ಕಿಸಾನ್ ಕ್ರೆಡಿಟ್ ಕಾರ್ಡ್

June 06, 2018 ⊄   By: ದೀಪ್ತಿ ಚಾಕೋಟೆ

ಬ್ಯಾಂಕು ,ಅದರ ವಿಧಿ ವಿಧಾನಗಳು ಭಾರತೀಯ ರೈತರಿಗೆ ತುಸು ಕಬ್ಬಿಣದ ಕಡಲೆಯೇ . ಬಂಡವಾಳಶಾಹಿಗಳ , ಮಧ್ಯವರ್ತಿಗಳ ದಬ್ಬಾಳಿಕೆಗೆ ರೈತ ಬಲಿಯಾಗುತ್ತಲೇ ಇದ್ದಾನೆ . ಸಾಲ ಮಾಡಿ ಅದರ ಬಡ್ಡಿ , ಚಕ್ರಬಡ್ಡಿ ಎರಡಕ್ಕೂ ಸಿಲುಕಿ ನೇಣಿಗೆ ಶರಣಾಗುತ್ತಾನೆ .ಹಾಗಾದರೆ ರೈತನಿಗೆ ಹೊಲದಲ್ಲಿ ಬೆಳೆ ಎದ್ದು ನಿಲ್ಲುವಾಗ ಆರ್ಥಿಕವಾಗಿ ರೈತನ ಜೊತೆ ನಿಲ್ಲುವರಾರು ? ಅದಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಯೋಜನೆಯನ್ನು 1998ರಲ್ಲಿ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಜಾರಿಗೆ ತಂದಿತು . ದೇಶದ ಸಹಕಾರಿ ಬ್ಯಾಂಕುಗಳಲ್ಲಿ , ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲೂ ಭಾರತದ ಯಾವುದೇ ರೈತನಿಗೂ ಕೆಲವು ನಿಯಮಗಳಿಗನುಸಾರವಾಗಿ ನೀಡಲಾಗುತ್ತಿದೆ .

ಕಿಸಾನ್ ಕ್ರೆಡಿಟ್ ಕಾರ್ಡ್
ರೈತರ ಬೆಳೆಗೆ ಬೆಂಬಲವಾಗಿ ಕಡಿಮೆ ಬಡ್ಡಿಯೊಂದಿಗೆ ಈ ವ್ಯವಸ್ಥೆ ಆರ್ಥಿಕವಾಗಿ ನೆರವಾಗಬಲ್ಲದು . ಕೊಯ್ಲಾದ ನಂತರ ರೈತ ಹಣ ಪಾವತಿಸಬೇಕಾಗುತ್ತದೆ . ಒಂದು ವೇಳೆ ಈ ವರ್ಷ ಒಳ್ಳೆಯ ಫಸಲು ಬರದಿದ್ದರೆ ಬಡ್ಡಿ ಕಟ್ಟಿ ನಂತರವೂ ಪಾವತಿಸಬಹುದು .ಉಳಿದ ಎ.ಟಿ.ಎಂ ಕಾರ್ಡ್’ಗಳಂತೆಯೇ ಇರುವ ಇವುಗಳಲ್ಲಿ ಎರಡು ವಿಧ
1.ಕ್ಯಾಶ್ ಕ್ರೆಡಿಟ್ : ಬೀಜಗಳ ಖರೀದಿಗೆ , ಗೊಬ್ಬರ , ಕೀಟನಾಶಕಗಳ ಖರೀದಿಗೆ , ನೀರಾವರಿ ವ್ಯವಸ್ಥೆಗೆ , ಕೊಯ್ಲಿನ ಮುಂಚೆಯೂ , ನಂತರವೂ ನೆರವಾಗುವಂತದ್ದು
2.ಟರ್ಮ್ ಕ್ರೆಡಿಟ್ : ಪಂಪ್ ಸೆಟ್ , ಜಮೀನು ಅಭಿವೃದ್ದಿಗೆ , ಸಮ್ಮಿಶ್ರ ಚಟುವಟಿಕೆಗಳಿಗೆ ನೆರವಾಗುವಂತವು.ಕಿಸಾನ್ ಕ್ರೆಡಿಟ್ ಕಾರ್ಡ್ ಲಾಭಾಂಶ
-ಸಣ್ಣ , ಕನಿಷ್ಠ ,ಪಾಲು ಬೆಳೆಗಾರರಿಗೂ ಲಭ್ಯ
-ಸರಳ ಹಾಗೂ ತ್ವರಿತ ವಿಧಾನಗಳು
-ಒಂದೇ ದಾಖಲೆ ಪತ್ರ ಪರಿಶೀಲನೆಯೊಂದಿಗೆ ಕಾರ್ಡ್ ಒದಗುತ್ತದೆ
-ಕಾರ್ಡ್ ಮೂಲಕ ಹಣ ಪಡೆದುಕೊಳ್ಳಬಹುದು
-ಬೆಳೆಗಾರನ ಜಮೀನು , ಆದಾಯ ಹಾಗು ಸಾಲಗಳ ಇತಿಹಾಸ ಪರಿಶೀಲಿಸಿ ಕಾರ್ಡ್ ವಿತರಿಸುವುದು
-ಕೊಯ್ಲೋತ್ತರದ ನಂತರ ಮರುಪಾವತಿಸಬಹುದು , ಒಂದು ವೇಳೆ ಇಳುವರಿ ಕಡಿಮೆ ಇದ್ದರೆ ಬಡ್ಡಿ ಕಟ್ಟಿ ನಂತರವೂ ಪಾವತಿಸಬಹುದು
-ಬ್ಯಾಂಕ್ ಕಾರ್ಯವಿಧಾನಗಳ ಪರಿಚಯವಿಲ್ಲದವರಿಗೆ ಸಾಲ ತೆಗೆದುಕೊಳ್ಳಲು ಸರಳ ವಿಧಾನ ಕಿಸಾನ್ ಕ್ರೆಡಿಟ್ ಕಾರ್ಡ್
-ಈಗ ಕಾರ್ಡುಗಳನ್ನು ರೈತರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲಾಗಿದ್ದು ಖಾತೆಯ ಮೊತ್ತದೊಂದಿಗೆ ರೈತನಿಗೆ ಬಡ್ಡಿಯ ಮೊತ್ತವೂ ದೊರಕುತ್ತದೆ
-ಅತೀ ಕಡಿಮೆ ಬಡ್ಡಿಯೊಂದಿಗೆ ಸಾಲ ದೊರಕುತ್ತದೆ
-ಆಕಸ್ಮಿಕ ಅಪಘಾತದ ಸಮಯದಲ್ಲಿ ೫೦೦೦೦ ಹಾಗೂ ಮರಣೋತ್ತರವಾಗಿ ೨೫೦೦೦ವರೆಗೂ ನೆರವಾಗುತ್ತದೆ .

ಕಾರ್ಯವೈಖರಿ
ಬೆಳೆಗಾರರಿಗೆ ಸಾಲವನ್ನು ಕಾರ್ಡ್ ಮೂಲಕ ಅಥವಾ ಪಾಸ್ಬುಕ್ ಮೂಲಕ ಪಡೆದುಕೊಳ್ಳಬಹುದು . ೨೫೦೦೦ ಮಿತಿಯಿರುವ ಕಾರ್ಡ್ ಹೋಲ್ಡರ್ಗಳಿಗೆ ಚೆಕ್ ಪುಸ್ತಕ ಸೌಲಭ್ಯವೂ ಇದೆ . ಬೇರೆ ಎ.ಟಿ.ಎಂ , ಅಥವಾ ವಿಮೆಯ ಕಾರ್ಡ್ಗಳು ಹೇಗೆ ಕೆಲಸ ಮಾಡುತ್ತವೋ ಅದೇ ಕಾರ್ಯವೈಖರಿ ಕಿಸಾನ್ ಕಾರ್ಡಿನದ್ದೂ ಕೂಡ
ಸಾಲಗಳ ಮೇಲಿನ ಬಡ್ಡಿ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ . ಕಿಸಾನ್ ಕ್ರೆಡಿಟ್ ಕಾರ್ಡ್ ಸರಾಸರಿ ವಾರ್ಷಿಕ ಬಡ್ಡಿ 7-9 % , ಕ್ರೆಡಿಟ್ ಮಿತಿ 3 ಲಕ್ಷ . ಸಾಲ ಮರುಪಾವತಿಸಬಲ್ಲ ಎಂಬ ದೃಡತೆ ಇದ್ದಾರೆ ಆತನಿಗೆ ಸಬ್ಸಿಡಿ ವ್ಯವಸ್ಥೆಗಳೂ ಇದೆ
ಕಿಸಾನ್ ಕ್ರೆಡಿಟ್ ಕಾರ್ಡ್ ವಿಮೆ
ವಿಮೆ ಬೇಕಾದ್ದಲ್ಲಿ ಬೆಳೆಗಾರನ ವಯಸ್ಸು 70ಕ್ಕಿಂತ ಕಡಿಮೆಯಾಗಿರಬೇಕು
ಆಕಸ್ಮಿಕ ಅಪಘಾತದ ಸಮಯದಲ್ಲಿ ಆರ್ಥಿಕವಾಗಿ ನೆರವಾಗಬಲ್ಲದು
ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಬ್ಯಾಂಕುಗಳು
ನಾಬಾರ್ಡ್ : ಅತೀ ಕಡಿಮೆ ಬಡ್ಡಿಯೊಂದಿಗೆ ಕಾರ್ಡ್ ನೀಡಿ ಸಾಲ ಕೊಡಬಲ್ಲದು
ಎಸ್.ಬಿ.ಐ : ಕೃಷಿ ಖರ್ಚು ವೆಚ್ಚಗಳಿಗೆ ಸಹಾಯ ಮಾಡಬಲ್ಲದು
ಎಸ್.ಬಿ.ಐ ಮಿತಿ – ೫೦೦೦೦ ಬೆಳೆಗಾರನ ಆದಾಯದ ಅನುಗುಣವಾಗಿ
ಮರುಪಾವತಿಸಲು ಗಡುವು – 12 ತಿಂಗಳು
ಆಕ್ಸಿಸ್ ಬ್ಯಾಂಕ್ : ಕ್ಯಾಶ್ ಹಾಗು ಟರ್ಮ್ ಕ್ರೆಡಿಟ್ ಸೌಲಭ್ಯ ಇದೆ .
ಗಡುವು – 12 ತಿಂಗಳು (ಕ್ಯಾಶ್ ಕ್ರೆಡಿಟ್ ) , 7 ವರ್ಷ (ಟರ್ಮ್ ಕ್ರೆಡಿಟ್ )
ಬಡ್ಡಿ ದರ : 9.90 – 13.65 %
ಹೀಗೆ ಐ.ಡಿ.ಬಿ.ಐ , ಇಂಡಿಯನ್ ಒವೆರಸೀಸ್ ಬ್ಯಾಂಕ್ , ಐ.ಸಿ.ಐ.ಸಿ.ಐ ಬ್ಯಾಂಕ್ , ವಿಜಯಾ ಬ್ಯಾಂಕ್ , ಆಂಧ್ರ ಬ್ಯಾಂಕ್ ,ಗ್ರಾಮೀಣ ಬ್ಯಾಂಕ್ಗಳಲ್ಲೂ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ ಇದೆ .
Share This :
  •  
  •  

Readers Comments (0) 

COMMENT

Characters Remaining : 1000