ಅಲ್ಫೋನ್ಸೋ ಮಾವಿಗೆ ಜಿಯೋಗ್ರಾಫಿಕಲ್‍ ಇಂಡಿಕೇಷನ್ ಗೌರವ

October 06, 2018 ⊄   By: Hasiru Suddimane

ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವುಗಳ ಪೈಕಿ ಆಲ್ಫೋನ್ಸೋ ಮಾವು ಇದೀಗ ಜಿಯೋಗ್ರಾಫಿಕಲ್‍ ಇಂಡಿಕೇಷನ್ (ಜಿಐ) ಟ್ಯಾಗ್‍ ಗೆ ಪಾತ್ರವಾಗಿದೆ. ಈ ಬಗ್ಗೆ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ಶುಕ್ರವಾರ ಘೋಷಣೆ ಮಾಡಿದೆ. ಮಹಾರಾಷ್ಟ್ರದ ರತ್ನಗಿರಿ, ಸಿಂಧೂದುರ್ಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುವ ಅಲ್ಫೋನ್ಸೋ ಮಾವಿನ ತಳಿಗೆ ಭೌಗೋಳಿಕ ಸೂಚಿಯ ಮಾನ್ಯತೆ ನೀಡಲಾಗಿದೆ. 2004ರಲ್ಲಿ ಡಾರ್ಜಿಲಿಂಗ್‍ ಚಹಾಕ್ಕೆ ಭಾರತದಲ್ಲಿ ಮೊದಲ ಬಾರಿ ಈ ಮಾನ್ಯತೆ ಲಭಿಸಿತ್ತು. ಈ ಪೈಕಿ ಜಿಐ ಟ್ಯಾಗ್‍ ಪಡೆದ ಭಾರತದ 325 ಉತ್ಪನ್ನಗಳ ಪೈಕಿ ಇದೂ ಒಂದಾಗಿದೆ.

ನಿಗದಿತ ಭೌಗೋಳಿಕ ಪ್ರದೇಶದಲ್ಲಿ ಬೆಳೆಯುವ ಹೂ, ಹಣ್ಣು ಅಥವಾ ಯಾವುದೇ ವಸ್ತುವನ್ನು ಗುರುತಿಸುವ ನಿಟ್ಟಿಲ್ಲಿ ಈ ಮಾನ್ಯತೆ ನೀಡಲಾಗುತ್ತದೆ. ಆ ಸ್ಥಳ ಮತ್ತು ಪ್ರದೇಶದ ಹೆಸರಿನಿಂದಾಗಿ ಆ ಉತ್ಪನ್ನಕ್ಕೆ ಮಾನ್ಯತೆ ಸಿಗುವಂತಾಗುತ್ತದೆ ಮತ್ತು ಗ್ರಾಹಕರಿಗೆ ಗುಣಮಟ್ಟದ ಖಾತರಿ ನೀಡಿದಂತಾಗುತ್ತದೆ. ತಿರುಪತಿ ದೇಗುಲದ ಲಡ್ಡು, ಜೈಪುರದ ಹಸಿರು ಬಣ್ಣದ ಮಡಿಕೆ, ಮಹಾಬಲೇಶ್ವರದ ಸ್ಟ್ರಾಬರಿಗೆ ಜಿಐ ಮಾನ್ಯತೆ ಸಿಕ್ಕಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.