• ಕಾವೇರಿ ನದಿ ಸ್ವಚ್ಛತೆಗೆ ಆಂದೋಲನ

  ಕಾವೇರಿ ನದಿ ಸ್ವಚ್ಛತೆಗೆ ಆಂದೋಲನ

  June 06, 2018

  ಪವಿತ್ರ ಮತ್ತು ಪೂಜ್ಯನೀಯ ನದಿ ಎಂದೇ ಖ್ಯಾತಿ ಪಡೆದಿರುವ ಜೀವನದಿ ಕಾವೇರಿಯು ಇಂದು ಮಲಿನವಾಗುತ್ತಿದ್ದಾಳೆ. ಈಗಿನ ಕಾವೇರಿ ನದಿ ಸ್ಥಿತಿ ನೋಡಿದರೆ ಕುಡಿಯಲು ಮಾತ್ರ ಅಲ್ಲ ಕೃಷಿಗೂ ಯೋಗ್ಯವಲ್ಲ ಎಂಬ ದೂರು ಕೇಳಿ ಬರುತ್ತಿದೆ. ಶ್ರೀರಂಗಪಟ್ಟಣದ ಬಳಿಯಂತೂ ಹಸಿರು ಹೊಂಡೆ ಹುಲ್ಲು ಹಾಗೂ ಪಾಚಿಯಿಂದ ನದಿ ಮುಚ್ಚೇ ಹೋಗಿದೆ.

  Read more

 • ಹರಳುಗಟ್ಟಿದ ಬದುಕಿನ ಗೂಢಾರ್ಥ ಬಿಡಿಸಿಡುವ ಹೊತ್ತಗೆ!!

  ಹರಳುಗಟ್ಟಿದ ಬದುಕಿನ ಗೂಢಾರ್ಥ ಬಿಡಿಸಿಡುವ ಹೊತ್ತಗೆ!!

  June 04, 2018

  ಅಂಥದ್ದೊಂದು ಕಲ್ಪನೆಯೇ ಅತ್ಯಂತ ಉತ್ಕೃಷ್ಟವಾದುದು. ನೀರು ಒಂದು ಅನುಭೂತಿ. ಅದು ಹೊಮ್ಮಿಸುವ ಅರ್ಥಗಳು, ಒಳಾರ್ಥಗಳು ಎಲ್ಲವೂ ಅನೂಹ್ಯ. ಆ ಸುಂದರ ಜಲರಾಶಿಯ ಮುಂದೆ ಹೋಗಿ ನಿಂತರೆ ಸಿಗುವ ಆನಂದ ಅವರ್ಣನೀಯ. ಅದನ್ನು ಮನದಂಚಿನಲ್ಲಿ ಗ್ರಹಿಸಿ ಹೃದ್ಯವಾಗಿಸಿಕೊಳ್ಳುವುದು ಒಂದು ಕಲೆಯೇ.

  Read more

 • ಕಣ್ಮರೆಯಾಗಲಿದೆ ಜಗತ್ ಪ್ರಸಿದ್ಧ ಜೋಗಜಲಪಾತ

  ಕಣ್ಮರೆಯಾಗಲಿದೆ ಜಗತ್ ಪ್ರಸಿದ್ಧ ಜೋಗಜಲಪಾತ

  April 21, 2018

  ಅಮ್ಮನಘಟ್ಟದಲ್ಲಿನ ಗಣಿಗಾರಿಕೆ ಸೇರಿದಂತೆ ನಿಸರ್ಗ ನಾಶ ಹೀಗೆಯೇ ಮುಂದುವರಿದರೆ ನಾಡಿಗೇ ಬೆಳಕು ನೀಡುವ ಶರಾವತಿಗೆ ಶರಾವತಿಯೇ ಬತ್ತಿ ಹೋಗಲಿದೆ. ಏಕೆಂದರೆ ಈ ಅಪರೂಪದ ತಾಣದಲ್ಲಿ ಶರಾವತಿಯ ಪ್ರಮುಖ ಐದು ಉಪನದಿಗಳು ಹುಟ್ಟುತ್ತವೆ. ಲಿಂಗನಮಕ್ಕಿ ಅಣೆಕಟ್ಟು ಹೂಳಿನ ಗುಂಡಿಯಾಗಲಿದೆ.

  Read more

 • ಅವಧೂತನ ಜತೆ ಒಂದು ದಿನ!

  ಅವಧೂತನ ಜತೆ ಒಂದು ದಿನ!

  April 11, 2018

  ಕುರಿ ಕಾಯುತ್ತಲೇ ಬೆಟ್ಟದ ತಪ್ಪಲಲ್ಲಿ ಕೆರೆ ಕಟ್ಟಿ, ಪಶು-ಪಕ್ಷಿಗಳಿಗೆ ನೀರುಣಿಸಿದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರಿಗೆ ಮುರುಘಾಮಠ ನೀಡುವ ಬಸವಶ್ರೀ ಪ್ರಶಸ್ತಿ ಲಭಿಸಿದೆ. ಕಾಮೆಗೌಡರ ಜಲಕಾಯಕವನ್ನು ‘ಹಸಿರುವಾಸಿ’ಯು ಬಹಳ ಹಿಂದೆಯೇ ಪರಿಚಯಿಸಿತ್ತು.

  Read more

 • ಎಲ್ಲ ಬಿಟ್ಟು, ಭಂಗಿ ನೆಟ್ಟ ಜಾರ್ಜ್ ಸಾಹೇಬರು!

  ಎಲ್ಲ ಬಿಟ್ಟು, ಭಂಗಿ ನೆಟ್ಟ ಜಾರ್ಜ್ ಸಾಹೇಬರು!

  March 24, 2018

  ಇದನ್ನೇ ಎಡಬಿಡಂಗಿತನ ಎನ್ನುವುದು. ಒಂದಿನಿತೂ ವ್ಯತ್ಯಯವಿಲ್ಲದೇ ವರ್ಷಂಪ್ರತಿ ಬರೋಬ್ಬರಿ ನೂರು ದಿನ ಬೀಳುವ ಬಂಗಾರದಂಥ ಮಳೆಯನ್ನು ಹಿಡಿದಿಟ್ಟುಕೊಳ್ಳುವ ಯೋಗ್ಯತೆಯೇ ಇಲ್ಲದ ರಾಜಧಾನಿಯೆಂಬೋ ಬೆಂಗಳೂರಿಗೆ ಇನ್ನೆಲ್ಲಿಂದಲೋ ಶರಾವತಿ, ಅಘನಾಶಿನಿಗಳನ್ನು ತರುವುದು ಎಂದರೆ ಅದೆಂಥ ಮೂರ್ಖತನವೆಂಬ ಕಲ್ಪನೆಯಾದರೂ ಜಾರ್ಜ್ರಂಥ ಮುಖಂಡರಿಗೆ ಇದೆಯೇ? ಗಾದೆ ಹಳೆಯದಾದರೇನು ಅರ್ಥ ನವನವೀನ.

  Read more

 • ತಡೆಗೋಡೆ ಕಟ್ಟಬೇಕಾದ್ದು ನದಿಗಳಿಗಲ್ಲ, ಮೊದಲು ನಮ್ಮ ಚಾಳಿಗಳಿಗೆ

  ತಡೆಗೋಡೆ ಕಟ್ಟಬೇಕಾದ್ದು ನದಿಗಳಿಗಲ್ಲ, ಮೊದಲು ನಮ್ಮ ಚಾಳಿಗಳಿಗೆ

  March 23, 2018

  ಸುಮಾರು ಆರು ವರುಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಒಂದು ಶಿಬಿರದಲ್ಲಿ ಪಾಲ್ಗೊಂಡಿದ್ದೆ. ರಾಷ್ಟ್ರೀಯ ಸಂಘಟನೆಯೊಂದು ಆಯೋಜಿಸಿದ್ದ ಶಿಬಿರವದು. ಸುಮಾರು 20 ದಿವಸಗಳ ಶಿಬಿರದಲ್ಲಿ ನಿತ್ಯ ಆಟ, ಯೋಗ, ನಿಯುದ್ಧ, ಹಾಡು ಇತ್ಯಾದಿ ಹೊಸ ಹೊಸ ಚಟುವಟಿಕೆಗಳನ್ನು ಕಲಿಸುತ್ತಿದ್ದರು.

  Read more

 • ಗಂಗೆಗಾಗಿ ಸಂತರಾದ ಜ್ಞಾನದ ‘ಆಗರ’ವಾಲರು

  ಗಂಗೆಗಾಗಿ ಸಂತರಾದ ಜ್ಞಾನದ ‘ಆಗರ’ವಾಲರು

  March 10, 2018

  ಗಂಗೆಯ ರಕ್ಷಣೆಗಾಗಿ ವಿಜ್ಞಾನಿ ಸಂತ ಸ್ವಾಮಿ ಜ್ಞಾನ್ ಸ್ವರೂಪ್ ಸನಂದ್ ಮತ್ತೆ ಉಪವಾಸ ಕುಳಿಯುವ ಸೂಚನೆ ನೀಡಿದ್ದಾರೆ. ಕೇಂದ್ರ ಸರಕಾರ ನಮಾಮಿ ಗಂಗಾ ಯೋಜನೆ ಜಾರಿಗೆ ತಂದರೂ ತೃಪ್ತಿದಾಯಕ ಕೆಲಸಗಳು ಆಗಿಲ್ಲ. ಅಲ್ಲದೆ ಜಲ ವಿದ್ಯುತ್ ಯೋಜನೆಗಳ ಹೆಸರಲ್ಲಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದು ಗಂಗೆಯ ಒಡಲನ್ನು ಸಂಪೂರ್ಣ ಬರಿದು ಮಾಡಲಿದೆ.

  Read more

 • ರಾಜಕೀಯ ಪ್ರತಿಭಟನೆಗಳಿಂದ ಮಹದಾಯಿ ನೀರು ಸಿಗದು

  ರಾಜಕೀಯ ಪ್ರತಿಭಟನೆಗಳಿಂದ ಮಹದಾಯಿ ನೀರು ಸಿಗದು

  February 02, 2018

  ಇದನ್ನೇ ರಾಜಕೀಯ ಎನ್ನುವುದು. ಪರಸ್ಪರ ಪಕ್ಷಗಳ ಕಚೇರಿ ಎದರು ಪ್ರತಿಭಟನೆ, ಪ್ರದರ್ಶನಗಳನ್ನು ನಡೆಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿದ್ದರೆ, ಈ ರಾಜಕೀಯದ ಮಂದಿ ಇಷ್ಟು ದಿನ ಎಲ್ಲವನ್ನೂ ಮುಚ್ಚಿಕೊಂಡು ಕುಳಿತದ್ದಾದರೂ ಏಕೆ? ಸ್ವತಃ ರಾಜ್ಯದ ಜಲಸಂಪನ್ಮೂಲ ಸಚಿವರೇ ಪ್ರತಿಭಟನಾಕಾರರ ಜತೆಗೆ ಧರಣಿ ಕುಳಿತು ತಮ್ಮ ಬೆಂಬಲವನ್ನು ಪ್ರದರ್ಶಿಸಿದರು.

  Read more

 • ತುಂಬಿದ ತಲ್ಲೂರು ಕೆರೆ, ಯಶ್ ಆಡಿದ್ದನ್ನು ಮಾಡಿ ತೋರಿದ್ದಾರೆ !

  ತುಂಬಿದ ತಲ್ಲೂರು ಕೆರೆ, ಯಶ್ ಆಡಿದ್ದನ್ನು ಮಾಡಿ ತೋರಿದ್ದಾರೆ !

  November 28, 2017

  ‘ನನ್ನ ಪ್ರಕಾರ ಅಭಿಮಾನ ಎನ್ನುವುದು ಕೇವಲ ಹಾರ-ತುರಾಯಿ, ಘೋಷಣೆ ಕೂಗುವುದಕ್ಕಷ್ಟೇ ಸೀಮಿತವಾಗಬಾರದು. ನನ್ನ ಮೇಲೆ ನಿಜವಾದ ಅಭಿಮಾನವಿದ್ದರೆ ಪ್ರತಿಯೊಬ್ಬರೂ ಅವರವರ ಊರಿನಲ್ಲಿ ಒಂದೊಂದು ಕೆರೆ ಕೆಲಸಕ್ಕೆ ಮುಂದಾಗುತ್ತಾರೆ. ನಾವು ಶುರುಮಾಡೋಣ’ ಎಂದಿದ್ದರು ಯಶ್.

  Read more

 • ಭವರ್ ಲಾಲ್ರ ಬೆವರ ಹನಿ ಮುತ್ತಾದ ಕಥೆ...

  ಭವರ್ ಲಾಲ್ರ ಬೆವರ ಹನಿ ಮುತ್ತಾದ ಕಥೆ...

  November 13, 2017

  ‘ಪುಟ್ಟ ಕನಸು, ದಿಟ್ಟ ಕ್ರಾಂತಿ’-ಭವರ್ ಲಾಲ್ ಎಂಬ ಬೆರಗಿನ ವ್ಯಕ್ತಿತ್ವ ಸ್ಥಾಪಿಸಿದ ಜೈನ್ ಇರಿಗೇಶನ್ನ ಯಶೋಗಾಥೆಯ ಹಿಂದಿನ ಪ್ರೇರಣಾ ವಾಕ್ಯವಿದು. ಅಂಥ ಸಾಹಸಿ ಉದ್ಯಮಿ ಈಗ ನಮ್ಮೊಡನಿಲ್ಲ. ಆದರೆ ಅವತ್ತು ಅವರು ಜಲಗಾಂವ್ನ ಜೈನ್ ಹಿಲ್ಸ್ನಲ್ಲಿ ಸುರಿಸಿದ ಪ್ರತಿ ಬೆವರ ಹನಿ ಇಂದು, ನೀರೆಚ್ಚರಕ್ಕೆ ಮತ್ತೊಂದು ಹೆಸರೆನ್ನುವ ಮಟ್ಟಕ್ಕೆ ಸಂಸ್ಥೆಯನ್ನು ಬೆಳೆಸಿದೆ.

  Read more

 • ಕೃಷಿಕರ ಕಟ್ಟಕ್ಕೆ ಜಿಪಂ ಅಡಿಗಲ್ಲು

  ಕೃಷಿಕರ ಕಟ್ಟಕ್ಕೆ ಜಿಪಂ ಅಡಿಗಲ್ಲು

  September 14, 2017

  ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಮಳೆ ಶ್ರೀಮಂತವಾದರೂ (3500 ಮಿ.ಮೀ) ನೀರಿಗೆ ತತ್ವಾರ! ಕಳೆದ ವರ್ಷ ಚರಿತ್ರೆಯಲ್ಲೇ ಮೊದಲ ಬಾರಿಗೆ ಇಲ್ಲಿನ ಎರಡು ತಾಲೂಕುಗಳು "ಬರಪೀಡಿತ” ಎನಿಸಿಕೊಂಡವು. ನಾಚಿಕೆಗೇಡಿನ ಈ ಅವನತಿ ಜಿಲ್ಲಾಡಳಿತ ಮತ್ತು ಜನಸಮುದಾಯಕ್ಕೆ ಹಾಗೆನಿಸಲೇ ಇಲ್ಲ.

  Read more

 • ಚನ್ನೈಗೆ ಒಲಿದ ಆಕಾಶಗಂಗೆ

  ಚನ್ನೈಗೆ ಒಲಿದ ಆಕಾಶಗಂಗೆ

  June 15, 2017

  ವಾರಾಂತ್ಯ ಬಂದರೆ ಸಾಕು. ಸೈಕಲ್ ಸವಾರಿ ಶುರು. ಬೆಳಗ್ಗೆ ಮನೆ ಬಿಟ್ಟರು ಎಂದರೆ ವಾಪಸ್ ಬರುವುದು ಎಷ್ಟು ಹೊತ್ತಿಗೊ. ಇಂತಲ್ಲಿಗೇ ಹೋಗಬೇಕು ಎನ್ನುವ ಗುರಿ ಇಲ್ಲ. ಇಂಥವರನ್ನೇ ಭೇಟಿ ಮಾಡಬೇಕು ಎನ್ನುವ ನಿರ್ಧಾರವಿಲ್ಲ. ಬೇಸಂತ್ ನಗರ, ವಾಲ್ಮೀಕಿ ನಗರಗಳಲ್ಲಿ ಸುತ್ತಾಟ.

  Read more

 • ಕೆರೆ ಹೂಳು

  ಕೆರೆ ಹೂಳು

  June 07, 2017

  ನಮ್ಮ ರಾಜ್ಯದಲ್ಲಿ ೩೬೫೦೦ ಕೆರೆಗಳಿವೆ, ಹಾಗೆಯೇ ೩೭೭೦೦ ಹಳ್ಳಿಗಳಿವೆ. ಅಂದರೆ ಶೇಕಡ ೯೦ರಷ್ಟು ಹಳ್ಳಿಗಳಿಗೆ ಕೆರೆ ಅನುಕೂಲವಿದೆ. ಕೆಲವೆಡೆ ಒಂದೇ ಹಳ್ಳಿಗೆ ಎರಡು-ಮೂರು ಕೆರೆಗಳಿದ್ದರೆ, ಇನ್ನು ಕೆಲವೆಡೆ ನಾಲ್ಕೈದು ಹಳ್ಳಿಗಳಿಗೆ ಒಂದೇ ಕೆರೆ ಇರುವುದೂ ಉಂಟು.

  Read more

 • ಬರಕ್ಕೆ ಸಮುದ್ರದ ನೆಂಟಸ್ಥನದ ಪರಿಹಾರ?

  ಬರಕ್ಕೆ ಸಮುದ್ರದ ನೆಂಟಸ್ಥನದ ಪರಿಹಾರ?

  June 07, 2017

  ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ ಅನ್ನೋದು ಹಳೆ ಗಾದೆ. ಅದರೆ ರಾಜ್ಯ ರಾಜಧಾನಿಯ ಮಟ್ಟಿಗೆ ಸಮುದ್ರದ ನೆಂಟಸ್ಥನದಲ್ಲಿ ನೀರಿಗೂ ಬರ ಬಂದಿದೆ. ರಾಜ್ಯ ಹೊಂದಿರುವ ಸಮುದ್ರದ ನೆಂಟಸ್ಥನವನ್ನು ಗಟ್ಟಿಗೊಳಿಸಿಕೊಂಡರೆ ಖಂಡಿತಾ ರಾಜಧಾನಿ ಬೆಂಗಳೂರಿನ ಸಮಸ್ಯೆಗೆ ಸುಲಭದ, ಸೂಕ್ತ ಪರಿಹಾರವೊಂದು ದೊರಕಲು ಸಾಧ್ಯ.

  Read more

 • ತುಂಬಿ ತೊನೆವ ಚೌಕಿ ಬಾವಿಗಳ ಶ್ರೀಮಂತಿಕೆ

  ತುಂಬಿ ತೊನೆವ ಚೌಕಿ ಬಾವಿಗಳ ಶ್ರೀಮಂತಿಕೆ

  June 01, 2017

  ಬಾವಿಗಳು ಬತ್ತಿ ಬಾಯ್ದೆರೆದು ಕುಳಿತಿವೆ. ಕೆರೆಯಂಗಳ ಹೇಳಿ ಮಾಡಿಸಿದಂತೆ ಆಟದ ಮೈದಾನವಾಗಿ ರೂಪುಗೊಂಡಿದೆ. ಬೋರ್‌ವೆಲ್‌ಗಳು ಬೋರಲು ಬಿದ್ದಿವೆ. ಅಲ್ಲಲ್ಲಿ ರೈತರು ಬಿತ್ತಿದ ತರಕಾರಿ ಬೀಜಗಳು ಚಿಗಿಯುವ ಮೊದಲೇ ಮುರುಟಿಹೋಗಿವೆ. ರಣ ಬಿಸಿಲನ್ನು ಅನುಭವಕ್ಕೆ ತಂದುಕೊಳ್ಳಲು ಹೆಚ್ಚೇನೂ ಕಷ್ಟಪಡಬೇಕಿಲ್ಲ.

  Read more

 • ಓಡುವ ಹನಿಯನ್ನು ಪ್ರೀತಿಯಿಂದ ಮೈದಡವಿ

  ಓಡುವ ಹನಿಯನ್ನು ಪ್ರೀತಿಯಿಂದ ಮೈದಡವಿ

  June 01, 2017

  ಆಕೆ ಚಂಚಲೆ. ಸಂಯಮದ ಕಟ್ಟೆಯನ್ನು ನುಚ್ಚು ನೂರು ಮಾಡಿ ಕಂಡಕಂಡಲ್ಲೆಲ್ಲಾ ಹುಚ್ಚೆದ್ದು ನುಗ್ಗುವುದಷ್ಟೇ ಗೊತ್ತಾಕೆಗೆ. ಬಯಕೆಗಳ ಬೇಲಿಯನ್ನು ಜಿಗಿದು, ಬರುವ ಅಡ್ಡಿಗಳ ನಿವಾಳಿಸಿಕೊಂಡು ಬಿಗುಮಾನಬಿಟ್ಟು ಬಿಡುಬೀಸಾಗಿ ನಡೆಯುವ ಆಕೆಯನ್ನು ತಡೆಯುವವರಾದರೂ ಯಾರಿದ್ದಾರೆ? ಅಷ್ಟಕ್ಕೂ ಆಕೆ ಹೋರಟಿರುವುದಾದರೂ ಎಲ್ಲಿಗೆ? ಹರವಾದ ಎದೆಯ ಚೆಲ್ಲಿ, ನೀಳ ತೋಳುಗಳ ಮುಂಚಾಚಿ, ಬರ ಸೆಳೆದಪ್ಪಿ ಬಸಿರತುಂಬಿಸಲು ಕಾತರಿಸುತ್ತಿರುವ ಆ ಇನಿಯನ ಸೇರಲು ಇಷ್ಟೂ ತವಕಿಸದಿದ್ದರೆ ಹೆಣ್ಣಾಗಿ ಅದು ತನಗೆ ಅಪಮಾನವೆಂದು ನಿರ್ಧರಿಸಿದವಳಾಕೆ.

  Read more

Latest News

ಬಿಳಿಬಣ್ಣದ ರಾಗಿ ಬಂದೈತೆ ಡುಂ ಡುಂ ಡುಂ!!
ಬಿಳಿಬಣ್ಣದ ರಾಗಿ ಬಂದೈತೆ ಡುಂ ಡುಂ ಡುಂ!!
August 11, 2018

ರಾಜ್ಯದಲ್ಲಿ ರಾಗಿ ಒಂದು ಪ್ರಮುಖ ಆಹಾರ ಬೆಳೆ. ಮಳೆಯಾಶ್ರಿತ ಪ್ರದೇಶದಲ್ಲಿ ಸುಮಾರು 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಒಟ್ಟು ಉತ್ಪಾದನೆ 15.04 ಲಕ್ಷ ಟನ್ ಗಳು ಮತ್ತು ಸರಾಸರಿ ಇಳುವರಿ 2006 ಕೆ.ಜಿ. ಪ್ರತಿ ಹೆಕ್ಟೇರಿಗಿದೆ.

Latest Articles

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos

Latest Blogs

Bhumigeeta Media Pvt. Ltd

HASIRUVASI is the one of its kind Kannada Magazine focusing on Agriculture, Environment, Science and Rural Life.

With Thousands of Subscribers, HASIRUVASI Fortnightly is now the Magazine with Largest Subscriber base an

Contact Us

Bhumigeetha Media Pvt. Ltd.

 • #67/1, 5th Cross, Gurudatta Layout
  Dattatreya Nagar, Hoskerehalli
  Bangalore - 560 085
 • 9448047743 / 96321 07161
 • bhumigeeta.news@gmail.com