ನಕಲಿ ಮತ್ತು ಕಲಬೆರಕೆ ರಸಗೊಬ್ಬರಗಳನ್ನು ಕಂಡುಹಿಡಿಯುವ ವಿಧಾನ

April 17, 2018 ⊄   By: Hasiru Suddimane

ಇಂದು ಯಾವುದೇ ಬೆಳೆ ಬೆಳೆಯ ಬೇಕಾದರೆ ರಸಗೊಬ್ಬರಗಳ ಬಳಕೆ ಅನಿವಾರ್ಯವಾಗಿದೆ. ಹೀಗೆ ಬೆಳೆಗಳಿಗೆ ಪೋಷಕಾಂಶ ಒದಗಿಸಲು ಬಳಸುವ ರಸಗೊಬ್ಬರಗಳ ಖರ್ಚು ಬೆಳೆಯ ಒಟ್ಟು ಉತ್ಪಾದನಾ ಖರ್ಚಿನ ಬೆಲೆಯ ಒಟ್ಟು ಉತ್ಪಾದನಾ ಖರ್ಚಿನ ಶೇ. 15 ರಿಂದ 50ರವರೆಗೂ ಇರುತ್ತದೆ. ಬೆಳೆಗೆ ನೀಡಬೇಕಾದ ಅವಶ್ಯಕ ಪೋಷಕಾಂಶಗಳ ಜೊತೆಗೆ ರೈತರು ಇವುಗಳ ಮೇಲೆ ತೊಡಗಿಸಿದ ಅಮೂಲ್ಯ ಬಂಡವಾಳವು ಬೆಳೆಗೆ ಹಾಗೂ ರೈತನ ಆರ್ಥಿಕತೆಗೆ ಸದುಪಯೋಗವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ರೈತರ ಜವಾಬ್ದಾರಿ.

ರೈತರು ಈ ನಿಟ್ಟಿನಲ್ಲಿ ತಮ್ಮ ಮಟ್ಟದಲ್ಲಿ ರಸಗೊಬ್ಬರಗಳ ಕಲಬೆರಕೆಯನ್ನು ಕಡಿಮೆ ವೆಚ್ಚದಲ್ಲಿ ಕಂಡುಕೊಂಡು ಗುಣಮಟ್ಟದ ರಸಗೊಬ್ಬರಗಳನ್ನು ಕೊಳ್ಳಬಹುದಾಗಿದೆ. ಈ ದಿಸೆಯಲ್ಲಿ ರೈತರು ಕೆಳಕಂಡ ಸುಲಭ ಪರೀಕ್ಷೆಗಳಿಂದ ರಸಗೊಬ್ಬರಗಳು ನಕಲಿ ಗೊಬ್ಬರವೇ ಅಥವಾ ಕಲಬೆರಕೆಯಾಗಿದೆಯೇ ಎಂದು ತಿಳಿಯಬಹುದು.

ರೈತರು ರಸಗೊಬ್ಬರವನ್ನು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು
- ರಸಗೊಬ್ಬರ ಚೀಲದ ಬಾಯಿಯನ್ನು ಯಂತ್ರದಿಂದ ಹೊಲೆದಿರಬೇಕು ಮತ್ತು ಕೈಯಿಂದ ಹೊಲಿದಿದ್ದರೆ ಅದಕ್ಕೆ ಸೀಸದ ಮೊಹರನ್ನು ಹಾಕಿರಬೇಕು.
- ರಸಗೊಬ್ಬರದ ಚೀಲವನ್ನು ತಪ್ಪದೆ ತೂಕ ಮಾಡಿಸಿ ಖರೀದಿಸಬೇಕು.
- ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಟ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು.
- ರಸಗೊಬ್ಬರದ ಚೀಲದ ಮೇಲೆ ಕೆಳಕಂಡ ವಿವರಗಳು ಕಡ್ಡಾಯವಾಗಿ ಮುದ್ರಿತವಾಗಿರಬೇಕು.

ರಸಗೊಬ್ಬರವೆಂದು ಮುದ್ರಿತವಾಗಿರಬೇಕು. ರಸಗೊಬ್ಬರದ ತಯಾರಕರ ಹೆಸರು ಮತ್ತು ವಿಳಾಸ. ರಸಗೊಬ್ಬರದ ಬ್ರಾಂಡ್/ ಹೆಸರು. ರಸಗೊಬ್ಬರದಲ್ಲಿರುವ ಕನಿಷ್ಟ ಶೇ. ಪೋಷಕಾಂಶಗಳ ವಿವರಗಳು. ಗರಿಷ್ಟ ಮಾರಾಟ ಬೆಲೆ. ಗರಿಷ್ಟ ಮತ್ತು ನಿವ್ವಳ ತೂಕ. ರಸಗೊಬ್ಬರಗಳ ಮಿಶ್ರಣಗಳು, ಸಿಂಗಲ್ ಸೂಪರ್ ಫಾಸ್ಟೇಟ್, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣಗಳ ಚೀಲ/ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ನಮೂದಿಸಿರಬೇಕು.

ರಸಗೊಬ್ಬರವನ್ನು ಕೊಂಡಿದ್ದಕ್ಕೆ ನಮೂನೆ ಎಂ.ನಲ್ಲಿ ರಸೀತಿಯನ್ನು ಪಡೆಯಬೇಕು. ರಸೀತಿಯಲ್ಲಿ ಕೊಂಡುಕೊಂಡ ರಸಗೊಬ್ಬರಗಳ ವಿವರಳನ್ನು ತುಂಬಿದ್ದು ರೈತರ ಸಹಿ ಮತ್ತು ಮಾರಾಟಗಾರರ ಸಹಿ ಇರಬೇಕು.

ನಕಲಿ ಮತ್ತು ಕಲಬೆರಕೆ ರಸಗೊಬ್ಬರಗಳನ್ನು ಗುರುತಿಸುವ ವಿಧಾನಗಳು

ಭೌತಿಕ ಪರೀಕ್ಷೆ
ಹರಳು ರೂಪದ ರಸಗೊಬ್ಬರಗಳು ಒಂದೇ ಬಣ್ಣ ಆಕಾರ, ಗಾತ್ರದಿಂದ ಕೂಡಿದ್ದು ಕಣ್ಣಿಗೆ ಕಾಣುವಂತಹ ಇತರೆ ಪದಾರ್ಥಗಳು ರಸಗೊಬ್ಬರದಲ್ಲಿ ಇರಬಾರದು. ಹೆಚ್ಚು ಪುಡಿಯಾಗಿರಬಾರದು ಮತ್ತು ಹೆಚ್ಚಿನ ತೇವಾಂಶವನ್ನು ಹೊಂದಿರಬಾರದು. ಮತ್ತು ಹೆಚ್ಚಿನ ತೇವಾಂಶವನ್ನು ಹೊಂದಿರಬಾರದು.

ನೀರಿನಲ್ಲಿ ಕರಗುವ ಪರೀಕ್ಷೆ
ಕೆಲವು ರಸಗೊಬ್ಬರಗಳು ನೀರಿನಲ್ಲಿ ಸಂಪೂರ್ಣ ಕರಗುತ್ತವೆ. ಅಂತಹ ರಸಗೊಬ್ಬರಗಳನ್ನು ನೀರಿನಲ್ಲಿ ಹಾಕಿದಾಗ ಕರಗದೆ ಇರುವ ಪದಾರ್ಥ ಉಳಿದರೆ ಅದು ಕಲಬೆರಕೆಯಾಗಿರುತ್ತದೆ.
ಉದಾ: ಯೂರಿಯ, ಅಮೋನಿಯಂ ಕ್ಲೋರೈಡ್, ಮ್ಯೂರಿಯೇಟ್ ಆಫ್ ಪೊಟ್ಯಾಷ್, ಸತುವಿನ ಸಲ್ಫೇಟ್, ಮೆಗ್ನಿಷಿಯಂ ಸಲ್ಫೇಟ್ ಇವುಗಳು ಶೇ. 100 ರಷ್ಟು ನೀರಿನಲ್ಲಿ ಕರಗುವ ರಸ ಗೊಬ್ಬರಗಳಾಗಿವೆ.

ನೀರಿನಲ್ಲಿ ಕರಗಿಸಿದಾಗ ಆಗುವ ಅನುಭವ
ಕೆಲವು ರಸಗೊಬ್ಬರಗಳು ನೀರಿನಲ್ಲಿ ಕರಗಿಸಿದಾಗ ತಣ್ಣನೆ ಅನುಭವ ನೀಡುತ್ತದೆ. ತಣ್ಣನೆಯ ಅನುಭವ ನೀಡದಿದ್ದಲ್ಲಿ ಅಂತಹ ರಸಗೊಬ್ಬರಗಳು ಕಲಬೆರಕೆಯಾಗಿರುವ ಸಾಧ್ಯತೆಗಳಿರುತ್ತವೆ.
ಉದಾ: ಯೂರಿಯ, ಅಮೋನಿಯಂ ಕ್ಲೋರೈಡ್, ಮ್ಯೂರಿಯೇಟ್ ಆಫ್ ಪೊಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ಮಾಡಿದಾಗ ಸಂಪೂರ್ಣವಾಗಿ ಕರಗಿ ನೀರಾಗುತ್ತದೆ. ಕರಗದೇ ಇರುವ ವಸ್ತು ಉಳಿದರೆ ರಸಗೊಬ್ಬರ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.

ಡಿಎಪಿ ರಸಗೊಬ್ಬರವನ್ನು ರೈತರಲ್ಲಿ ಲಭ್ಯವಿರುವ ಒಂದು ತಗಡಿನ ಮೇಲೆ ಬಿಸಿ ಮಾಡಿದಾಗ ಡಿಎಪಿ ಹರಳುಗಳು ಸುಣ್ಣದಂತೆ ಅರಳುತ್ತವೆ ಮತ್ತು ತಳಕ್ಕೆ ಅಂಟಿಕೊಳ್ಳುತ್ತವೆ. ಡಿಎಪಿ ಹರಳುಗಳು ಅರಳದೇ ತಳಕ್ಕೆ ಅಂಟಿಕೊಳ್ಳದಿದ್ದರೆ ರಸಗೊಬ್ಬರವು ಕಲಬೆರಕೆ/ನಕಲಿ ಎಂದು ತಿಳಿಯಬಹುದು.


ಪೋಷಕಾಂಶಗಳ ಪರೀಕ್ಷೆ
ಸುಟ್ಟದ ಸುಣ್ಣದ ಪರೀಕ್ಷೆ (ಸಾರಜನಕದ ಪರೀಕ್ಷೆ: ಅಮೋನಿಯಂ ರೂಪದ ಸಾರಜನಕವಿರುವ ರಸಗೊಬ್ಬರಗಳನ್ನು ಅಂಗೈಯಲ್ಲಿ ತೆಗೆದುಕೊಂಡು ಸ್ವಲ್ಪ ನೀರು ಹಾಕಿಕೊಂಡು ಸುಣ್ಣದಿಂದ (ವೀಳ್ಯೆದೆಲೆ ಅಡಿಕೆ ಜೊತೆ ಹಾಕಿಕೊಳ್ಳುವ ಸುಣ್ಣ) ತೀಡಿದಾದ ಅಮೋನಿಯ ಘಾಟು ವಾಸನೆ ಬರುತ್ತದೆ. ಘಾಟು ವಾಸನೆ ಬರದಿದ್ದರೆ ಅಂತಹ ರಸಗೊಬ್ಬರವು ನಕಲಿ ಗೊಬ್ಬರವಾಗಿರುತ್ತದೆ.

ಈ ರೀತಿ 30 ರಸಗೊಬ್ಬರಗಳನ್ನು ಪರೀಕ್ಷೆ ಮಾಡಬಹುದು. ಉದಾ: ಡಿಎಪಿ 20:20:13, 15:15:15, 17:17:17, 19:19:19, 10:26:26. ಅಮೋನಿಯಂ ಸಲ್ಫೇಟ್, ಅಮೋನಿಯಂ ಕ್ಲೋರೈಡ್, ಸಿಎಎನ್ ಮುಂತಾದವುಗಳು.

ರಂಜಕದ ಪರೀಕ್ಷೆ
ಸ್ವಲ್ಪ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ ಸೂಪರ್ ಫಾಸ್ಪೇಟ್ ಮತ್ತು ಡಿಎಪಿ ರಸಗೊಬ್ಬರಗಳಾದಲ್ಲಿ ಸಿಲ್ವರ್ ನೈಟ್ರೇಟ್ ದ್ರಾವಣ ಮತ್ತು ಇತರೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಸಂಯುಕ್ತ ರಸಗೊಬ್ಬರಗಳಿಗೆ ಫೆರಿಕ್ ಕ್ಲೋರೈಡ್ ದ್ರಾವಣ ಹಾಕಿದಾಗ ಹಳದಿ/ಬಿಳಿಮಿಶ್ರಿತ ಹಳದಿ ಬಣ್ಣದ ಕಣಗಳು ಕಂಡುಬರುತ್ತದೆ. ಹಳದಿ ಬಣ್ಣದ ಕಣಗಳು ಕಂಡುಬರದಿದ್ದರೆ ಅದು ನಕಲಿ ರಸಗೊಬ್ಬರವಾಗಿರುತ್ತದೆ.

ಪೊಟ್ಯಾಷ್ ಪರೀಕ್ಷೆ
ಪೊಟ್ಯಾಷ್ ಅಂಸವಿರುವ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ ಎರಡು ಹನಿ ಕೊಬಾಲ್ಟ್ ನೈಟ್ರೇಟ್ ದ್ರಾವಣವನ್ನು ಹಾಕಿದಾಗ ಹಳದಿ ಬಣ್ಣದ ಕಣಗಳು ಕಂಡುಬಂದರೆ ರಸಗೊಬ್ಬರ ನಕಲಿಯಾಗಿದೆ ಎಂದು ತಿಳಿಯುವುದು.

ಹೆಚ್ಚಿನ ಮಾಹಿತಿಗೆ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ತರು, ಐಸಿಎಆರ್, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ದೂ.08221-232218

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.