ಸಸ್ಯರೋಗಶಾಸ್ತ್ರಜ್ಞನ ಮುಡಿಗೇರಲಿದೆ ಪ್ರಶಸ್ತಿ

February 10, 2018 ⊄   By: Hasiru Suddimane

ಸಸ್ಯರೋಗಶಾಸ್ತ್ರಜ್ಞ ಡಾ. ವಸಂತ ಕುಮಾರ್ ತಿಮಕಾಪುರ ಅವರನ್ನು ಪ್ರತಿಷ್ಠಿತ ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಇನ್ ಸ್ಟಿಟ್ಯೂಟ್ ನ ಅಂಗಸಂಸ್ಥೆಯಾದ ಇಂಡಿಯನ್ ಫೈಟೊಪೆ ಥೋಲಜಿಕಲ್ ಸೊಸೈಟಿಯು `ಫೆಲೋ ಆಫ್ ಇಂಡಿಯನ್ ಫೈಟೋಫೆಥೊಲಾಜಿಕಲ್ ಸೊಸೈಟಿ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಡಾ. ವಸಂತ ಕುಮಾರ್ ಅವರು ಅನೇಕ ವಾಣಿಜ್ಯ, ತೋಟಗಾರಿಕೆ ಬೆಳೆಗಳಲ್ಲಿ ಪ್ರಾಯೋಗಿಕವಾಗಿ ನಿಯಂತ್ರಿಸಲು ಸಾಧ್ಯವಾಗದ ಬೇರು ರೋಗಗಳು, ವೈರಸ್ ರೋಗಗಳನ್ನು ತಮ್ಮದೇ ವಿಭಿನ್ನ ಮತ್ತು ವಿಶಿಷ್ಟ ಮಾದರಿಯ ಸಂಶೋಧನೆಯಿಂದ ನಿಯಂತ್ರಿಸುವಲ್ಲಿ ಸಫಲರಾಗಿರುವುದು ಪ್ರಶಸ್ತಿ ಲಭಿಸಲು ಕಾರಣವಾಗಿದೆ. ಇಂಡಿಯನ್ ಫೈಟೊಪೆಥೊಲಾಜಿಕಲ್ ಸೊಸೈಟಿಯ 70ನೇ ರಾಷ್ಟ್ರೀಯ ವಿಚಾರ ಸಂಕಿರಣ ಫೆ.15ರಿಂದ 17ರವರೆಗೆ ಅಸ್ಸಾಂನ ಜೋರ್ಹಟ್ ನಲ್ಲಿರುವ ಅಸ್ಸಾಂ ಅಗ್ರಿಕಲ್ಚರಲ್ ಯೂನಿವರ್ಸಿಟಿಯಲ್ಲಿ ನಡೆಯಲಿದ್ದು, ಅಲ್ಲಿ ಡಾ.ವಸಂತ ಕುಮಾರ್ ತಿಮಕಾಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.