ಭವಿಷ್ಯದಲ್ಲಿ ನೀರೇ ಇರುವುದಿಲ್ಲ

March 28, 2019 ⊄   By: ನಾಗರಾಜ ಜಿ ನಾಗಸಂದ್ರ

ನಿಮಗೆ ಗೊತ್ತೆ ಭೂಮಿಯಲ್ಲಿ ಅಗಾಧ ಪ್ರಮಾಣದ ನೀರಿದ್ದರೂ ಬಳಕೆಗೆ ಶೇ 100 ರಲ್ಲಿ 4.5 ರಷ್ಟು ಮಾತ್ರ ಯೋಗ್ಯವಾಗಿದೆ. ಉಳಿದ 95.5ರಷ್ಟು ನೀರು ಸಾಗರಗಳಲ್ಲಿ ಸಂಗ್ರಹವಾಗಿದೆ.
ಭೂಮಿಯಲ್ಲಿ ಶೇ 71 ರಷ್ಟು ನೀರಿದ್ದರೂ ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ನೀರಿನ ಆಹಾಕಾರ ಕೇಳಿಬರುತ್ತದೆ. ನೀರಿನ ಅಭಾವ ಮಾನವಕುಲಕ್ಕೆ ಮಾತ್ರವಲ್ಲದೆ ಸಕಲ ಜೀವರಾಶಿಗೂ ಕೊರತೆ ಎದುರಾಗಿದೆ. ಮಾನವನ ಅತಿಯಾದ ಆಸೆಯಿಂದ ನೀರು ವಿಷವಾಗಿ ಜೀವರಾಶಿಗೂ ಆಪತ್ತು ತರುತ್ತಿದ್ದಾನೆ.

ಇರುವ ಶುದ್ಧ ನೀರಿನ ಪ್ರಮಾಣದ ಸಾಕಾಗುವುದಿಲ್ಲವೆ? ಎನ್ನುವ ಪ್ರಶ್ನೆ ಮೂಡುತ್ತದೆ. ದೊರೆಯುವ ಶುದ್ಧ ನೀರನ್ನು ಸೂಕ್ತ ರೀತಿಯಲ್ಲಿ ಬಳಸಿದಲ್ಲಿ ಅದಷ್ಟೇ ಸಾಕಾಗುತ್ತದೆ. ಆದರೆ ಮಾನವನ ಅತಿಯಾಸೆ ನೀರಿನ ದುರ್ಬಳಕೆ ನೀರಿನ ಕೊರತೆಗೆ ಕಾರಣವಾಗುತ್ತಿದೆ. ಏರುತ್ತಿರುವ ಜನಸಂಖ್ಯೆಯ ಅಗತ್ಯತೆಗಳು ಹೆಚ್ಚುತ್ತಿವೆ. ಅಂದರೆ ಆಹಾರ, ವಸತಿ, ಬಟ್ಟೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ನೀರಿನ ಬಳಕೆ ಹೆಚ್ಚುತ್ತಿದೆ. ಉದಾಹರಣೆಗೆ ಆಹಾರದ ಬೇಡಿಕೆ ಪೂರೈಸಲು ಹೆಚ್ಚಿನ ಪ್ರಮಾಣದ ಆಹಾರ ಉತ್ಪಾದನೆ ಅಗತ್ಯ. ಹಾಗೆ ಉತ್ಪಾದಿಸಲು ಹೆಚ್ಚಿನ ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ. ಆಗ ಕೃಷಿಗೆ ಅಗತ್ಯವಾದ ನೀರಿನ ಬಳಕೆ ಹಚ್ಚುತ್ತದೆ. ಹಾಗೆ ನೀರಿನ ಅವಲಂಬನೆ ಹೆಚ್ಚಾಗಿ ನೀರಿನ ಸಮಸ್ಯೆ ಉಂಟಾಗುತ್ತದೆ. ಅದಷ್ಟೇ ಅಲ್ಲದೆ ಅಗತ್ಯಕ್ಕೆ ಮೀರಿ ಮಾಡುವ ಬಳಕೆಯೂ ನೀರಿನ ಕೊರತೆಗೆ ಕಾರಣವಾಗಿದೆ.ನೀರು ಒಂದು ಅಮೂಲ್ಯವಾದ ವಸ್ತು. ಎಲ್ಲಾ ಜೀವಿಗಳ ಜೀವನಾಧಾರ.ಅಂತಹ ನೀರನ್ನು ಮಾನವನ ಸ್ವಯಂಕೃತ ಅಪರಾಧಗಳಿಂದ ಇರುವ ಅಲ್ಪ ಪ್ರಮಾಣದ ಶುದ್ಧ ಕುಡಿಯುವ ನೀರನ್ನು ಕಲುಷಿತಗೊಳಿಸುವ ಮೂಲಕ ತನಗರಿವಿಲ್ಲದೇನೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆಂದರೆ ತಪ್ಪಾಗಲಾರದು. ಕೃಷಿ ಭೂಮಿಯಲ್ಲಿ ಬಳಸುವ ರಾಸಾಯನಿಕಗಳು ಭೂಮಿಯಲ್ಲಿ ಬೆರೆತು ನಿಧಾನವಾಗಿ ಮಳೆಯ ನೀರಿನೊಂದಿಗೆ ಭೂಗರ್ಭ ಸೇರುತ್ತಿದೆ. ಇದರಿಂದ ಮಣ್ಣು ಕಲುಷಿತವಾಗುವುದಲ್ಲದೆ ಮಳೆಯ ನೀರಿನೊಂದಿಗೆ ಭೂಮಿಯಲ್ಲಿ ಹಿಂಗಿ ಅಂತರ್ಜಲಕೂಡ ಕಲುಷಿತವಾಗುತ್ತಿದೆ. ಇನ್ನು ಕಾರ್ಖಾನೆಗಳಲ್ಲಿನ ರಾಸಾಯನಿಕಗಳು ಮಿತಿಯಿಲ್ಲದೆ ನೀರಿನ ಆಕರಗಳನ್ನು ಸೇರಿಸುತ್ತಿವೆ. ಆದ್ದರಿಂದ ಕೆರೆ, ನದಿ, ಹಳ್ಳ ತೊರೆಗಳ ನೀರು ಬಳಕೆ ಮಾಡಲಾಗದ ಸ್ಥಿತಿ ತಲುಪಿವೆ. ಆದ್ದರಿಂದಲೇ ನಗರಗಳ ಕೆರೆಗಳಲ್ಲಿನ ನೀರು ಸಂಪೂರ್ಣ ಕಲುಷಿತಗೊಂಡು ಮೀನುಗಳ ಸಾಮೂಹಿಕ ಸಾವುಗಳು ಸಂಭವಿಸುತ್ತಿವೆ. ಅದಷ್ಟೇ ಅಲ್ಲದೆ ನೀರಿನಲ್ಲಿ ರಾಸಾಯನಿಕಗಳು ಮನುಷ್ಯನ ಆರೋಗ್ಯದ ಮೇಲು ಪ್ರಭಾವ ಬೀರುತ್ತದೆ. ಪ್ರೋರೊಸಿಸ್ ನಂತಹ ರಾಸಾಯನಿಕ ಗುಣಪಡಿಸಲಾಗದಂತಹ ಮೂಳೆ ಸವೆತವನ್ನು ಉಂಟುಮಾಡುತ್ತವೆ. ಹಲವು ಬಾರಿ ಕೆರೆ ನೀರಿನಲ್ಲಿನ ರಾಸಾಯನಿಕಗಳು ಹೊತ್ತಿ ಉರಿದಿರುವ ಉದಾಹರಣೆಗಳು ಇವೆ. ಆದರಿಂದ ಮನುಷ್ಯ ಮಾತ್ರರಿಗಲ್ಲದೆ ಜಲಚರಗಳಿಗಂತೂ ಕಲುಷಿತ ನೀರು ಸಾವಿನ ಮನೆಗಳಾಗಿ ಬದಲಾಗುತ್ತಿವೆ.ಈ ಎಲ್ಲದರ ಪರಿಣಾಮ ನಾವು ಕೆಲ ವರ್ಷಗಳ ಹಿಂದೆ ನದಿ, ಕರೆ ಹಾಗೂ ಹಳ್ಳಗಳ ನೀರನ್ನು ಬಳಸುತ್ತಿದ್ದರು. ಆ ನಂತರದ ದಿನಗಳಲ್ಲಿ ತೆರೆದ ಬಾವಿಗಳಲ್ಲಿನ ನೀರನ್ನು ಬಳಸುತ್ತಿದ್ದೆವು. ನಂತರ ಕೊಳವೆ ಬಾವಿಗಳ ನೀರನ್ನು ಅವಲಂಬಿಸಬೇಕಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಆ ನೀರು ಕೂಡ ಬಳಸಲಾಗದ ಹಂತ ತಲುಪಿದೆ. ಆದ್ದರಿಂದಲೆ ಪ್ರತಿ ಹಳ್ಳಿಯಲ್ಲೂ ಫಿಲ್ಟರ್ ಗಳು ತಲೆಯೆತ್ತಿವೆ. ಇದೇ ಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಶುದ್ಧ ನೀರಿನ ಅಭಾವ ಉಂಟಾಗಿ ಇಡೀ ಜೀವ ಸಂಕುಲವೇ ನಾಶವಾಗುತ್ತದೆ. ಇದೆಲ್ಲದಕ್ಕೂ ಮಾನವನ ಅತಿಯಾಸೆಯೇ ಕಾರಣ.ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆಯುಂಟಾಗಿ ಸಾವಿರಾರು ಅಡಿಗಳ ಆಳದ ಕೊಳವೆಬಾವಿಗಳನ್ನು ಅವಲಂಬಿಸಬೇಕಾಗಿದೆ. ಆಳದಿಂದ ಬರುವ ನೀರು ಹಚ್ಚಿನ ಪ್ರೋರೊಸಿಸ್ ಆಂಶವನ್ನೊಳಗೊಂಡಿರುವುದರಿಂದ ಆ ಭಾಗಗಳಲ್ಲಿ ಜನರಿಗೆ ಮೂಳೆ ಸವೆತಗಳಂತಹ ಕಾಯಿಲೆಗಳು ಕಾಣಿಸುತ್ತಿವೆ.ಇದು ಆ ಭಾಗದ ಜನರನ್ನು ತೀವ್ರತರವಾಗಿ ಕಾಡುತ್ತಿದೆ.ಬಹುತೇಕ ಕಾಯಿಲೆಗಳಿಗೆ ಕುಡಿಯುವ ನೀರೆ ಮೂಲವಾಗಿದೆ.ಆದ್ದರಿಂದ ನೀರನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ನಮ್ಮದಾಗಿದೆ. ಇನ್ನು ಇದೇ ರೀತಿ ದುರ್ಬಳಕೆ ಮುಂದುವರೆದರೆ ಮುಂದಿನ ಪೀಳಿಗೆ ನೀರಿಲ್ಲದೆ ಅಂತ್ಯಕಂಡರೂ ಆಶ್ಚರ್ಯವಿಲ್ಲ.
Share This :
  •  
  •  

Readers Comments (0) 

COMMENT

Characters Remaining : 1000