ಬಳ್ಳಾರಿಯಲ್ಲಿ ಸುಕೋ ಬ್ಯಾಂಕ್ ನೂತನ ಶಾಖೆ

March 12, 2018 ⊄   By: Hasiru Suddimane

ಉತ್ತರ ಕರ್ನಾಟಕದ ಪ್ರತಿಷ್ಟಿತ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್ ತನ್ನ ನೂತನ ಶಾಖೆಯನ್ನು ಬಳ್ಳಾರಿಯಲ್ಲಿ ಹೊಸ ಶಾಖೆಯನ್ನು ಸೋಮವಾರದಂದು 12ರಂದು ಪ್ರಾರಂಭಿಸಿದೆ.
ಜಯಪ್ರಕಾಶ್ ಜೆ.ಗುಪ್ತಾ, ಚಾರ್ಟ್ ರ್ಡ್ ಅಕೌಂಟೆಂಟ್ ಹಾಗೂ ಶಬರಿ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಬಳ್ಳಾರಿಯ ಅಧ್ಯಕ್ಷರು ಮತ್ತು ಸುಕೋ ಬ್ಯಾಂಕಿನ ಅಧ್ಯಕ್ಷರಾದ ಮೋಹಿತ್ ಮಸ್ಕಿ , ನಿರ್ದೇಶಕರುಗಳಾದ ಮುರಳೀಧರ ರೆಡ್ಡಿ ಪಿ ಹಾಗೂ ಶ್ರೀಮತಿ ಸಾವಿತ್ರಿ ಅವರುಗಳು ದೀಪ ಬೆಳಗಿಸುವ ಮೂಲಕ ಶಾಖೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಯಪ್ರಕಾಶ್ ಜೆ.ಗುಪ್ತಾ ಮಾತನಾಡಿ 24 ವರ್ಷಗಳ ಹಿಂದೆ ಸಿಂಧನೂರಿನಲ್ಲಿ ಆರಂಭವಾದ ಬ್ಯಾಂಕು ತನ್ನ ನೂತನ ಶಾಖೆಯನ್ನು ಬಳ್ಳಾರಿಯಲ್ಲಿ ಆರಂಭಿಸಿರುವುದು ಸಂತೋಷ ತಂದಿದೆ. ಗ್ರಾಹಕ ಸ್ನೇಹಿ ಯೋಜನೆಗಳು ಹಾಗೂ ಉತ್ತಮ ಸೇವೆಗಳ ಮೂಲಕ ಉತ್ತರ ಕರ್ನಾಟಕದ ಹೆಮ್ಮೆಯ ನಂ.1 ಬ್ಯಾಂಕ್ ಆಗಿದೆ ಎಂದು ಶ್ಲಾಘಿಸುತ್ತಾ ಸುಕೋ ಬ್ಯಾಂಕ್ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಷೆಡ್ಯೂಲ್ಡ್ ಬ್ಯಾಂಕ್ ಸ್ಥಾನ ಹೊಂದಲಿ ಎದು ಹಾರೈಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಬ್ಯಾಂಕಿನ ಎಮ್.ಡಿ. ಶ್ರೀ ಪರಿಮಳಾಚಾರ್ಯ ಎಸ್. ಅಗ್ನಿಹೋತ್ರಿಯವರು ಸುಕೋ ಬ್ಯಾಂಕಿನ ಹುಟ್ಟು ಹಾಗೂ ಬೆಳವಣಿಗೆಯನ್ನು ವಿವರಿಸಿದರು. ಆರಂಭಿಕ ದಿನಗಳಲ್ಲಿ ಬ್ಯಾಂಕಿನ ಆಗಿನ ಆಡಳಿತ ಮಂಡಳಿಯು ತೆಗೆದುಕೊಂಡ ಕಠಿಣ ನಿರ್ಧಾರಗಳು ಬ್ಯಾಂಕು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಉದಾಹರಣೆಗೆ ಸುಕೋ ಬ್ಯಾಂಕ್ ಆರಂಭದಲ್ಲೇ ನಿರ್ದೇಶಕರು ಹಾಗೂ ಅವರ ಸಂಬಂಧಿಗಳಿಗೆ ಸಾಲ ನೀಡುವಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿತ್ತು. ನಂತರದ ಕೆಲ ವರ್ಷಗಳಲ್ಲಿ ರಿಸರ್ವ್ ಬ್ಯಾಂಕು ಸುತ್ತೋಲೆ ಹೊರಡಿಸಿ ನಿರ್ದೇಶಕರು ಹಾಗೂ ಅವರ ಸಂಬಂಧಿಗಳಿಗೆ ಸಾಲ ನೀಡುವಿಕೆಯನ್ನು ನಿರ್ಬಂಧಿಸಿತು. ಅಂದರೆ ರಿಜರ್ವ್ ಬ್ಯಾಂಕ್ ನಿರ್ದೇಶನ ನೀಡುವುದಕ್ಕೂ ಮೊದಲೇ ಸುಕೋ ಬ್ಯಾಂಕ್ ಈ ನಿರ್ಧಾರ ತಳೆದಿತ್ತು. ಈಗಲೂ ರಿಜರ್ವ್ ಬ್ಯಾಂಕ್ ನಿರ್ದೇಶಕರು ಹಾಗೂ ಅವರ ಸಂಬಂಧಿಗಳಿಗೆ ಉದ್ಯೋಗ ನೀಡುವ ಬಗ್ಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ಸುಕೋ ಬ್ಯಾಂಕ್ ಈ ತರಹದ ನಿರ್ಬಂಧ ವಿಧಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ಮೋಹಿತ ಮಸ್ಕಿಯವರು ಬ್ಯಾಂಕಿನ ಸಾಧನೆಗಳನ್ನು ವಿವರಿಸುತ್ತಾ ಮಾತನಾಡಿ ಮಾರ್ಚ್ 8ಕ್ಕೆ 735 ಕೋಟಿ ದಾಖಲೆಯ ವಹಿವಾಟು ದಾಟಿದ್ದು, ಇಡೀ ರಾಜ್ಯಕ್ಕೆ ತನ್ನ ಕಾರ್ಯ ಕ್ಷೇತ್ರ ವಿಸ್ತರಿಸುವ ಗುರಿ ಹೊಂದಿದೆ. ಮಾರ್ಚ್ 14 2008ರಂದು ಕಲ್ಬುರ್ಗಿಯಲ್ಲಿ ನೂತನ ಶಾಖೆ ಉದ್ಘಾಟನೆಗೊಳ್ಳಲಿದೆ ಎಂದರು.

ಸಮಾರಂಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪರಿಮಳಾಚಾರ್ಯ ಎಸ್.ಅಗ್ನಿಹೋತ್ರಿ, ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಅನಿತಾ ಮತ್ತು ಮತ್ತಿತರು ಹಾಜರಿದ್ದರು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.