ಗಂಗಾತ್ವ ಎಂದರೇನು?

October 11, 2018 ⊄   By: ಡಾ. ಶ್ರೀನಿಧಿ ಹಾಗೂ ಪೂರ್ಣಪ್ರಮತಿ ತಂಡ

ಇಂಟ್ರೋ: ಗಂಗೆಯ ಉಳಿವಿಗಾಗಿ ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮೀಜಿ ನಿರಶನ ಕುಳಿತಿರುವ ಬಗ್ಗೆ ಬಗ್ಗೆ ಹಿಂದಿನ ಸಂಚಿಕೆಯಲ್ಲೇ ವಿಷದ ಪಡಿಸಿದ್ದೇವೆ. ಗಂಗೆಯ ಗಂಗಾತ್ವದ ಕುರಿತು ಸ್ವತಃ ಸ್ವಾಮೀಜಿಯವರು ಬರೆದ ಲೇಖನದ ಮೊದಲ ಭಾಗ ಆ ಸಂಚಿಕೆಯಲ್ಲೇ ಪ್ರಕಟವಾಗಿತ್ತು. ಇದ ಸ್ವಾಮೀಜಿಯವರ ನಿರಶನದ ೫೦ನೇ ದಿನದಂದು ಸಂಗ್ರಹಿಸಿದ ಲೇಖನ. ಈ ಲೇಖನವನ್ನು ಸ್ವಾಮೀಜಿಯವರು ಒಂದು ಹಾಳೆಯ ಇಬ್ಬದಿಯಲ್ಲಿ ಬರೆದು, ಮೂರನೇ ಪುಟವನ್ನು ಖಾಲಿ ಉಳಿಸಿದ್ದರು. ಇನ್ನೂ ಬರೆಯಬೇಕಿತ್ತೋ ಏನೋ! ಏಕೆಂದರೆ ಸೆಪ್ಟೆಂಬರ್ ೨೯ಕ್ಕೆ ಅವರ ನಿರಶನ ತಪಸ್ಸು ೧೦೦ನೇ ದಿನ ದಾಟಿ ಮುಂದುವರಿದಿದೆ. ಇನ್ನೂ ಸರಕಾರವಾಗಲೀ, ಸಂಬಂಧಿಸಿದವರಾಗಲೀ ಎಚ್ಚೆತ್ತು ಸೂಕ್ತ ನಿರ್ಧಾರ ಘೋಷಿಸಿಲ್ಲ ಎಂಬುದು ವಿಷಾದನೀಯ ಸಂಗತಿ.

ಹಿಂದೀ ಮೂಲ: ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮೀಜಿ
ಕನ್ನಡಕ್ಕೆ ಡಾ. ಶ್ರೀನಿಧಿ ಹಾಗೂ ಪೂರ್ಣಪ್ರಮತಿ ತಂಡ

ವಿಷಯವೊಂದರ ಆಳ ಮತ್ತು ವೈಜ್ಞಾನಿಕ ಅರಿವಿನಿಂದ ತಪ್ಪಿಸಿಕೊಳ್ಳುವ (ಸರಕಾರದ ಪರಿಣತರೂ ಸೇರಿದಂತೆ) ನಮ್ಮ ಸಮಾಜ ಇವತ್ತಿನ ದಿನಗಳಲ್ಲಿ ಗಂಗೆಯ ವಿಷಯದಲ್ಲಿ ಈ ನಾಲ್ಕು ಗುಣಗಳಲ್ಲಿ ಮೊದಲೆರಡನ್ನು ಬಹಳವಾಗಿ ಬಳಸುತ್ತಿದೆ. ಅವೆರಡೂ ಒಂದೇ ಏನೋ ಎಂಬಂತೆ. ನನ್ನ ಬಾಲ್ಯದ ದಿನಗಳಲ್ಲಿ ನಾವು ಗಂಗೆಯ ಹಾಗೂ ಗಂಗಾಜಲದ ವಿಷಯದಲ್ಲಿ ಪಾವಿತ್ರ್ಯದ ಬಗ್ಗೆ ಮಾತಾಡುತ್ತಿದ್ದೆವು; ನೈರ್ಮಲ್ಯ ಅಥವಾ ಸ್ವಚ್ಛತೆಯ ಬಗೆಗಲ್ಲ. ವೈಜ್ಞಾನಿಕ ದೃಷ್ಟಿಯಿಂದ ಗಂಗೆಯು ಒಂದು ಜಲಧಾರೆ; ಹಾಗೂ ಈ ಸಂದರ್ಭದಲ್ಲಿ ಗಂಗಾಜಲದಲ್ಲಿನ ಗುಣವತ್ತೆಯ ಬಗೆಯೂ ನಾವು ಮಾತನಾಡಬೇಕು. ಈ ನಾಲ್ಕನ್ನೂ ತಿಳಿಯೋಣ:

(ಕ) ನೈರ್ಮಲ್ಯ:
ಯಾವ ನೀರಿನಲಿ ್ಲಕಣ್ಣಿಗೆ ಕಾಣುವ ಕೊಳೆಯಿಲ್ಲವೋ, ಅರ್ಥಾತ್ ಕಣ್ಣಿಗೆ ಕಾಣುವಂತೆ ಪಾರದರ್ಶಕವಾಗಿ ಬಣ್ಣವಿಲ್ಲದ್ದಾಗಿ ಇರುವುದೋ, ಅದನ್ನು ನಿರ್ಮಲ ಎನ್ನುತ್ತೇವೆ. ಈ ರೀತಿ, ಶುದ್ಧವಾದ ಹಾಲು ಸಹ ನಿರ್ಮಲವಲ್ಲ. ಹಾಗಾಗಿ, ಪಾರದರ್ಶಕವಾದ ತಿಳಿ ಲವಣಗಳಿಂದ, ಆಈಯಿಂದ, ಅಥವಾ ಯಾವುದೇ ಬ್ಯಾಕ್ಟೀರಿಯಾಗಳಿಂದ ನೈರ್ಮಲ್ಯದ ಮೇಲೆ ಪ್ರಭಾವಬೀರುವುದಿಲ್ಲ. ನೈರ್ಮಲ್ಯವನ್ನು ಅಳೆಯುವ ಅಳತೆಗೋಲುಗಳು ಬಣ್ಣ ಮತ್ತು ಟರ್ಬಿಡಿಟಿ.

(ಖ) ಸ್ವಚ್ಛತೆ:
ಇದು ಒಂದು ಭಾವಾತ್ಮಕ ಗುಣ. ಇದರಲ್ಲಿ ಐದೂ ಜ್ಞಾನೇಂದ್ರಿಯಗಳಿಗೆ ಕಾಣುವ ಗುಣಗಳಷ್ಟೇ ಅಲ್ಲ, ಹಿಂದಿನ ಚರಿತ್ರೆಯೂ ಸೇರಿರುತ್ತದೆ. ಆದರೆ ಇದನು ್ನಅಳೆಯಲಾಗುವುದಿಲ್ಲ. ಚೆನ್ನಾಗಿ ಒಗೆದ ಬಟ್ಟೆಯನು ್ನ ಸ್ವಚ್ಛ ಎನ್ನುತ್ತೇವೆ; ನಿರ್ಮಲ ಎಂದಲ್ಲ. ಯಾವ ಪಾತ್ರೆಗೆ ಕೊಳೆ ಮೆತ್ತಿದೆಯೋ ಅಂತಹ ಪಾತ್ರೆಯನ್ನು ಅಥವಾ ಅಂತಹ ಪಾತ್ರೆಯಲ್ಲಿರುವ ನೀರನ್ನು ಸ್ವಚ್ಛ ಎನ್ನುವುದಿಲ್ಲ; ಕಣ್ಣಿಗೇನೋ ಯಾವ ಕೊಳೆಯೂ ಕಾಣದಿರಬಹುದು, ಆದರೂ. ಹೀಗೆ ಸ್ವಚ್ಛತೆ ಎಂಬುದು ನೈರ್ಮಲ್ಯಕ್ಕಿಂತ ತುಂಬಾ ಮುಂದೆ ಹೋಗುತ್ತದೆ - ಕಾಣದ ಕೊಳೆಯನ್ನೂ ಕಾಣುತ್ತದೆ. ಬಹಳ ಸಂಸ್ಕರಣೆ ಅಥವಾ ಸೋಸುವಿಕೆಗಳಿಂದ ನೈರ್ಮಲ್ಯ ಉಂಟಾಗುತ್ತದೆ; ಸ್ವಚ್ಛತೆಯಲ್ಲ. ಆರೋಗ್ಯಕ್ಕಾಗಿ ಬೇಕಾದದ್ದು ಸ್ವಚ್ಛತೆ; ಬರಿಯ ನೈರ್ಮಲ್ಯದಿಂದ ಕೆಲಸ ನಡೆಯದು.

(ಗ) ಪಾವಿತ್ರ್ಯ:
ಇದರ ಅರ್ಥ ಕೊಳೆಯನ್ನು ಪರಿಹರಿಸುವ ಸಾಮರ್ಥ್ಯ ಎಂದು. ಅಂದರೆ, ಬರಿಯ ಕೊಳೆ ಅಥವಾ ಅಸ್ವಚ್ಛತೆ ಇಲ್ಲದಿರುವುದು ಎಂದಷ್ಟೇ ಅಲ್ಲ. ಬಾಲ್ಯದಲ್ಲಿ ನಾವು ಗಂಗಾಜಲವನು ನಪವಿತ್ರ ಎನ್ನುತ್ತಿದ್ದದು ಸುಳ್ಳಲ್ಲ; ಏಕೆಂದರೆ-
೧. ಡಾ. ಡಿ. ಎಸ್. ಭಾರ್ಗವ್ ಅವರ ಸಂಶೋಧನೆ ಪ್ರಕಾರ ಗಂಗೆಯಲ್ಲಿ BOD ಯನ್ನು ನಾಶಪಡಿಸುವ ಸಾಮರ್ಥ್ಯ ಸಾಮಾನ್ಯ ನೀರಿಗಿಂತ ೧೦-೨೫ ಪಟ್ಟು ಅಧಿಕವಾಗಿ ಇದೆ.
೨. NEERIಯ ಸಂಶೋಧನೆಯ ಪ್ರಕಾರ ಮಲದಲ್ಲಿನ ಕಾಲಿಫಾರ್ಮಿ ಜೀವಾಣುಗಳನ್ನು ನಾಶಪಡಿಸುವ ಅದ್ಭುತ ಸಾಮರ್ಥ್ಯ ಗಂಗಾಜಲಕ್ಕಿದೆ.
೩. ಚಂಡೀಗಢದ IMBTಯ ಡಾ. ಎಸ್ಮೈ ಲ್ ರಾಜ್ ಅವರ ಸಂಶೋಧನೆಯ ಪ್ರಕಾರ ಗಂಗೆಯಲ್ಲಿ ಸುಮಾರು ೨೦ ಬಗೆಯ ಜೀವಾಣುಗಳನ್ನು ನಾಶಗೊಳಿಸುವ ಸಾಮರ್ಥ್ಯವಿದೆ.
೪. ಆದಿಶಂಕರಾಚಾರ್ಯ ಹಾಗೂ ತುಳಸೀದಾಸರ ಪ್ರಕಾರ ಗಂಗಾಜಲದಲ್ಲಿ ರೋಗ, ಶಾಪ, ತಾಪಗಳಷ್ಟೇ ಅಲ್ಲ ಪಾಪಕರ್ಮಗಳನ್ನೂ ನಾಶಗೊಳಿಸುವ ಸಾಮರ್ಥ್ಯವಿದೆ; ಅದನ್ನು ಭೌತಿಕವಾಗಿ ತಿಳಿಯಲು ಸಾಧ್ಯವಾಗದಿದ್ದರೂ.
ಕೊಳೆಯನ್ನು ನಾಶಮಾಡುವ ಈ ಸಾಮರ್ಥ್ಯವೇ ಗಂಗಾಜಲದ ವಿಶೇಷಗುಣ; ಇದೇ ಗಂಗೆಯ ಗಂಗಾತ್ವ. ಈ ಗಂಗಾತ್ವವನ್ನು ಹಿಂದಿನಂತೆ ನೆಲೆಗೊಳಿಸುವುದೇ Ganga Rejuvenation ಇದನ್ನು ಸಂರಕ್ಷಿಸುವುದೇ ಗಂಗಾಮಾತೆಯ conservation. ನೆನಪಿರಲಿ, ಈ ಪವಿತ್ರತೆಯ ಅಲ್ಪ-ಸ್ವಲ ್ಪಅಂಶಗಳನ್ನಾದರೂ ಅಳತೆ ಮಾಡಲು ಸಾಧ್ಯವಿದೆ.(ಘ) ಗುಣವತ್ತತೆ:

ಗಂಗೆಯ ವಿಷಯದಲ್ಲಿ ಬರಿಯ ನೈರ್ಮಲ್ಯಅಥವಾ ಸ್ವಚ್ಛತೆಯ ಬಗೆ ್ಗಮಾತಾಡುವುದು ವ್ಯರ್ಥವಷ್ಟೇ ಅಲ್ಲ, ಗಂಗೆಗೆ ಮಾಡುವ ಘೋರ ಅಪಮಾನ ಎಂಬುದು ಈ ಮೇಲಿನ ಚರ್ಚೆಯಿಂದ ಸ್ಫುಟವಾಗುತ್ತದೆ. ಬಾವಿ, ಕೆರೆ, ಸರೋವರಗಳ, ಅಷ್ಟೇ ಯಾಕೆ ಬಾಟಲಿಯ ನೀರೂ ನಿರ್ಮಲವಾಗಿದ್ದೀತು. ಹಾಗಾದಾಗ, ಅದೂ ಗಂಗಾ ಜಲವಾದೀತೇ? ಗಂಗಾ ಜಲ ಹಾಗೂ ಅದರ ಮಣ್ಣು, ಮರಳು, ಕಣಗಳ ಗುಣಗಳನ್ನು ಪರೀಕ್ಷಿಸಲು ನಮಗೆ ಉಪಯುಕ್ತವಾದ ಅಳತೆಗೋಲುಗಳನ್ನು ಹಾಗೂ ಅವುಗಳ ಒಪ್ಪಲರ್ಹವಾದ ಸೀಮೆಗಳನ್ನು ನಿಶ್ಚಯಿಸಬೇಕು.ಇದರಲ್ಲಿ pH (acidity), turbidity, DO (Dissolved Oxygen,), TDS (Total Dissolved solids), BOD (Biological Oxygen Demand), COD (chemical Oxygen Demand), Coliform MPN (most probable Number) ಮೊದಲಾದ ಸಾಮಾನ್ಯ ಜಲದ ಗುಣವತ್ತತೆಯನ್ನು ಗುರುತಿಸುವ ಅಳತೆಗಳಂತೂ ಇದ್ದೇ ಇರುತ್ತವೆ (ಆದರೂ, ಅವುಗಳ ಒಪ್ಪಲರ್ಹವಾದ ಸೀಮೆಗಳು ಬದಲಾಗಬಹುದು). ಆದರೆ, ಇದರ ಜೊತೆಜೊತೆಗೆ ಗಂಗಾತ್ವದ ವಿಶೇಷತೆಗಳನ್ನೂ ಅಳೆಯುವಂತಹವೂ ಬೇಕು- ಉದಾಹರಣೆಗೆ, ಈ OD Destruction Rate Constant, Re & oxidation Rate Constant, coliphage types and density, phages for clinical pathogens & phages for clinical pathogens & types and density. ಈ ಎಲ್ಲದರ ಬಗ್ಗೆ ವಿಸ್ತೃತೃತವಾದ ಸಂಶೋಧನೆಗಳ ಆವಶ್ಯಕತೆಯಿದೆ. ಗಂಗಾ rejuvenation ಅಥವಾ conservation ಗಾಗಿ ಉಪಲಬ್ಧವಿರುವ ಹಣದ, ಕನಿಷ್ಠ ೧೦% ಹಣವನ್ನಾದರೂ ಈ ಸಂಶೋಧನ ಕಾರ್ಯಗಳಿಗೆ ವಿನಿಯೋಗಿಸಬೇಕು; ಇದರಿಂದ ಮುಂದಿನ ವ್ಯವಸ್ಥಾಪನೆಗಳ ಕಾರ್ಯಕ್ರಮಗಳ ಸ್ವರೂಪವನ್ನು ನಿರ್ಧರಿಸಬಹುದು.೨. ಗಂಗೆಯ ಪವಿತ್ರತೆ-ಗುಣವತ್ತತೆಗಳಿಗೆ (ಹೇಳಲಾಗುತ್ತಿರುವ ನಿರ್ಮಲತೆ/ಸ್ವಚ್ಛತೆಗಳಿಗೆ) ಕೈಗೊಳ್ಳಬೇಕಾದ ಕಾರ್ಯಗಳು
(ಕ) ಗಂಗೆಯಲ್ಲಿನ ಪವಿತ್ರತೆಯೇ ಆಕೆಯ ವಿಶೇಷ ಗುಣ. ಈ ಗಂಗಾತ್ವವೆಲ್ಲವೂ ಹಿಮಾಲಯದಿಂದ ಬರುತ್ತದೆ; ಇದು ಒಮ್ಮೆ ನಶಿಸಿದರೆ ಅಥವಾ ಕಡಿಮೆಯಾದರೆ ನಾವದನ್ನು ಹುಟ್ಟಿಸಲಾರೆವು ಅಥವಾ ಬೆಳೆಸಲಾರೆವು; ಆಗುವುದಾಗಿದ್ದರೆ ಗಂಗಾಜಲವನ್ನು ಉತ್ಪತ್ತಿ ಮಾಡುವ ಫ್ಯಾಕ್ಟರಿಗಳೇ ಹುಟ್ಟಿಕೊಂಡಾವು ಎಂಬೀ ಅಂಶವನ್ನು ತಿಳಿಯಬೇಕು ಹಾಗೂ ದೃಢಮನಸ್ಸಿನಿಂದ ಒಪ್ಪಬೇಕು.ಗಂಗೆಯಲ್ಲಿನ ಗಂಗಾತ್ವವನ್ನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಋತುಗಳಲ್ಲಿ ಅಳೆಯಬೇಕು; ಇವುಗಳಲ್ಲಿ ಯಾವುದು ಯಾವ ಕಾರಣದಿಂದ ಬರುತ್ತದೆ ಎಂಬುದನ್ನು ಅರಿಯಬೇಕು; ಹಾಗೂ ಅರಿವಿನ ಆಧಾರದ ಮೇಲೆ ವ್ಯವಸ್ಥೆಗಳನ್ನು ನಿಶ್ಚಯಿಸಬೇಕು.

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.

Photos

ರೆಕ್ಕೆ ಇದ್ದರೆ ಸಾಕೆ...

Videos