ಆರ್.ಸಿ.ಎಫ್.ನವರ ಬೇವು ಲೇಪಿತ ಉಜ್ವಲಾ ಯೂರಿಯಾ

March 10, 2018 ⊄   By: Hasiru Suddimane

ಇಂದು ಶೇಕಡಾ 80 ರಷ್ಟು ಸಾರಜನಕವನ್ನು ಯೂರಿಯಾ ಮೂಲಕ ಜಮೀನುಗಳಿಗೆ ಒದಗಿಸಲಾಗುತ್ತಿರುವುದರಿಂದ ಯೂರಿಯಾ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಪ್ರಮುಖ ವಿಷಯವಾಗಿದೆ. ಜೈವಿಕ ಇಂಗಾಲದ ಒಂದು ಸಂಯೋಜಿತ ಧಾತುವಾಗಿರುವ ಯೂರಿಯಾದಲ್ಲಿ (NH2-CO-NHS) ಶೇ.46% ರಷ್ಟು ಸಾರಜನಕ ಇರುವುದರಿಂದ ಪ್ರಮುಖ ಗೊಬ್ಬರವನ್ನಾಗಿ ಬಳಸಲಾಗುತ್ತಿದೆ. ಸಾರಜನಕದ ಜೊತೆಗೆ ಅದರಲ್ಲಿ ಶೇ. 20ರಷ್ಟು ಇಂಗಾಲ. ಶೇ 26.7 ರಷ್ಟು ಆಮ್ಲಜನಕ ಮತ್ತು ಶೇ. 6.7 ರಷ್ಟು ಜಲಜನಕವೂ ಇದೆ. ಸಾರಜನಕಯುಕ್ತ ಗೊಬ್ಬರಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ನಷ್ಟವುಂಟಾಗುತ್ತದೆ. ಇದನ್ನು ಕೂಡಲೇ ತಡೆಯ ಬೇಕಾದ ಅವಶ್ಯಕತೆ ಇದೆ. ಅಮೋನಿಕಲ್ ಸಾರಜನಕವನ್ನು ನೈಟ್ರೇಟ್ ಸಾರಜನಕವನ್ನು ಸೂಕ್ಷಾಣುಗಳು ಪರಿವರ್ತಿಸುವುದರಿಂದ ಈ ನಷ್ಟ ಉಂಟಾಗುತ್ತಿದೆ.

ಬೇವು
ಪುರಾತನ ಕಾಲದಿಂದಲೂ ಬೇವು (ಅಜಾಡಿರಾಕ್ಟ) ರೈತನ ಮಿತ್ರನಾಗಿದೆ. 4000 ವರ್ಷಗಳ ಹಿಂದಿನ ವೇದ ಕಾಲದಿಂದಲೂ ಬೇವಿಗೆ ಪೂಜ್ಯ ಸ್ಥಾನ. ಬೇವು ತುಂಬಾ ಕಹಿಯಾಗಿರುತ್ತದೆ. ಬೇವಿನ ಬೀಜಗಳು ಎಲೆಗಳು, ಕಾಂಡ, ಬೇರು, ಮರ ಹೀಗೆ ಎಲ್ಲಾ ಭಾಗಗಳಿಂದಲೂ ರಾಸಾಯನಿಕ ಉಪಯುಕ್ತತೆಯಿದ್ದು ಬೇವಿನ ಎಣ್ಣೆಯಿಂದ ಕೀಟನಾಶಕ, ಪ್ರಾಣಿ ನಿರೋಧಕ, ಬೂಸ್ಟು ನಿವಾರಕ, ಸೂಕ್ಷಾಣುನಾಶಕಗಳನ್ನು ತಯಾರಿಸುತ್ತಾರೆ ಬೀಜಗಳೇ ಎಣ್ಣೆಯ ಪ್ರಮುಖ ಮೂಲ.

ಬೇವು ಲೇಪಿತ ಯೂರಿಯಾ

ಇಂದು ಲಭ್ಯವಿರುವ ಎರಡು ಪ್ರಮುಖ ವಸ್ತುಗಳಿಂದ ಬೇವು ಲೇಪಿತ ಯೂರಿಯಾವನ್ನು ಸೃಷ್ಢಿಸಲಾಗುತ್ತದೆ. ಮೊದಲನೆಯದು, ತಂತ್ರಜ್ಞಾನದ ಆವಿಷ್ಕಾರದ ಫಲವಾಗಿ ಗಾಳಿ ಮತ್ತು ಕೊಡುಗೆಯಾಗಿರುವ ಬೇವು, ಸಾರಜನಕವನ್ನು ಲೋಪಗೊಳಿಸುವ ಕ್ರಿಯೆಯನ್ನು ಬೇವು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ. ಹೀಗಾಗಿ ಸಾರಜನಕವು ದೀರ್ಘಕಾಲ ಉಳಿದು ಬೆಳೆಯನ್ನು ಅಭಿವೃದ್ಧಿಪಡಿಸುತ್ತದೆ. ಬೇವು ಲೇಪಿತ ಯೂರಿಯಾವನ್ನು ಆರ್.ಸಿ.ಎಫ್ ಟ್ರಾಂಬೆ ಮತ್ತು ಥಲ್ ಘಟಕಗಳಲ್ಲಿ ತಯಾರಿಸುತ್ತಿದೆ. ಯೂರಿಯಾ ಮೇಲೆ ಸಮನಾಗಿ ಬೇವಿನ ಎಣ್ಣೆ ಸಿಂಪಡಿಸಿ ಇದನ್ನು ಉತ್ಪಾದಿಸಲಾಗುತ್ತಿದೆ.

ಬೇವು ಲೇಪಿತ ಯೂರಿಯಾ-ಹೆಚ್ಚಿನ ಮೌಲ್ಯ

ಇಂದಿನ ವಿಶ್ವದಲ್ಲಿ ಸಾರಜನಕ ಪ್ರಮುಖ ಆಧಾರವಾಗಿರುವ ಯೂರಿಯಾ ಇದೀಗ ಬೇವಿನೆಣ್ಣೆ ಲೇಪನದಿಂದ ಮತ್ತಷ್ಟು ಬಲಗೊಂಡಿದೆ.
ಕಡಿಮೆ ಆರ್ದ್ರತೆ
ಬೇವು ಲೇಪಿತ ಯೂರಿಯಾದಲ್ಲಿ ಆರ್ದ್ರತಾ ಗುಣ ಕಡಿಮೆ ಇರುತ್ತದೆ. ಇದರಿಂದಾಗಿ ಚೀಲದಲ್ಲಿಯೇ ಗಟ್ಟಿಯಾಗುವುದು ಕಡಿಮೆ

ಕಡಿಮೆ ನಷ್ಟ
ಸಾಮಾನ್ಯವಾಗಿ ಯೂರಿಯಾಗೆ ಹೋಲಿಸಿದರೆ ಬೇವು ಲೇಪಿತ ಯೂರಿಯಾ ಜಮೀನಿಗೆ ಹಾಕಿದಾಗ ಸೂರ್ಯನ ಶಾಖದಿಂದಾಗುವ ನಷ್ಟವು ಕಡಿಮೆ ಇರುತ್ತದೆ.

ನೈಟ್ರೇಟ್ ಭಾದಕದ ತಡೆ
ಜಮೀನಿನಲ್ಲಿರುವ ನೈಟ್ರಿಪ್ರೈಯಿಂಗ್ ಸೂಕ್ಷ್ಮಾಣು ಅಮೋನಿಕಲ್ ಸಾರಜನಕವನ್ನು ನೈಟ್ರೇಟ್ ಸಾರಜನಕವನ್ನಾಗಿ ಪರಿವರ್ತನೆಗೊಳಿಸುತ್ತದೆ. ಇದು ಶೀಘ್ರದಲ್ಲಿ ನೀರಿನಲ್ಲಿ ಕರುಗುವುದರಿಂದ ಬಹುಬೇಗ ಬೇರಿನಿಂದ ಕೆಳಗಿಳಿಯುತ್ತದೆ. ಬೇವು ಲೇಪಿತ ಯೂರಿಯಾ ಈ ಸೂಕ್ಷ್ಮಾಣುಗಳನ್ನು ಕೊಂದು ನೈಟ್ರೇಟ್ ಪರಿವರ್ತನೆಯನ್ನು ತಡೆಯುತ್ತದೆ. ಇದರಿಂದಾಗಿ ನೈಟ್ರೇಟ್ ನಷ್ಟವುಂಟಾಗುವುದಿಲ್ಲ.

ಡೀನೈಟ್ರಿಫಿಕೇಷನ್ ತಡೆ
ಒಳಚರಂಡಿ ಮತ್ತು ಗಾಳಿ ವ್ಯವಸ್ಥೆ ಅಲ್ಪವಿರುವ ಕಡೆ, ಅದರಲ್ಲಿಯೂ ವಿಶೇಷವಾಗಿ ಭತ್ತದ ಬೆಳೆಯ ಸಂದರ್ಭದಲ್ಲಿ ನೈಟ್ರೇಟ್ ಸಾರಜನಕವು ಸಾರಜನಕದ ಅನಿಲವಾಗಿ ಮಾರ್ಪಟ್ಟು ವಾತಾವರಣದಲ್ಲಿ ಕಣ್ಮರೆಯಾಗುತ್ತದೆ. ಅದೇ ಸ್ಥಳದಲ್ಲಿ ಬೇವು ಲೇಪಿತ ಯೂರಿಯಾ ಉಪಯೋಗಿಸಿದರೆ ಇಂಥ ಡೀನೈಟ್ರಿಫಿಕೇಷನ್ ನಷ್ಟಗಳಿಗೆ ಅವಕಾಶವಿರುವುದಿಲ್ಲ.

ಪುಡಿಯಾಗುವುದರ ತಡೆ
ಪ್ರಿಲ್ಡ್ ಯೂರಿಯಾದ ಉತ್ಪಾದನೆ, ಸಾಗಾಣಿಕೆ ಮತ್ತು ನಿರ್ವಹಣೆಯ ಸಂದರ್ಭದಲ್ಲಿ ಪುಡಿಯಾಗುವ ಸಾಧ್ಯತೆಗಳಿರುತ್ತದೆ. ಎಫ್.ಸಿ.ಓ. ಪ್ರಕಾರ ಶೇ.20 ರಷ್ಟು ಪುಡಿಯಾಗುವುದಕ್ಕೆ ಮಾತ್ರ ಅನುಮತಿ ಇರುತ್ತದೆ. ತೀರಾ ಹಗುರಾದರೆ ಜಮೀನಿಗೆ ಹಾಕುವ ಸಂದರ್ಭದಲ್ಲಿ ಗಾಳಿಗೆ ಹಾರಿ ಹೋಗಿ ನಷ್ಟವಾಗುವ ಸಂಭವವಿರುತ್ತದೆ ಆದರೆ ಬೇವು ಲೇಪಿತ ಯೂರಿಯಾದಲ್ಲಿ ಈ ಸಮಸ್ಯೆ ಗಣೀಯವಾಗಿ ಕಡಿಮೆಯಾಗುತ್ತದೆ. ಬೇವು ಲೇಪಿತ ಯೂರಿಯಾ ಪ್ರಿಲ್ ಗಳು ಪರಸ್ಪರ ಉಜ್ಜುವಿಕೆ ತಡೆದು ಪುಡಿಯಾಗುವುದನ್ನು ತಪ್ಪಿಸುವುದರಿಂದ ಸಾರಜನಕ ಬಳಕೆ ಹೆಚ್ಚುತ್ತದೆ.

ಬೇವು ಲೇಪಿತ ಯೂರಿಯಾ –ಕಾರ್ಯವಿಧಾನ

ಉತ್ಪಾದನೆಯ ಸಂದರ್ಭದಲ್ಲಿಯೇ ಪ್ರಿಲ್ಡ್ ಯೂರಿಯಾ ಮೇಲೆ ಬೇವಿನೆಣ್ಣೆಯನ್ನು ಲೇಪನಗೊಳಿಸಲಾಗುತ್ತದೆ. ಅಮೋನಿಕಲ್ ಸಾರಜನಕವನ್ನು ನೈಟ್ರೇಟ್ ಸಾರಜನಕವನ್ನಾಗಿ ಪರಿವರ್ತಿಸುವ ಸೂಕ್ಷ್ಮಾಣುಗಳನ್ನು ಕೊಲ್ಲುವುದೇ ಇದರ ಮೂಲಭೂತ ಉದ್ದೇಶ. ಬೇವು ಲೇಪಿತ ಯೂರಿಯಾ ಇದನ್ನು ಗಮನಾರ್ಹವಾಗಿ ಸಾಧಿಸುತ್ತದೆ. ಲೇಪಿತವಿಲ್ಲದ ಪ್ರಿಲ್ಡ್ ಯೂರಿಯಾ ಬಳಸಿದರೆ ನೈಟ್ರೇಟ್ ಸಾರಜನಕವು ಉತ್ಪಾದಿತವಾಗಿ ಸಾರಜನಕವು ಬಹುಬೇಗ ಭೂಮಿಗಿಳಿದು ವ್ಯರ್ಥವಾಗುತ್ತದೆ. ಬೇವು ಲೇಪಿತ ಯೂರಿಯಾ ಇದನ್ನು ತಡೆಗಟ್ಟಿ ಸಾರಜನಕದ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಇಳುವರಿಯೂ ಹೆಚ್ಚುತ್ತದೆ.


ಬೇವು ಲೇಪಿತ ಯೂರಿಯಾದಲ್ಲಿ- ಉಪಯೋಗಿಸುವ ವಿಧಾನಗಳು

ಸಾರಜನಕ ಬಳಕೆ ಹೆಚ್ಚಿಸಿ ಇಳುವರಿಗೆ ನೇರವಾಗಿ ಬೇವು ಲೇಪಿತ ಯೂರಿಯಾ ಸಹಾಯ ಮಾರುತ್ತದೆ. ವಿಶೇಷವಾಗಿ ಶೇ. 5-10% ರಷ್ಟು ಇಳುವರಿ ಹೆಚ್ಚಿಸುತ್ತದೆ. ಬೇವು ಲೇಪಿತ ಯೂರಿಯಾ -
ಹರಳುಗಟ್ಟುವಿಕೆಯನ್ನು ತಡೆಯುತ್ತದೆ. ಸಾಗಾಣಿಕೆ ಮತ್ತು ಬಳಕೆಯಲ್ಲಿ ಪುಡಿಯಾಗುವುದು ಕಡಿಮೆಯಾಗುತ್ತದೆ. ಕೀಟ ನಿರೋಧಕವಾಗಿ ಮತ್ತು ಪ್ರಾಣಿ ನಿಷೇಧಕವಾಗಿಯೂ ಇದು ಕೆಲಸ ಮಾಡುತ್ತಿದೆ. ಈ - ಕೆಳಕಂಡ ವಿಧಾನಗಳನ್ನು ಸಮರ್ಥವಾಗಿ ಅನುಸರಿಸುವುದರ ಮೇರೆ ಅದರ ಸಾಮರ್ಥ್ಯದ ಬಳಕೆ ಪರಿಣಾಮಕಾರಿಯಾಗಿರುತ್ತದೆ.

- ಬೆಳೆಯ ಅವಶ್ಯಕತೆಗನುಗುಣವಾಗಿ ಎರಡು ಅಥವಾ ಹೆಚ್ಚಿನ ಬಾರಿ ಬಿಡಿಯಾಗಿ ಬಳಸಬೇಕು.
- ನೆಲದ ತೇವಾಂಶ ಅನುಸರಿಸಿ ಬಳಸಬೇಕು. ಭತ್ತದಂಥ ಹೆಚ್ಚಿನ ತೇವಾಂಶದ ಬೆಳೆಯಲ್ಲಿ ಜಲಾಂಶ ಕಡಿಮೆ ಮಾಡಿ ಸಂಜೆ ಗೊಬ್ಬರ ಹಾಕಿ ನಿರ್ದಿಷ್ಟ ಮಟ್ಟ ಕಾಪಾಡಿಕೊಂಡು ನೀರುಣಿಸಬೇಕು.
- ಕಡಿಮೆ ತೇವಾಂಶದ ಬೆಳೆಗಳಾದ ಗೋಧಿಯಂಥವುಗಳಿಗೆ ಇದನ್ನು ಬಳಸಬೇಕಾದಲ್ಲಿ ತೆಳು ಮಣ್ಣಿಗೆ ಕಡಿಮೆ ನೀರು ಹೂಡಿ ಹಾಗೂ ಗಡುಸು ಮಣ್ಣಿಗೆ ನೀರು ಹೂಡಿ ಬಳಸಬೇಕು.
- ಗಾಳಿ/ಮಣ್ಣಿಗೆ ಉಷ್ಣಾಂಶ ಕಡಿಮೆಯಿದ್ದಾಗ ಸಂಜೆ ಯೂರಿಯಾ ಹಾಕಬೇಕು. ಅಮೋನಿಯಾ ಪ್ರಭಾವಕ್ಕೆ ಯೂರಿಯಾ ಒಳಗಾಗುವುದು ಇದರಿಂದ ತಪ್ಪುತ್ತದೆ.
- ಜಮೀನಿನ ತೇವಾಂಶ ಮತ್ತು ಗಾಳಿಯಾಡುವಿಕೆಯನ್ನು ಸುಸ್ಥಿತಿಯಲ್ಲಿರಿಸಬೇಕು.
- ಅತಿ ಸೂಕ್ಷ್ಮ ಸೂಕ್ಷ್ಮ ಪುಷ್ಠಿಯ ಅಂಶಗಳಿಗಾಗಿ ಮಣ್ಣು ಪರೀಕ್ಷೆ ಮಾಡಿದ ನಂತರ ಈ ಗೊಬ್ಬರ ಹಾಕಬೇಕು.
- ಸಾರಜನಕವನ್ನು ರಂಜಕ ಮತ್ತು ಪೊಟ್ಯಾಷಿಯಂಗಳೊಂದಿಗೆ ತುಲನಾತ್ಮಕವಾಗಿ ಹಾಕಬೇಕು.
- ಕಾಂಪೋಸ್ಟ್ ಅನ್ನು ಅಡಿಪಾಯದ ಪರಿಮಾಣವಾಗಿ ಹಾಕಬೇಕು. ಮಣ್ಣಿನಲ್ಲಿ ಅದು ಸಸ್ಯ ಪೋಷಕಾಂಶಗಳಾಗಿ ಕೆಲಸ ಮಾಡುತ್ತದೆ. ಪುಷ್ಠಿಯ ನಷ್ಟವನ್ನು ಇದು ತಡೆದು ಪುಷ್ಠಿ ಬಳಕೆ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸುತ್ತೆ.
- ಈ ಗೊಬ್ಬರಕ್ಕೆ ಅನ್ವಯವಾಗುವಂಥ ಪದ್ಧತಿಯ ಬೆಳೆಗಳನ್ನೆ ಬೆಳೆಯಬೇಕು.

ಬೇವು ಲೇಪಿತ ಯೂರಿಯಾ ಲಾಭಂಶಗಳು

- ಬೇವು ಲೇಪಿತ ಯೂರಿಯಾ ಬಳಕೆಯಿಂದ ಕನಿಷ್ಟ ಶೇ.10ರಿಂದ 15 ರಷ್ಟು ಸಾರಜನಕ ಸಾಮರ್ಥ್ಯವನ್ನು ಹೆಚ್ಚಿಸಬಹುದೆಂದು ನಂಬಲಾಗಿದೆ. ಅಂದರೆ ಕನಿಷ್ಟ ಶೇ. 10ರಿಂದ 15ರಷ್ಟು ಹೂಡಿಕೆ ದರ ಉಳಿತಾಯ ಆಗುತ್ತದೆ.
- ಭಾರತದ ರೈತರು ಲಕ್ಷ ಮೆಟ್ರಿಕ್ ಟನ್ ಬೇವು ಲೇಪಿತ ಯೂರಿಯಾ ಬಳಸುತ್ತಿರುವುದರಿಂದ ವಿನಾಕಾರಣ ಪೋಲಾಗುವ ಯೂರಿಯಾ ಉಳಿತಾಯವಾಗುತ್ತದೆ. ಇದರಿಂದಾಗಿ ಭಾರಿ ಪ್ರಮಾಣದ ಆಮದು ಉಳಿತಾಯವಾಗಿ ರಾಷ್ಟ್ರದ ಆದಾಯಕ್ಕೆ ನೆರವಾಗುತ್ತದೆ.
- ಸಾರಜನಕ ಸಾಮರ್ಥ್ಯ ಹೆಚ್ಚಳ ಅಂದರೆ ನೈಟ್ರೇಟುಗಳಿಂದ ಭೂಮಿಯನ್ನು ಮತ್ತು ಅಮೋನಿಯಾದಿಂದ ಗಾಳಿಯನ್ನು ಶುದ್ಧೀಕರಣ ಮಾಡಿದಂತೆ.
- ಉಳಿತಾಯವಾಗುವ ಸ್ವಾಭಾವಿಕ ಅನಿಲವನ್ನು ವಿದ್ಯುತ್ ಉತ್ಪಾದನೆ ಮುಂತಾದ ಒಳ್ಳೆಯ ಕೆಲಸಗಳಿಗೆ ಬಳಸಬಹುದು.

ತಾತ್ಪರ್ಯ

ಬೇವು ಲೇಪಿತ ಯೂರಿಯಾದಿಂದ ರೈತರಿಗೆ ಇಳುವರಿ ಹೆಚ್ಚು, ಖರ್ಚು ಕಡಿಮೆ ಅತ್ಯಮೂಲ್ಯ ಗೊಬ್ಬರಗಳ ಆಮದು ನಿಲ್ಲುತ್ತದೆ. ಜಮೀನು ಮತ್ತು ವಾತಾವರಣ ಕಲುಷಿತವಾಗುವುದು ತಪ್ಪುತ್ತದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಬೇವು ಭಾರತದ ಬಹುದೊಡ್ಡ ನಂಬಿಕೆ ವೃಕ್ಷವಾಗಿದೆ.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.