ಥ್ರೀ ಇನ್ ಒನ್ ಸಮುದ್ರ ಕುದುರೆ!

August 08, 2018 ⊄   By: ಜೀವ್ ರಾಜ್ ಭಟ್

ಮುಖ-ಕುದುರೆಯಂತೆ, ದೇಹ-ಕಂಬಳಿ ಹುಳುವಿನಂತೆ, ಬಾಲ-ಹಲ್ಲಿಯಂತೆ ಇರುವ ಕಡಲ ಪ್ರಪಂಚದ ಅಪಪರೂಪದ ಜೀವಿ. ಹೆರಿಗೆ ನೋವು ಅನುಭವಿಸಿ ಮಕ್ಕಳನ್ನು ಹೆತ್ತು, ಹೆರುವ ಗಂಡು, ಅದೂ ಏಕ ಪತ್ನಿ ವೃತಸ್ಥ ಎನಿಸಿಕೊಂಡಿರುವ ಸಮುದ್ರ ಕುದುರೆ- ಸೀ ಹಾರ್ಸ್ ಅಥವಾ ಹಿಪ್ಪೊ ಕೆಂಪಸ್. ಇದೊಂದು ಜಾತಿಯ ಮೀನು.
ಸಮುದ್ರ ಕುದುರೆಯ ಎತ್ತರ 2ರಿಂದ 30 ಸೆಂ.ಮೀ. ಆಯಸ್ಸು-1ರಿಂದ 5 ವರ್ಷ. ಸಮುದ್ರದಲ್ಲಿನ ಗಿಡ ಎಲೆಗಳ ಹಿನ್ನೆಲೆಗೆ ಹೊಂದಿಕೊಂಡು ಮೈ ಬಣ್ಣ ಮತ್ತು ವಿನ್ಯಾಸವನ್ನು ಉಸರವಳ್ಳಿಯಂತೆ ಬದಲಿಸುವ ವಿಶಿಷ್ಟ ಸಾಮಥ್ರ್ಯ ಸಮುದ್ರ ಮೀನಿಗೂ ಇದೆ. ಸಮುದ್ರ ಕುದುರೆಗಳಲ್ಲಿ ಸುಮಾರು 40 ರಿಂದ 50 ವಿಧಗಳಿವೆ. ಸಮುದ್ರ ಹುಲ್ಲು ಹವಳದ ದ್ವೀಪ ಇವುಗಳಿಗೆ ಇಷ್ಟದ ತಾಣ. ಇವು ಹೆಚ್ಚಾಗಿ ಉಷ್ಣ ಮತ್ತು ಸಮಶೀತೋಷ್ಣ ಹವೆ ಇರುವ ಸಮುದ್ರದಲ್ಲಿ ಕಂಡುಬರುತ್ತದೆ.

• ಮಕ್ಕಳನ್ನು ಹೆರುವ ಗಂಡು
ಗಂಡು ಸಮುದ್ರ ಕುದರೆ ಹೆಣ್ಣಿನಂತೆಯೇ ಗರ್ಭಧರಿಸಿ ಮರಿಗಳನ್ನು ಹೆರುತ್ತದೆ. ಗಂಡು ಸಮುದ್ರ ಕುದುರೆಯ ಹೊಟ್ಟೆಯ ಭಾಗ ಚೀಲದಂತಹ ಗರ್ಭಕೋಶ ಹೊಂದಿರುತ್ತದೆ. ಹೆಣ್ಣು ಗಂಡಿನೊಡನೆ ಮಿಲನದ ಬಳಿಕ ತನ್ನ ಅಂಡಕೋಶವನ್ನು ಗಂಡಿನ ಗರ್ಭಚೀಲಕ್ಕೆ ವರ್ಗಾಯಿಸುತ್ತದೆ. ಗಂಡು ತನ್ನ ರೇತ್ರಾಣುಗಳ ಮೂಲಕ ಅಂಡವನ್ನು ಫಲಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೆ ಬೇಕಾದ ಎಲ್ಲಾ ಜೀವಸತ್ವಗಳನ್ನು ಪೂರೈಸಿ ಮೂರುವಾರಗಳ ಬಳಿಕ ಪೂರ್ಣರೂಪದಲ್ಲಿ ಬೆಳವಣಿಗೆಯಾದ 50 ರಿಂದ 1000 ಮರಿಗಳಿಗೆ ಗಂಡು ಜನ್ಮ ನೀಡುತ್ತದೆ. ಹೆಣ್ಣು ಕುದುರೆ ಪ್ರತಿದಿನ ಗರ್ಭಹೊತ್ತ ಗಂಡಿನ ಕುಶಲೋಪರಿ ವಿಚಾರಿಸುತ್ತದೆ. ಪ್ರಸವದ ಎರಡುದಿನಗಳ ಬಳಿಕ ಗಂಡುಕುದರೆ ಮತ್ತೆ ಗರ್ಭಧರಿಸಲು ತಯಾರಾಗುತ್ತಾನೆ. ತನ್ನ ಗರ್ಭಕೋಶ ಬರಿದಾಗಿದೆ ಎಂದು ತೋರಿಸಲು ಚೀಲದಿಂದ ನೀರನ್ನು ಹೊರ ಚಿಮ್ಮಿಸಿ, ನೃತ್ಯಮಾಡಿ ಸಂಪ್ರದಾಯಂತೆ ಸಂಗಾತಿಯನ್ನು ಒಲಿಸಿಕೊಳ್ಳುತ್ತದೆ.
ಹೊಟ್ಟೆಯಿಲ್ಲದಿದ್ದರೂ ತಿಂಡಿ ಪೋತ
ಸಮುದ್ರ ಕುದುರೆಗೆ ಹೊಟ್ಟೆ ಇಲ್ಲ. ಹೀಗಾಗಿ ಏನಾದರೂ ತಿನ್ನುತ್ತಲೇ ಇರಬೇಕು. ಸಮಾನ್ಯವಾಗಿ ಸಮುದ್ರ ಕುದುರೆಗಳು ಮೀನಿನ ಮೊಟ್ಟೆ ಮತ್ತು ಸಣ್ಣಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ. ಸತ್ತ ಪ್ರಾಣಿಗಳನ್ನು ಇವು ತಿನ್ನುವುದಿಲ್ಲ. ಸಮುದ್ರ ಮೀನಿಗೆ ಬೇಟೆಯಾಡಲು ಬರುವುದಿಲ್ಲ. ಅಡಗಿ ಕುಳಿತು ನುಂಗುವ ಸಮುದ್ರ ಮೀನು ಬರೀ ತಿಂಡಿಪೋತ. ಇವುಗಳ ಮೈ ಇತರ ಮೀನುಳಂತೆ ನುಣುಪಾದ ಪೊರೆಯ ಬದಲಾಗಿ ಒರಟಾದ ಚರ್ಮದಿಂದ ಮಾಡಲ್ಪಟ್ಟಿವೆ.ಇವುಗಳ ದೇಹ ಒರಟಾಗಿರುವ ಕಾರಣ ಮೀನು ಹಾಗೂ ಪ್ರಾಣಿಗಳು ಇದನ್ನು ತಿನ್ನಲು ಇಷ್ಟ ಪಡುವುದಿಲ್ಲ.
ಒತ್ತಡಗಳಿಗೆ ಒಳಗಾದಾಗ ಮತ್ತು ಪರಿಸರದಿಂದ ಮರೆಮಾಚಿಕೊಳ್ಳಲು ಮೈಬಣ್ಣ ಬದಲಿಸಿಕೊಳ್ಳುತ್ತವೆ. ಅಲ್ಲದೇ ಹವಳದ ದಂಡೆಗಳಲ್ಲಿ ಮತ್ತು ಸಮುದ್ರ ಹುಲ್ಲುಗಲ್ಲಿ ಅಡಗಿಕೊಳ್ಳಲ್ಲವು. ಆದುದರಿಂದಲೇ ಇವು ಸುರಕ್ಷಿತ ಜೀವಿಗಳು.• ಓಡಲು ಬಾರದ ಕುದುರೆ
ಈ ಸಮುದರ ಜೀವಿ ಶಾಂತಿ ಪ್ರೀಯ. ಬೇಗನೆ ಈಜಲು ಬಾರದವ. ಕುದುರೆ ಎಂಬ ಹೆಸರಿದ್ದರೂ ಓಟದಲ್ಲಿ ಇವು ಭಾರೀ ಹಿಂದೆ. ಕಡಲ ಜೀವಿಗಳಲಲ್ಲಿ ಸಮುದ್ರ ಕುದುರೆಗಳ ಚಲನೆ ಅತ್ಯಂತ ನಿಧಾನ. ಗಂಟೆಗೆ ಕೇವಲ 5 ಅಡಿ ದೂರರನ್ನು ಮಾತ್ರ ಚಲಿಸಬಲ್ಲದು. ಕೆಲವು ಸಮದ್ರ ಕುದುರೆಗಳು ಅಷ್ಟು ದೂರವನ್ನೂ ಕ್ರಮಿಸಲಾರವು.
• ಭಾರೀ ಬೇಡಿಕೆ
ಔಷಧಕ್ಕಾಗಿ ಆಗ್ನೇಯ ಏಷ್ಯಾ ಮತ್ತು ಚೀನಾದಲ್ಲಿ ಸಮುದ್ರ ಮೀನಿಗೆ ಭಾರೀ ಬೇಡಿಕೆ. ಅಕ್ವೇರಿಯಂನಲ್ಲಿ ಅಂದದ ಮೀನುಗಳನ್ನು ಸಾಕುವಂತೆ ಇವುಗಳನ್ನು ಸಾಕಲಾಗುತ್ತದೆ. ವಿಷಾದದ ಸಂಗತಿಯೆಂದರೆ ಹೆರುವ ಹೊರುವ ವಿಶಿಷ್ಟ ಸ್ವಭಾವದ ಈ ಗಂಡು ಅಪಾಯದ ಅಂಚಿನಲ್ಲಿದ್ದಾನೆ.Share This :
 •  
 •  

Readers Comments (2) 

 • Basanagouda H hanchinamani


  24/11/2018
  Good
  Array" />
  Characters Remaining : 1000

 • Basanagouda H hanchinamani


  24/11/2018
  Good

COMMENT

Characters Remaining : 1000