ ಕೆಮ್ಮೀಸೆಯ ಹಕ್ಕಿ ಎಂದು ಕರೆಯುತ್ತಾರೆ. ಕೆಂಪು ಬಾಲದ ಪಿಕರಾಳಗಳ ಬಾಲದ ಬುಡದಲ್ಲಿ ಕೆಂಪು ಬಣ್ಣವಿದ್ದು. ಇವು ಹೆಚ್ಚಾಗಿ ತೋಟ, ಉದ್ಯಾನದಲ್ಲಿ ಕಾಣಿಸಿಕೊಳ್ಳುತ್ತವೆ. ಬೆಳಗಿನ ಸಮಯದಲ್ಲಿ ಶಿಳ್ಳೆ ಹಾಕುತ್ತ ಸುಶ್ರಾವ್ಯವಾಗಿ ಹಾಡುತ್ತವೆ. ಇವು ಗುಂಪಿನಲ್ಲಿರುವುದು ಅಪರೂಪ. ಬದಲಾಗಿ ಒಂಟಿ ಅಥವಾ ಜೋಡಿಯಾಗಿ ಕಾಣಿಸಿಕೊಳ್ಳುವುದು ಹೆಚ್ಚು. ರಾಜ್ಯಾದ್ಯಂತ ಇವು ಕಾಣ ಸಿಗುತ್ತವೆ.

ಹಸಿರು ಕಳಕಳಿ
ಬೇಸಿಗೆಯ ದಾಹಕ್ಕೆ ಭೂಮಿಯಲ್ಲಿನ ನೀರು ಇಂಗಿ ಬರಿದಾಗುತ್ತದೆ. ಜೀವಿಗಳಿಗು ಕೂಡ ಬರಗಾಲ ಎದುರಾಗುವ ಸಮಯವಿದು. ಹಾಗಾಗಿ ಈ ಪುಟ್ಟ ಸೇವೆಯಿಂದ ಪ್ರಾಣಿ, ಪಕ್ಷಿಗಳ ದಣಿವಾರಿಸಿ.

Share This :
  •  
  •  

RELATED ARTICLES 

Readers Comments (1) 

  • Sowjanya Rao


    21/02/2018
    Very nice writing... Also a good story

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos