Hasiruvasi magazine is a repository of knowledge and information. Subscribe Now. Subscribe

ರೈತರಿಗೆ ಮತ್ತಷ್ಟು ಸುಲಭ, ಬೀಜ ಸಂಸ್ಕರಣ ಯಂತ್ರ ಆವಿಷ್ಕಾರ
ಕೃಷಿಯಲ್ಲಿ ರೈತರಿಗೆ ಉಪಯೋಗವಾಗುವುದಕ್ಕೆ ಅನೇಕ ತಂತ್ರಜ್ಞಾನಗಳು ಲಗ್ಗೆ ಇಟ್ಟಿವೆ. ಕಡಿಮೆ ಸಮಯದಲ್ಲಿ ಹಲವು ಕೆಲಸ ಮಾಡಿ ಮುಗಿಸುವ ಯಂತ್ರಗಳ ಆವಿಷ್ಕಾರಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ ವಿಜ್ಞಾನಿಗಳು.
ರೈತರ ಶ್ರಮ, ಖರ್ಚು ಹಾಗೂ ಸಮಯ ಉಳಿಸುವಲ್ಲಿ ಅವುಗಳ ಪಾತ್ರ ಗಣನೀಯ. ಅಂಥದ್ದೇ ಯಂತ್ರವೊಂದು ರಾಯಚೂರು ಕೃಷಿ ವಿವಿಯಲ್ಲಿ ಅಳವಡಿಕೆಯಾಗಿದ್ದು, ಗಮನ ಸೆಳೆಯುತ್ತಿದೆ. ಈ ಯಂತ್ರ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡುವುದು ವಿಶೇಷ. ಕೃಷಿ ವಿವಿಯ ಬೀಜ ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಬೀಜ ಸಂಸ್ಕರಣೆ, ಒದಗಿಸುವಿಕೆ ಮತ್ತು ಪ್ಯಾಕಿಂಗ್ ಮಾಡುವ ಯಂತ್ರವಿದೆ. ಇಡೀ ದೇಶದಲ್ಲಿ ಸಾರ್ವಜನಿಕ ವಲಯದಲ್ಲಿ ಇರುವಂಥ ಏಕೈಕ ಘಟಕ ಇದಾಗಿದ್ದು, ರಾಜ್ಯದ ಮಟ್ಟಿಗೆ ಖಾಸಗಿ ವಲಯದಲ್ಲೂ ಇಂಥ ಯಂತ್ರ ಅಳವಡಿಕೆ ಆಗಿಲ್ಲ ಎಂಬುದು ಗಮನಾರ್ಹ.
ವಿಶೇಷ
ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಎಲ್ಲ ಬೆಳೆಯ ಬೀಜಗಳನ್ನು ಈ ಯಂತ್ರದಲ್ಲಿ ಸಂಸ್ಕರಿಸುವುದರ ಜತೆಗೆ ರಾಸಾಯನಿಕ ಮಿಶ್ರಣ ಮಾಡಿ, ಒಣಗಿಸಿ, ಅಗತ್ಯಕ್ಕೆ ಅನುಸಾರ ಪ್ಯಾಕಿಂಗ್ ಮಾಡಬಹುದು. ಬೀಜ ಘಟಕದಲ್ಲಿರುವ ಹಳೇ ಯಂತ್ರದಲ್ಲಿ ಬೀಜಗಳನ್ನು ಹಾಕಿ ಕಸ ಕಡ್ಡಿ ಪ್ರತ್ಯೇಕಿಸಲಾಗುವುದು. ಬಳಿಕ ಹೊಸ ಯಂತ್ರದಲ್ಲಿ ಬೀಜಗಳನ್ನು ಹಾಕಿ ಅವುಗಳಿಗೆ ಬೇಕಾದಂಥ ರಾಸಾಯನಿಕ ಪದಾರ್ಥ ಮಿಶ್ರಣ ಮಾಡಿ ಬೀಜವನ್ನು ಒಣಗಿಸಿ ಅವುಗಳನ್ನು ಅಗತ್ಯಕ್ಕೆ ಅನುಸಾರ 10 ಕೆಜಿಯಿಂದ 50 ಕೆಜಿವರೆಗೆ ಪ್ರತ್ಯೇಕ ಪ್ಯಾಕಿಂಗ್ ಮಾಡಬಹುದು. ಒಂದು ಗಂಟೆಗೆ ಸುಮಾರು 30ರಿಂದ 40 ಕ್ವಿಂಟಲ್ ಬೀಜಗಳನ್ನು ಪ್ಯಾಕ್ ಮಾಡಬಹುದು. ಕಳೆದ ಒಂದು ವರ್ಷದಲ್ಲಿ 55 ಸಾವಿರ ಕ್ವಿಂಟಲ್ಗೂ ಅಧಿಕ ಬೀಜೋತ್ಪಾದನೆ ಮಾಡಲಾಗಿದೆ. ಹೆಸರು, ಕಡಲೆ, ತೊಗರಿ, ಜೋಳ, ಕುಸುಬೆ, ಸೂರ್ಯ ಕಾಂತಿ ಸೇರಿ ಎಲ್ಲ ರೀತಿಯ ಬೆಳೆಗಳ ಬೀಜೋತ್ಪಾದನೆಯನ್ನು ಈ ಆಧುನಿಕ ಯಂತ್ರದಿಂದ ಮಾಡಬಹುದು. ಅಲ್ಲದೇ, ಕೈಯಿಂದ ಮಾಡುವಾಗ ರಾಸಾಯನಿಕ ಬಳಕೆಯಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದವು. ಈ ಯಂತ್ರದಿಂದ ಆ ತಾಪತ್ರಯ ಇಲ್ಲ. ಅಲ್ಲದೇ, ಸಬ್ಸಿಡಿ ದರದಲ್ಲಿ ಈ ಯಂತ್ರ ಲಭ್ಯವಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬಹುದು.
COMMENT
Photos

Readers Comments (0)