ನಿಷೇಧವಿದ್ದರೂ ಬಿಟಿ ಹತ್ತಿ ಬಳಕೆ

June 14, 2019 ⊄   By: Hasiru Suddimane

ಅನುಮತಿ ಪಡೆಯದ ಕಳೆನಾಶಕ ಸಹಿಷ್ಣು ಬಿಟಿ(ಹರ್ಬಿಸೈಡ್ ಟಾಲರಂಟ್ ಬಿಟಿ, ಎಚ್ಟಿ ಬಿಟಿ) ಹತ್ತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ತಂಡವೊಂದು ಹೇಳಿದೆ.

ಅನುಮತಿ ನೀಡದ ವಂಶವಾಹಿಗಳನ್ನು ಒಳಗೊಂಡ ಬಿಟಿ ಹತ್ತಿಯನ್ನು ಬೆಳೆಯಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಜೈವಿಕ ತಂತ್ರಜ್ಞಾನ ಇಲಾಖೆ ನೇಮಿಸಿದ್ದ ವೈಜ್ಞಾನಿಕ ಸಮಿತಿಯು ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿನ ಒಟ್ಟು ಹತ್ತಿ ಬೆಳೆಯುವ ಪ್ರದೇಶದಲ್ಲಿ ಶೇ.15 ರಲ್ಲಿ ಎಚ್ ಟಿ ಬಿಟಿ ಬೆಳೆಯಲಾಗುತ್ತಿದೆಂದು ವರದಿ ಮಾಡಿದೆ ಎಂದು ಕೃಷಿ ಮಂತ್ರಾಲಯ ಸಂಸತ್ತಿಗೆ ಮಾಹಿತಿ ನೀಡಿದೆ.

ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಜಾರಾಷ್ಟ್ರದ ಒಟ್ಟು ಹತ್ತಿ ಬೆಳೆಯುವ ಪ್ರದೇಶದಲ್ಲಿ ಶೇ 15 ಹಾಗೂ ಪಂಜಾಬ್ ನಲ್ಲಿ ಶೇ 5 ರಷ್ಟು ಪ್ರದೇಶದಲ್ಲಿ ಎಚ್ ಟಿ ಬಿಟಿ ಹತ್ತಿ ಬೆಳೆ ಯಲಾಗುತ್ತಿದೆ(2017-18ರ ಋತು). ಇಂಥ ಅನಧಿಕೃತ ಹತ್ತಿ ಕೃಷಿಯನ್ನು ತಡೆಯಲು ಎಫ್ ಐಆರ್ ದಾಖಲು, ದಾಸ್ತಾನಿನ ಜಪ್ತಿ ಹಾಗೂ ಶೋಕಾಸ್ ನೋಟಿಸ್ ನೀಡಬೇಕೆಂದು ಹತ್ತಿ ಬೆಳೆಯುವ ಪ್ರಮುಖ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ.


ಶೇತ್ಕರಿ ಸಂಘಟನೆ ಪ್ರಕಾರ, ಎಚ್ ಟಿ ಬಿಟಿ ಬೀಜಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತಿವೆ. ಇಂಥ ಬೀಜದ ಮೇಲಿನ ನಿಷೇಧ ತೆಗೆಯದಿದ್ದರೆ, ಬೀಜ ಮಾಫಿಯಾ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲಿದೆ. ಇದನ್ನೇ ಬೆಳೆಯಬೇಕೆಂದುಕೊಂಡಿರುವ ರೈತರು ದುಬಾರಿ ಬೆಲೆ ತೆತ್ತಾದರೂ, ಬೀಜವನ್ನು ಪಡೆದುಕೊಳ್ಳುತ್ತಾರೆ.

ಬಿಟಿ ಹತ್ತಿಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳಿವೆ. ಅದು ಪ್ರಶ್ನಾರ್ಹ ತಂತ್ರಜ್ಞಾನ, ವಿಫಲವಾಗಿದೆ ಎನ್ನುವ ರೈತರು ಇರುವಂತೆ, ಅದು ಲಾಭದಾಯಕ ಎನ್ನುವವರೂ ಇದ್ದಾರೆ. ಸರ್ಕಾರ ಸ್ಪಷ್ಟ ನಿಲುವು ಹೊಂದಿಲ್ಲದೆ ಇರುವುದು ಇದಕ್ಕೆ ಕಾರಣ.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.