ಮೀನು ಕೃಷಿಕರಿಂದ ಅರ್ಜಿ ಆಹ್ವಾನ

October 01, 2018 ⊄   By: Hasiru Suddimane

ಮೀನುಕೃಷಿಕರು ಬದುಕುತ್ತಿರುವುದೇ ಮೀನುಗಾರಿಕೆಯಿಂದ. ಈ ಉದ್ಯಮದಲ್ಲಿ ಮತ್ತಷ್ಟು ಸುಧಾರಿತ ಯೋಜನೆಗಳು, ಕ್ರಮಗಳು ಜಾರಿಗೆ ಬಂದರೆ ಮತ್ತಷ್ಟು ಮುಂದುವರಿಯಬಹುದು. ಈ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಾದ ವಿವಿಧ ಯೋಜನೆಗಳಿಗೆ ಮೀನುಗಾರರು , ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ವಲಯ ಯೋಜನೆಯಡಿ ಮತ್ಸ್ಯವಾಹಿನಿ ಯೋಜನೆಯಡಿ ಮೀನು ಮಾರಾಟಕ್ಕಾಗಿ ತ್ರಿಚಕ್ರ ಹಾಗೂ ನಾಲ್ಕುಚಕ್ರ ವಾಹನ ಖರೀದಿಗೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸಹಾಯಧನ, ಮೀನುಗಾರಿಕೆ ಸಲಕರಣೆ ಕಿಟ್(ಪ.ಜಾತಿ) ಹಾಗೂ ವೈಜ್ಞಾನಿಕ ಮೀನು ಕೃಷಿ ಮತ್ತು ಇತರ ವಿಷಯಗಳ ಕುರಿತು ಮೀನುಗಾರರಿಗೆ ತರಬೇತಿ ಕಾರ್ಯಕ್ರಮ.

ರಾಜ್ಯವಲಯ ಯೋಜನೆಯಡಿ
ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ (ಸಾಮಾನ್ಯ) ಮೀನುಗಾರಿಕೆ ಬಲೆ ಸಲಕರಣೆ ಕಿಟ್ ನೀಡುವುದು. ಗಿರಿಜನ ಉಪಯೋಜನೆಯಡಿ ಮೀನು ಮಾರಾಟ ಮಳಿಗೆ ಸ್ಥಾಪನೆಗೆ ಸಹಾಯಧನ. ಮಂಜುಗಡ್ಡೆ ಸ್ಥಾವರಗಳಿಗೆ ವಿದ್ಯುತ್ ಸಹಾಯಧನ, ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕಾಗಿ ಸಹಾಯಧನ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ
ಪ. ಜಾತಿ ಮತ್ತು ಪ.ಪಂಗಡದ ಮೀನುಗಾರರಿಗೆ ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ ಮೀನುಗಾರಿಕೆ ಬಲೆ ಸಲಕರಣೆ ಕಿಟ್ ಹಾಗೂ ಫೈಬರ್ ಗ್ಲಾಸ್ ಹರಿಗೋಲು ವಿತರಣೆ.

ಕೇಂದ್ರ ಪುರಸ್ಕೃತ ಯೋಜನೆ

ನೀಲಿಕ್ರಾಂತಿ ಯೋಜನೆಯಡಿ ಮೀನು ಸಾಗಾಟಕ್ಕಾಗಿ ಇನ್ಸುಲೇಟೆಡ್ ಟ್ರಕ್ ಖರೀದಿ, ಸಮುದ್ರದಲ್ಲಿ ಮೀನುಗಾರರ ಸುರಕ್ಷತೆ ಕಾರ್ಯಕ್ರಮದಡಿ ವಿದ್ಯುದ್ಮಾನ ಉಪಕರಣ ಖರೀದಿಗೆ ಸಹಾಯಧನ, ಸಾಂಪ್ರದಾಯಿಕ ದೋಣಿಗಳ ಮೋಟರೀಕರಣ ಕಾರ್ಯಕ್ರಮ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಅಭಿವೃದ್ಧಿಗೆ ಸಹಾಯ, ಹಳೆಯ ಮರದ ದೋಣಿಗಳ ಬದಲಿಗೆ ಎಫ್ ಆರ್ ಪಿ ದೋಣಿ ಖರೀದಿಗೆ ಸಹಾಯಧನ, ಐಸ್ ಪ್ಲಾಂಟ್ ಮತ್ತು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.