ಮೀನುಗಳಿಗೂ ಉಂಟು ಆಸ್ಪತ್ರೆ

October 08, 2018 ⊄   By: Hasiru Suddimane

ಮನುಷ್ಯರು, ಪ್ರಾಣಿ, ಪಕ್ಷಿಗಳು ಯಾರೇ ಅನಾರೋಗ್ಯಕ್ಕೆ ತುತ್ತಾದರೆ ಕೂಡಲೇ ಆಸ್ಪತ್ರೆಗೆ ದೌಡಾಯಿಸುತ್ತೇವೆ. ಮೀನುಗಳಿಗೂ ಈ ಸಮಸ್ಯೆ ಕಾಡಿದರೆ ಇನ್ನು ಮುಂದೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಬಹುದು. ಈ ವ್ಯವಸ್ಥೆಯನ್ನು ಶೇರ್ ಐ ಕಾಶ್ಮೀರ್ ಕೃಷಿ ವಿಶ್ವವಿದ್ಯಾನಿಲಯದ ಜಲಚರ ಪ್ರಾಣಿಗಳ ಆರೋಗ್ಯ ನಿರ್ವಹಣಾ ವಿಭಾಗ ರಾಜ್ಯದ ಮೊಡ್ಡ ಮೊದಲ ಮೀನು ಆಸ್ಪತ್ರೆಯನ್ನು ಕೇಂದ್ರ ಕಾಶ್ಮೀರದ ಗಂದೇರ್ ಬಲ್‍ ಜಿಲ್ಲೆಯ ರಂಗಿಲ್‍ ನಲ್ಲಿ ತೆರೆದಿದೆ. ಇದು ದೇಶದಲ್ಲೇ ಎರಡನೇ ಮೀನು ಆಸ್ಪತ್ರೆ. 2015ರಲ್ಲಿ ಕೊಲ್ಕತ್ತಾದಲ್ಲಿ ಇಂಥದ್ದೇ ಆಸ್ಪತ್ರೆ ತೆರೆಯಲಾಗಿತ್ತು.

ಶ್ರೀನಗರದ ಸುತ್ತಮುತ್ತಲಿನ ಮತ್ಸ್ಯತಜ್ಞರು ನಡೆಸಿದ ಸಮೀಕ್ಷೆ ವೇಳೆ ಮತ್ಸ್ಯ ಕೃಷಿಕರಿಂದ ಬಂದ ಸಾಮಾನ್ಯ ದೂರೆಂದರೆ, ಟ್ರೌಟ್ ನಂಥ ಪ್ರಬೇಧದ ಮೀನುಗಳು ನಿಗೂಢವಾಗಿ ಸಾಯುತ್ತಿವೆ ಎನ್ನುವುದು. ತಜ್ಞರು ಇದಕ್ಕೆ ಕಾರಣ ಕಂಡುಹಿಡಿಯುವ ಪ್ರಯತ್ನ ಮಾಡಿದರು. ಆದರೆ ಉಷ್ಣವಲಯದಲ್ಲಿ ಮೀನುಗಳನ್ನು ಬಾಧಿಸುವ ಟೈಪನೊಸೊಮಾ ಎಂಬ ಪರಾವಲಂಬಿ ರೋಗಕಾರಕ ಕಣಗಳು ಕಾಶ್ಮೀರದ ತಣ್ಣನೆಯ ನೀರಿನಲ್ಲೂ ಕಂಡುಬರುತ್ತಿವೆ ಎನ್ನುವ ಅಂಶ ಸಂಶೋಧನೆಯಿಂದ ತಿಳಿದುಬಂತು. ಮತ್ಸ್ಯ ಸಂತತಿಯ ಅಳಿವಿನ ಹಿನ್ನೆಲೆಯಲ್ಲಿ ಮತ್ಸ್ಯ ಆಸ್ಪತ್ರೆಗೆ ತೆರೆಯಲಾಗಿದೆ.

ಪ್ರತಿ ವರ್ಷ ಮೀನು ಕೃಷಿಕರು ಶೇ 30 ರಷ್ಟು ಮೀನುಗಳನ್ನು ಈ ರೋಗದಿಂದಾಗಿ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ಮೀನು ಆಸ್ಪತ್ರೆಯಲ್ಲಿ 20 ಗಾಜಿನ ಟ್ಯಾಂಕ್ ಹಾಗೂ ಮತ್ಸ್ಯಾಗಾರಗಳನ್ನು ನಿರ್ಮಿಸಲಾಗಿದ್ದು, ಅಸ್ವಸ್ಥ ಮೀನುಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೆಲ ಟ್ಯಾಂಕ್ಗಳನ್ನು ಆಸ್ಪತ್ರೆಗೆ ಸೇರಿಸಿದ ಮೀನುಗಳಿಗೆ ಆಯಂಟಿಬಯಾಟಿಕ್ ನೀಡಲು ಬಳಸಲಾಗುತ್ತದೆ. ಪ್ರಾಯೋಗಿಕ ಮೀನು ಕೃಷಿ ಕ್ಷೇತ್ರವೂ ಆಸ್ಪತ್ರೆಗೆ ಹೊಂದಿಕೊಂಡಂತೆ ನಿರ್ಮಾಣವಾಗಿದೆ. ಕೋಶ ಕಸಿ ಸೌಲಭ್ಯ, ಆಕ್ವಾ ಕ್ಲಿನಿಕ್ ಹಾಗೂ ಪೆಥಾಲಜಿ ಪ್ರಯೋಗಾಲಯ ಇಲ್ಲಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
February 19, 2019

ಸಿಂಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಫೆ. 20ರಿಂದ 28ರವರೆಗೆ ಕೋಳಿ ಸಾಕಾಣಿಕ ತರಬೇತಿ ಹಾಗೂ ಕೌಶಲ್ಯಾಧಾರಿತ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮಶೀಲತಾ ಅಭಿವೃದ್ಧಿಯ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.