'ಸುಧಾರಣೆಗೊಂಡ ಶುಂಠಿಯ ದರ'

April 09, 2018 ⊄   By: Hasiru Suddimane

ವಿಶ್ವಭೇಷಜ ಎಂದು ಕರೆಯುವ ಶುಂಠಿ ವಿಶ್ವದ ಎಲ್ಲೆಡೆ ಸಿಗುವ ಅತ್ಯುತ್ತಮ ಔಷಧ. ಬಹು ದಿನಗಳ ನಂತರ ಹಸಿ ಶುಂಠಿ ಬೆಲೆ ಏರುಗತಿ ಕಂಡಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಏಕೆಂದರೆ ಉತ್ತಮ ಗುಣಮಟ್ಟದ ಶುಂಠಿ ಕ್ವಿಂಟಾಲ್ ಗೆ 3,500 ರೂ.ವರೆಗೆ ಮಾರಾಟವಾಗುತ್ತಿದೆ. ಆದರೆ ಈಗಾಗಲೇ ಬಹುತೇಕ ರೈತರು ತಮ್ಮ ಜಮೀನಿನಿಂದ ಶುಂಠಿ ಕಿತ್ತು ಮಾರಾಟ ಮಾಡಿದ್ದು, ಉಳಿದ ಕೆಲವೇ ರೈತರಿಗೆ ಉತ್ತಮ ಬೆಲೆಯ ಲಾಭ ಸಿಗಲಿದೆ.

ಬೆಲೆ ಕುಸಿತದ ಕಾರಣದಿಂದ ಶುಂಠಿ ಬೆಳೆಗಾರರು ಕಂಗಾಲಾಗಿದ್ದರು. ಈಗ ಬೆಲೆ ಚೇತರಿಕೆಯ ಹಾದಿ ಹಿಡಿದಿದ್ದು, ಮೂರು ವರ್ಷಗಳ ಬಳಿಕ 3,500 ರೂ. ದರ ಲಭಿಸುವಂತಾಗಿದೆ. ಮಾರುಕಟ್ಟೆ ದರ ಏರಿಕೆಯ ಕಾರಣ ರೈತರು ಹಸಿ ಶುಂಠಿ ಕೀಳುವ ಭರಾಟೆ ಕಂಡುಬರುತ್ತಿದೆ.

ಕಳೆದ ನವೆಂಬರ್ನಿಂದ ಫೆಬ್ರವರಿ ಅಂತ್ಯದ ವರೆಗೆ ಕ್ವಿಂಟಾಲ್ ಒಂದಕ್ಕೆ 1,500 ರೂ.ನಿಂದ 1,800 ರೂ. ವರೆಗೆ ದರ ಇತ್ತು. ಮಾರ್ಚ್ ಎರಡನೇ ವಾರದಿಂದ 2000 ರೂ. ದಾಟುತ್ತಾ ಬಂದಿದ್ದು, ಈಗ ಮತ್ತಷ್ಟು ಚೇತರಿಕೆ ಕಂಡಿದೆ. 2012ರಲ್ಲಿ ಶುಂಠಿ ದರ ಕ್ವಿಂಟಾಲ್ಗೆ 18,000 ರೂ. ವರೆಗೆ ತಲುಪಿ ಇತಿಹಾಸ ನಿರ್ಮಿಸಿತ್ತು.

ಬೀಜದ ಶುಂಠಿ ಖರೀದಿ, ನಾಟಿ ಮಾಡುವಿಕೆ, ನೀರಾವರಿ ವ್ಯವಸ್ಥೆ, ಗೊಬ್ಬರ, ಔಷಧ, ಕೂಲಿ ನಿರ್ವಹಣೆ ಮುಂತಾದವುಗಳ ಅಧಿಕ ಖರ್ಚು ಮತ್ತು ಸವಾಲುಗಳೊಂದಿಗೆ ಸಾಗುವ ಶುಂಠಿ ಕೃಷಿ ಗ್ರಾಮೀಣ ರೈತರಿಗೆ ಜೂಜಾಗಿ ಪರಿಣಮಿಸಿದೆ. ಕಳೆದ ವರ್ಷ ಬೀಜದ ಶುಂಠಿ ಕ್ವಿಂಟಾಲ್ ಒಂದಕ್ಕೆ 3,500 ರೂ. ವರೆಗೂ ಇತ್ತು. ದುಬಾರಿ ದರ ಕೊಟ್ಟು ಖರೀದಿಸಿ ಕೃಷಿ ನಡೆಸಿದ ರೈತರು ಮಾರಾಟ ಮಾಡುವ ಸಮಯದಲ್ಲಿ ಕ್ವಿಂಟಾಲ್ ಒಂದಕ್ಕೆ ರೂ.1500 ದರ ಕಂಡು ಕಂಗಾಲಾಗಿದ್ದರು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.