ಆನ್ ಲೈನ್ ನಲ್ಲೇ ತರಕಾರಿ ಬೆಳೆಸಿ..!!

February 09, 2018 ⊄   By: Hasiru Suddimane

ನಾವು ತಿನ್ನುವ ಆಹಾರ ಬಹುತೇಕ ವಿಷಯುಕ್ತವಾದದ್ದು, ಬೆಳೆಯುವ ತರಕಾರಿ ಹಾಗೂ ಹಣ್ಣು ಬೆಳೆಗಳಲ್ಲಿ ರಾಸಾಯನಿಕ ಸಿಂಪಡಣೆ ಹೆಚ್ಚಾಗಿ ಆಹಾರ ಪದಾರ್ಥವು ವಿಷವಾಗುತ್ತಿದೆ. ಈ ಎಲ್ಲಾ ಸಮಸ್ಯೆಗೆ ಬ್ರೇಕ್ ಹಾಕಲು ಫಾರ್ಮ್ ಝೆನ್ ಆ್ಯಪ್ ಸಹಾಯಮಾಡಲಿದೆ. ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ?

ಕ್ರಿಮಿನಾಶಕವಿಲ್ಲದ ಹಾಗೂ ರಾಸಾಯನಿಕ ಮುಕ್ತವಾದ ತರಕಾರಿ-ಹಣ್ಣು ತಿನ್ನುವ ಬಯಕೆ ಅದು ಗಿಡದಿಂದ ಕತ್ತರಿಸಿದ ಕೆಲವೇ ಗಂಟೆಗಳಲ್ಲಿ ನಿಮ್ಮ ಮನೆ ಸೇರುತ್ತದೆ.
ಈ ಆ್ಯಪ್ ಮೂಲಕ ನೀವು ನೋಂದಣಿ ಮಾಡಿ ಕೊಂಡರೆ ಸಾಕು, ನಿಮಗಿಷ್ಟವಾದ ತರಕಾರಿ ಹಣ್ಣನ್ನು ನಿಮಗಾಗಿ ರೈತರು ಬೆಳೆದು, ಅವು ಫಲವತ್ತುಗೊಂಡ ಆರೇಳು ಗಂಟೆಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಸೌಲಭ್ಯವನ್ನು ಈ ಪಾರ್ಮ್ ಝೆನ್ ಸಂಸ್ಥೆ ಮಾಡುತ್ತದೆ.

ನೀವು ಬಯಸಿದ ತರಕಾರಿಯನ್ನು ನೈಸರ್ಗಿಕವಾಗಿ ರೈತರಿಂದ ಬೆಳೆಸಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಅಥವಾ ನೀವು ಇಚ್ಛಿಸಿದ್ದಲ್ಲಿ ನಿಮಗೆ ನಿಗದಿಪಡಿಸಲಾದ ಜಮೀನಿನ ಬಳಿಯಿಂದಲೇ ತೆಗೆದುಕೊಂಡು ಬರುವ, ಬೆಳೆ ಪದ್ಧತಿ ಹಾಗೂ ಬೆಳೆ ನಿರ್ವಹಣೆಯನ್ನು ಖುದ್ದಾಗಿ ವೀಕ್ಷಿಸುವ, ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾಗಿಸುವ ಮುಕ್ತ ಅವಕಾಶವನ್ನು ಫಾರ್ಮ್ ಝೆನ್ ಸಂಸ್ಥೆ ಒದಗಿಸುತ್ತಿದೆ.

ಸಾಫ್ಟ್ ವೇರ್ ಯುವ ಉದ್ಯೋಗಿಗಳ ತಂಡ ಫಾರ್ಮ್ ಝೆನ್ ನ ರುವಾರಿಗಳು. 2016ರ ಮೇ ತಿಂಗಳಲ್ಲಿ ಸಂಸ್ಥೆ ಆರಂಭಿಸಲಾಗಿದ್ದು, ಡಿಸೆಂಬರ್ ನಲ್ಲಿ ಆ್ಯಪ್ ಪರಿಚಯಿಸಲಾಗಿದೆ. ಇಲ್ಲಿಯವರೆಗೆ 450ಕ್ಕೂ ಹೆಚ್ಚು ಗ್ರಾಹಕರು ಉಪಯೋಗ ಪಡೆಯುತ್ತಿದ್ದಾರೆ.
ರೈತರ ಜೀವನಕ್ಕೆ ಭದ್ರತೆ ಒದಗಿಸುವ ಜತೆಗೆ ಗ್ರಾಹಕರಿಗೆ ಆರೋಗ್ಯಪೂರ್ಣ ತರಕಾರಿ, ಹಣ್ಣುಗಳನ್ನು ತಲುಪಿಸುವುದು ಹಾಗೂ ಭೂಮಿಯ ಫಲವತ್ತತೆ ಕಾಪಾಡುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ಇದರಲ್ಲಿ ಗ್ರಾಹಕರು ಹೀರೆಕಾಯಿ, ಎಲೆಕೋಸು, ಹೂಕೋಸು, ಕ್ಯಾರೇಟ್, ಟೊಮೊಟೊ, ಬದನೆಕಾಯಿ, ಸೊಪ್ಪು ಸೇರಿದಂತೆ ತಮಗಿಷ್ಟವಾದ 15-20 ವಿವಿಧ ತರಕಾರಿಗಳನ್ನು ಬೆಳೆದು ಸವಿಯಬಹುದು. ಕಟಾವು ಮಾಡಿದ 5-8 ಗಂಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಹಣ್ಣುಗಳನ್ನು ಬೆಳೆಯಲು ಹೆಚ್ಚು ಸಮಯ ಹಿಡಿಯುವುದರಿಂದ ಗ್ರಾಹಕರು ಮುಂಗಡವಾಗಿ ತಿಳಿಸಬೇಕಾಗುತ್ತದೆ.

ನೀವೇನು ಮಾಡಬೇಕು?
ಮೊದಲು ಫಾರ್ಮ್ ಝೆನ್ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ಅದರಲ್ಲಿ ನಿಮ್ಮ ಖಾತೆ ತೆರೆದು, ನಿಮಗೆ ಸಮೀಪವಿರುವ ಜಮೀನನ್ನು ಆಯ್ದುಕೊಳ್ಳಬೇಕು. ನೀವು ಬೆಳೆಸಲು ಇಚ್ಛಿಸುವ ತರಕಾರಿಗಳು ಯಾವುದೆಂದು ಸೂಚಿಸಿ, ತಿಂಗಳ ಚಂದಾ ಮೊತ್ತ ಪಾವತಿಸಬೇಕು. ಆನಂತರ ನೀವು ಆಯ್ದುಕೊಂಡ ಬೆಳೆಗಳಿಗೆ ಬೇಕಿರುವ ಸಿದ್ಧತೆ ಶುರು ಮಾಡುತ್ತಾನೆ. ತರಕಾರಿ ಬೆಳೆಯುವ ವಿವಿಧ ಹಂತಗಳನ್ನು ನೀವು ಆ್ಯಪ್ ಮೂಲಕ ಅಥವಾ ನೇರವಾಗಿ ಭೇಟಿ ನೀಡಿ ವೀಕ್ಷಿಸಬಹುದು. ನಿಮ್ಮ ಬೆಳೆ ಕಟಾವಿಗೆ ಬಂದ ತಕ್ಷಣ ನಿಮಗೆ ಮಾಹಿತಿ ರವಾನಿಸಲಾಗುತ್ತದೆ.

ರೈತರಿಗೆ ಸ್ಥಿರ ವರಮಾನ
ನಗರದಿಂದ 30ಕಿ.ಮೀ. ವ್ಯಾಪ್ತಿಯೊಳಗಿನ ನೀರಾವರಿ ಜಮೀನು ಹೊಂದಿರುವ ರೈತರು ಸಂಸ್ಥೆಯೊಂದಿಗೆ ಕೈ ಜೋಡಿಸಬಹುದು. ಆದರೆ, ನಿಮಗೆ ಸುಸ್ಥಿರ, ಸಾವಯವ ಪದ್ಧತಿಯಲ್ಲಿ ಆಸಕ್ತಿ ಇರಬೇಕು. ಒಂದು ಎಕರೆಗಿಂತ ಹೆಚ್ಚಿನ ನೀರಾವರಿ ಜಮೀನು ಹೊಂದಿರುವವರಿಗೆ ಹೆಚ್ಚಿನ ಆದ್ಯತೆ. ವರ್ತೂರು, ದೇವನಹಳ್ಳಿ, ನೆಲಮಂಗಲ, ಮೈಸೂರು ರಸ್ತೆ, ಕನಕಪುರ, ಬನ್ನೇರುಘಟ್ಟ, ಚಂದಾಪುರ, ಸರ್ಜಾಪುರದ ಸುತ್ತಮುತ್ತಲಿನ ಗ್ರಾಹಕರು ರೈತರು ಇದರ ಪ್ರಯೋಜನ ಪಡೆಯಬಹುದು. 50-60 ಕಿ.ಮೀ ದೂರದ ಗ್ರಾಹಕರು ಖುದ್ದಾಗಿ ಬಂದು ತರಕಾರಿ ತೆಗೆದುಕೊಂಡು ಹೋಗುತ್ತೇವೆ ಅನ್ನುವವರಿಗೂ ಅವಕಾಶವಿದೆ ಎನ್ನುತ್ತಾರೆ ಸಂಸ್ಥೆಯ ಸರವಣನ್.

ಕಾರ್ಯನಿರ್ವಹಣೆ ಹೇಗೆ?
ಆ್ಯಪ್ ಆಧಾರಿತ ಫಾರ್ಮ್ ಝೆನ್ ತನ್ನ ಗ್ರಾಹಕರಿಗೆ ಸ್ವತಃ ಅವರೇ ನಿರ್ವಹಿಸಲು ಕೃಷಿ ಭೂಮಿ ಬಾಡಿಗೆಗೆ ನೀಡಲಿದೆ. ಪ್ರತಿ ಮಿನಿ ಫಾರ್ಮ್ ಅನ್ನು 12 ಬೆಡ್ ಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಬೆಡ್ 600 ಚದರ ಅಡಿ ಮಿನಿ ಫಾರ್ಮ್ ಹೊಂದಿರುತ್ತದೆ. ಇದಕ್ಕಾಗಿ ಗ್ರಾಹಕರು ಮಾಸಿಕ 2500 ಪಾವತಿಸಬೇಕು. ಗ್ರಾಹಕರ ಅಪೇಕ್ಷೆಯಂತೆ ಅವರು ಪಡೆಯುವ ಬೆಡ್ ಗಳಲ್ಲಿ ಬಹುಬೆಳೆ(ತರಕಾರಿ)ಗಳನ್ನು ಬೆಳೆದುಕೊಡಲಾಗುತ್ತದೆ. ಅಷ್ಟೇ ಅಲ್ಲದೆ, ಗ್ರಾಹಕರು ಇಚ್ಛಿಸಿದ್ದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ತಾವು ತರಕಾರಿ ಬೆಳೆಯುವ ಜಮೀನಿನ ಬಳಿ ಹೋಗಿ ತಮ್ಮ ಬೆಳೆಗಳನ್ನು ಪರಿಶೀಲಿಸಬಹುದು. ಆಸಕ್ತಿ ಇದ್ದರೆ ಕೃಷಿ ಕಲಿತುಕೊಳ್ಳಬಹುದು. ನೋಂದಣಿಯಾದ 2ನೇ ತಿಂಗಳಿನಿಂದ ಪ್ರತಿ ಸೋಮವಾರ 5ರಿಂದ 6 ಕೆ.ಜಿ. ತಾಜಾ ತರಕಾರಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತದೆ. ಸದ್ಯ 20 ರಿಂದ30 ಕಿ.ಮೀ ಒಳಗಿನ ಗ್ರಾಹಕರಿಗೆ ಈ ಅವಕಾಶವಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.