ಶುದ್ಧ ಹಾಲು ಉತ್ಪಾದನೆಗೆ ಮುನ್ನೆಚ್ಚರಿಕೆ ಕ್ರಮ!!

April 17, 2018 ⊄   By: Hasiru Suddimane

ಹಾಲು ಒಂದು ಮುಖ್ಯವಾದ ಸಂಪೂರ್ಣ, ಸಮತೋಲನ ಆಹಾರ. ಗ್ರಾಹಕರಲ್ಲಿ ಹಾಲು ಮತ್ತು ಹಾಲು ಉತ್ಪನ್ನಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಅರಿವಿರುವುದರಿಂದ ಹಾಗೂ ಬೇಡಿಕೆಯು ಹೆಚ್ಚಿರುವುದರಿಂದ, ಅಧಿಕ ಉತ್ಪಾದನೆಗಿಂತ ಗುಣಮಟ್ಟದ ಉತ್ಪಾದನೆಯ ಅವಶ್ಯಕತೆ ಇರುವುದರಿಂದ, ಹಾಲು ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ಹೆಚ್ಚಿನ ದಕ್ಷತೆ ಹಾಗೂ ನಿರ್ವಹಣೆಯಿಂದ ಆರೋಗ್ಯಕರ ಹಾಗೂ ಸ್ವಚ್ಛ ಹಾಲನ್ನು ಉತ್ಪಾದಿಬೇಕಾಗಿದೆ.

ಶುದ್ಧ ಹಾಲು ಎಂದರೆ ಆರೋಗ್ಯ ಕರ ಹಸುವಿನ ಕೆಚ್ಚಲಿನಿಂದ ಯಾವುದೇ ತರಹದ ಹೊರ ಸೂಕ್ಷ್ಮಾಣುಗಳಿಂದ ಕಲುಷಿತಗೊಳ್ಳದೆ ಮುಕ್ತವಾಗಿರುವುದು. ಹಾಲು ಸೂಕ್ಷ್ಮ ದ್ರವವಾಗಿದ್ದು ಬಲು ತೀವ್ರವಾಗಿ ಕಲುಷಿತಗೊಳ್ಳುವುದರಿಂದ ಸೇವನೆಗೆ ಅದು ಅನುಪಯುಕ್ತವಾಗುತ್ತದೆ.

ಆದ್ದರಿಂದ ಹಾಲು ಉತ್ಪಾದನೆಯ ಮೊದಲ ಹಂತದಿಂದ ಅಂದರೆ ಹಸುವಿನ ಕೊಟ್ಟಿಗೆಯಿಂದ ಹಿಡಿದು ಅದನ್ನು ಗ್ರಾಹಕರಿಗೆ ತಲುಪಿಸುವರೆಗೆ ನಾವು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಹಸುಗಳನ್ನು ಕಟ್ಟುವ ಕೊಟ್ಟಿಗೆ, ಪರಿಸರ ಶುಭ್ರತೆಯಿಂದ ಕೂಡಿರಬೇಕು. ಆರೋಗ್ಯಕರ ಹಸುವಿನಲ್ಲಿ ಉತ್ಪಾದನೆಗೊಳ್ಳುವ ಹಾಲು, ಅದರ ಗುಣಮಟ್ಟ ಅತಿ ಮಹತ್ವವಾದುದು.

ಕೊಟ್ಟಿಗೆ ಹಾಗೂ ಪರಿಶುದ್ಧ ಪರಿಸರ

- ಹಸುವಿನ ಕೊಟ್ಟಿಗೆ ಸ್ವಚ್ಛತೆಯಿಂದ ಕೂಡಿದ್ದು, ನೆಲ ಸಮತಟ್ಟಾಗಿದ್ದು ಗಂಜಲ ಮತ್ತು ಸಗಣಿಯನ್ನು ಶುದ್ಧ ಮಾಡಲು ಇಳಿಜಾರಾಗಿರಬೇಕು.
-ಮಣ್ಣಿನ ನೆಲದ ಮೇಲೆ ಧೂಳು ಏಳದಂತೆ ನೀರನ್ನು ಸಿಂಪಡಿಸಬೇಕು. ಪ್ರಾಣಿಗಳನ್ನು ಮತ್ತು ಹಾಲು ಉತ್ಪಾದನೆಯಲ್ಲಿ ಬಳಸುವ ಪಾತ್ರೆಗಳನ್ನು ಶುದ್ಧವಾದ ನೀರಿನಲ್ಲಿ ತೊಳೆಯಬೇಕು.
- ಗುಣಮಟ್ಟದ ಕ್ರಿಮಿನಾಶಕದಿಂದ ನೊಣ ಮತ್ತು ಸೊಳ್ಳೆಗಳು ಬಾರದಂತೆ ನೋಡಿಕೊಳ್ಳಬೇಕು.
- ಗೊಬ್ಬರದ ಗುಂಡಿಯನ್ನು ಹಸುಗಳ ಕೊಟ್ಟಿಗೆಯಿಂದ ಸುರಕ್ಷಿತ ದೂರದಲ್ಲಿಡಬೇಕು.
- ಹಾಲನ್ನು ಕರೆಯುವಾಗ ಧೂಳುಮಿಶ್ರಿತ ಆಹಾರವನ್ನು ಹಸುಗಳಿಗೆ ನೀಡಬಾರದು ಹಾಗೂ ಕ್ರಿಮಿನಾಶಕ ದ್ರವ್ಯವನ್ನು ಸಿಂಪಡಿಸಬಾರದು.

ಪರಿಶುದ್ಧ ಮತ್ತು ಆರೋಗ್ಯಕರ ರಾಸು
- ಹಸುಗಳ ಉತ್ತಮ ಆರೋಗ್ಯಕ್ಕಾಗಿ ಅವುಗಳನ್ನು ಸಂಕ್ರಾಮಿಕ ರೋಗಗಳಿಂದ ವಿಮುಕ್ತಗೊಳಿಸಬೇಕು.
- ಹಸುವನ್ನು ಮಾಲಿಷ್ ಮಾಡಿ ಶುದ್ಧ ನೀರಿನಿಂದ ತೊಳೆದು ಹಾಲನ್ನು ಕರೆಯುವುದು.
- ರಾಸುಗಳ ಬಾಲವನ್ನು ಹಿಂಬದಿಯ ಕಾಲಿಗೆ ಕಟ್ಟುವುದು, ಕೆಚ್ಚಲಿನ ಕೆಲಭಾಗದ ಕೂದಲನ್ನು ತೆಗೆಯುವುದರಿಂದ ಹಾಲು ಕರೆಯುವ ವೇಳೆಯಲ್ಲಿ ಕೂದಲು ಬೀಳದಂತೆ ತಡೆಗಟ್ಟಬಹುದು.
- ಕ್ರಿಮಿನಾಶಕದಿಂದ ಕೆಚ್ಚಲನ್ನು ಶುದ್ಧಗೊಳಿಸಬೇಕು.
- ಆರೋಗ್ಯಕರ ರಾಸುಗಳನ್ನು ಅನಾರೋಗ್ಯ ರಾಸುಗಳಿಂದ ಬೇರ್ಪಡಿಸಬೇಕು ಮತ್ತು ಅನಾರೋಗ್ಯಕರ ಪಶುವಿನಿಂದ ಹಾಲನ್ನು ಪ್ರತ್ಯೇಕವಾಗಿ ಕರೆದು ವಿಸರ್ಜಿಸಬೇಕು.

ಶುದ್ಧ ಹಾಲಿನ ಪಾತ್ರೆಗಳು
- ಹಾಲನ್ನು ಚೆನ್ನಾಗಿ ತೊ/bಳೆದ ಕಂಠವು ಸಣ್ಣದಾಗಿರುವ ಹಾಲಿನ ಪಾತ್ರೆಯಲ್ಲಿ ಕರೆಯುವುದರಿಂದ ಧೂಳು ಬೀಳುವುದನ್ನು ತಡೆಗಟ್ಟಬಹುದು.
- ಹಾಲನ್ನು ಕರೆಯುವ ಮುನ್ನ ಮತ್ತು ನಂತರ ಹಾಲಿನ ಪಾತ್ರೆಗಳನ್ನು ಕ್ರಿಮಿನಾಶಕ ದ್ರವ್ಯದಿಂದ ತೊಳೆದು ಬಿಸಿಲಿನಲ್ಲಿ ಒಣಗಿಸುವುದು

ಹಾಲು ಕರೆಯುವಾತ
- ಹಾಲು ಕರೆಯುವಾತ ಯಾವುದೇ ಸಾಂಕ್ರಾಮಿಕ ರೋಗದಿಂದ ವಿಮುಕ್ತನಾಗಿರಬೇಕು ಹಾಗೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
- ಹಾಲು ಕರೆಯುವ ಸಮಯಕ್ಕೆ ಮುಂಚೆ ಕೈಯನ್ನು ಸಾಬೂನು ಅಥವಾ ಕ್ರಿಮಿನಾಶಕ ದ್ರವ್ಯದಿಂದ ತೊಳದು ಒರೆಸಬೇಕು.
- ಹಾಲನ್ನು ಕರೆಯುವಾಗ ಶುಭ್ರವಾದ ಬಟ್ಟೆಯನ್ನು ಧರಿಸಬೇಕು ಮತ್ತು ತಲೆಯನ್ನು ಬಟ್ಟೆಯಿಂದ ಕಟ್ಟುವುದರಿಂದ ಕೂದಲು ಹಾಲಿನಲ್ಲಿ ಬೀಳುವುದನ್ನು ತಡೆಯಬಹುದು.
- ಹಾಲು ಕರೆಯುವಾತ ಉಗುರುಗಳನ್ನು ಕತ್ತರಿಸಿ ಶುದ್ಧವಾಗಿಟ್ಟುಕೊಂಡು, ಕೆಮ್ಮುವುದನ್ನು, ಸೀನುವುದನ್ನು ಹಾಗೂ ಅಕ್ಷಿ ಹಾಕುವುದನ್ನು ಹಾಲು ಕರೆಯುವ ವೇಳೆಯಲ್ಲಿ ತಡೆಯಬೇಕು,
- ಹಾಲು ಕರೆಯುವಾತ ನಿಗದಿತ ಸಮಯದಲ್ಲಿ ಶೀಘ್ರವಾಗಿ ಹಾಲನ್ನು ಕರೆಯಬೇಕು.

ಶುದ್ಧ ಹಾಲು ಉತ್ಪಾದನೆ
- ಹಾಲನ್ನು ಕರೆಯುವಾಗ ಹಸುವಿನ ಬಾಲವನ್ನು ಹಿಂಬದಿಯ ಕಾಲುಗಳಿಗೆ ಕಟ್ಟಬೇಕು
- ಕೆಚ್ಚಲನ್ನು ಪೊಟ್ಯಾಸಿಯಂ ಫರ್ಮಾಂಗನೇಟಿನ ಕೆಲವು ಹರಳುಗಳನ್ನು ನೀರಿನಲ್ಲಿ ಕರಗಿಸಿದ ದ್ರವ್ಯದಿಂದ ಕೆಚ್ಚಲನ್ನು ತೊಳೆದು ಶುದ್ಧ ಬಟ್ಟೆಯಿಂದ ಒರೆಸುವುದು.
- ಹಾಲನ್ನು ಪ್ರಶಾಂತವಾದ ವಾತಾವರಣದಲ್ಲಿ ಕರೆಯುವುದು ಮತ್ತು ಯಾವುದೇ ರೀತಿಯ ಅಹಿತರ ಶಬ್ದಗಳಿಂದ ದೂರ ವಿರುವುದು.
- ಹಸುವಿನ ಕೆಚ್ಚಲನ್ನು ತಿಕ್ಕುವುದರಿಂದ ಶೀಘ್ರ ಹಾಗೂ ಪೂರ್ತಿ ಸ್ವರದಿಂದ ಹಾಲು ಬಿಡುತ್ತದೆ.
- ಆರಂಭಿಕ ಹಾಲನ್ನು ಪ್ರತ್ಯೇಕವಾಗಿ ಕರೆಯುವುದರಿಂದ ಸೂಕ್ಷ್ಮಜೀವಿಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಕೆಚ್ಚಲು ಬಾವಿನ ಖಾತರಿ ಮಾಡಬಹುದು. ಕೆಚ್ಚಲು ಬಾವಿನ ಖಾತರಿ ಮಾಡಬಹುದು ನಂತರ ಆರಂಭಿಕ ಹಾಲನ್ನು ವಿಸರ್ಜಿಸುವುದು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.