ಆನೆ ದೂರವಿಡಲು ಗುಯ್ ಗುಡುವ ಶಬ್ಧ

February 14, 2018 ⊄   By: Hasiru Suddimane

ಕಾಡಿನಲ್ಲಿ ಆರಾಮಾಗಿ ತಿಂದು ದಷ್ಟ ಪುಷ್ಟವಾಗಿರುವ ಆನೆಗಳು ಆಗಾಗ ನಗರಕ್ಕೆ ವಿಸಿಟ್ ಕೊಡುತ್ತಿರುತ್ತದೆ. ನಗರೀಕರಣದ ಬರದಲ್ಲಿರುವ ನಾವು ಅವುಗಳ ಸ್ಥಳವನ್ನು ಆಕ್ರಮಿಸುತ್ತಿದ್ದಂತೆ ಅವುಗಳು ನಮ್ಮ ನಗರವನ್ನು ಆಕ್ರಮಿಸುತ್ತಿವೆ. ಪದೇ ಪದೇ ಕೇಳಿ ಬರುತ್ತಿರುವ ರೈತರ ಕೃಷಿ ಭೂಮಿಗೆ ದಾಂಗುಡಿ ಇಟ್ಟಿರುವ ಗಜಪಡೆಗಳು ತಿಂದು ತೇಗಿ ಬೆಳೆಯ ನಾಶ ಮಾಡುತ್ತಿವೆ. ವರ್ಷಗಟ್ಟಲೆ ಬೆಳೆಯುತ್ತಿದ್ದ ಬೆಳೆ ಒಂದೇ ರಾತ್ರಿಯಲ್ಲಿ ಸಂಪೂರ್ಣ ನಾಶವಾಗುತ್ತಿದೆ. ಆನೆಗಳು ಕಾಲಿಡದಂತೆ ಬೇಲಿ ನಿರ್ಮಿಸುವುದು, ಟ್ರೆಂಚ್ ತೋಡುವುದು ಎಷ್ಟೇ ಸುರಕ್ಷತೆ ಮಾಡಿದರೂ ಅವುಗಳ ಹಾವಳಿ ತಪ್ಪುತ್ತಿಲ್ಲ.

ಬೆಳೆಗಳ ನಾಶ ಒಂದು ಕಡೆಯಾದರೆ, ಆನೆಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿರುವುದು ಮತ್ತೊಂದು ನೋವಿನ ಸಂಗತಿ. ಅರಣ್ಯ ದಾಟಿ ಹೊಲಗಳಿಗೆ ಬರುವಾಗ ವಿದ್ಯುತ್ ಬೇಲಿಗಳಿಗೆ ಸಿಲುಕಿ ಸಾವನ್ನುಪ್ಪುತ್ತಿರುವುದು. ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿ.

ರೈಲಿಗೆ ಸಿಲುಕಿ ಸಾವನ್ನಪ್ಪುವುದನ್ನು ತಪ್ಪಿಸಲು ಕೀಟಗಳ ಮುದ್ರಿತ ಧ್ವನಿ ಇರುವ ಸಾಧನ ಬಳಸಲು ಈಶಾನ್ಯ ಗಡಿ ರೈಲ್ವೆ (ಎನ್ ಎಫ್ ಆರ್) ನಿರ್ಧರಿಸಿದೆ. ಇದನ್ನು ತಪ್ಪಿಸಲು ರೈಲ್ವೆ ಲೆವೆಲ್ ಕ್ರಾಸಿಂಗ್ ಗಳು ಮತ್ತು ಇತರ ಪ್ರಮುಖ ತಿರುವುಗಳಲ್ಲಿ ಈ ಸಾಧನಗಳನ್ನು ಬಳಸಲಾಗುವುದು.

ಈ ಧ್ವನಿ ಸುಮಾರು 600 ಮೀಟರ್ ದೂರದವರೆಗೆ ಕೇಳಿಸುತ್ತದೆ. ಈ ಧ್ವನಿ ಕೇಳಿ ಬೆದರುವ ಆನೆಗಳು, ತಮ್ಮ ದಾರಿ ಬದಲಿಸಿಕೊಳ್ಳುತ್ತವೆ' ಎಂದು ಎನ್ಎಫ್ಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಈ ಯೋಜನೆಯನ್ನು ಅಸ್ಸಾಂನ ರಂಗಿಯಾ ವಿಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅಲ್ಲಿ ಇದು ಯಶಸ್ವಿಯಾಗಿದೆ. ಇಲಾಖೆ ಅಳವಡಿಸಿರುವ ಸಾಧನದಿಂದ ಹೊರಡುವ ಮುದ್ರಿತ ಧ್ವನಿಯಿಂದ ಆನೆಗಳು ದೂರ ಹೋಗುತ್ತವೆ ಎಂದು ಅಲ್ಲಿನ ಸ್ಥಳೀಯರೂ ತಿಳಿಸಿದ್ದಾರೆ. ಅಲಿಪುರದ್ವಾರ ವಿಭಾಗದಲ್ಲಿ ಶೀಘ್ರವೇ ಈ ಯೋಜನೆ ಜಾರಿಗೊಳಿಸಲಾಗುವುದು' ಎಂದು ಅವರು ವಿವರಿಸಿದ್ದಾರೆ.

'2017ರಲ್ಲಿ ರಂಗಿಯಾ ವಿಭಾಗದ ಗೋಲ್ಪಾರದಲ್ಲಿ ಈ ಸಾಧನ ಅಳವಡಿಸಿದ ಮೇಲೆ ಆ ವ್ಯಾಪ್ತಿಯಲ್ಲಿ ಒಂದೇ ಒಂದು ಆನೆಯೂ ರೈಲಿಗೆ ಸಿಲುಕಿ ಮೃತಪಟ್ಟಿಲ್ಲ' ಎಂದು ಅಲಿದ್ವಾರಪುರ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಣವ್ ಜ್ಯೋತಿ ಶರ್ಮ ತಿಳಿಸಿದ್ದಾರೆ.
ಎನ್ಎಫ್ಆರ್ ವ್ಯಾಪ್ತಿಯಲ್ಲಿ ಒಟ್ಟು 27 ಆನೆ ಕಾರಿಡಾರ್ಗಳಿದ್ದು, ಬಂಗಾಳದ ಉತ್ತರ ಭಾಗ, ಬಿಹಾರದ ಪೂರ್ವ ಭಾಗ ಮತ್ತು ಈಶಾನ್ಯ ಭಾರತವನ್ನು ಒಳಗೊಂಡಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.