ಇನ್ನು ಮುಂದೆ ರೈತರ ತೋಟಕ್ಕೆ ಅಧಿಕಾರಿಗಳ ಭೇಟಿ ಕಾಯಂ

February 10, 2018 ⊄   By: Hasiru Suddimane

ರೈತರ ತೋಟಗಳಿಗೆ ಅಧಿಕಾರಿಗಳು ಹೋಗಿದ್ದೇನೆ ಎಂದು ಸುಳ್ಳು ಹೇಳಿ ದಾಖಲೆ ಸೃಷ್ಟಿಸುವುದಕ್ಕೆ ಕಡಿಮಾಣ ಬಿದ್ದಿದ್ದು. ತೋಟಗಾರಿಕೆ ಅಧಿಕಾರಿಗಳು ವಾರಕ್ಕೊಮ್ಮೆಯಾದ್ರೂ ಕಡ್ಡಾಯವಾಗಿ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತೋಟಗಾರಿಕೆ ಇಲಾಖೆ ಆದೇಶಿಸಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರಿಗೆ ಸಿಗುವ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ರೈತ ಫಲಾನುಭವಿಗಳಿಗೆ ಸಿಗಬೇಕೆಂಬ ಉದ್ದೇಶದಿಂದ ನೂತನ ಆಯುಕ್ತ ವೈ.ಎಸ್.ಪಾಟೀಲ್ ರವರು ಇದೇ ಮೊದಲ ಬಾರಿಗೆ ಇಂತಹ ವಿನೂತನ ಆದೇಶ ಹೊರಡಿಸಿದ್ದಾರೆ. ರೈತರ ತೋಟಗಳಿಗೆ ಹೋದ ಅವರು ಜಿಪಿಎಸ್ ಛಾಯಚಿತ್ರ ತೋರಿಸಬೇಕಲ್ಲದೆ, ಅವರ ಚಲನಚಲನ ಇಲಾಖೆ ಮುಖ್ಯಕಚೇರಿಯ ನಿಗಾದಲ್ಲಿರುತ್ತದೆ ರಾಜ್ಯ ತೋಟಗಾರಿಕೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಫೀಲ್ಡ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲಾಖೆಯ ನಾನಾ ಯೋಜನೆಗಳಡಿ ನಿರ್ಮಾಣ ಹಂತದಲ್ಲಿರುವ, ಇಲ್ಲವೇ ನಿರ್ಮಾಣಗೊಂಡ ಪಾಲಿಹೌಸ್, ನೆರಳು ಪರದೆ, ಕೃಷಿ ಹೊಂಡ, ಪ್ರದೇಶ ವಿಸ್ತರಣೆ, ಹನಿ ನೀರಾವರಿ ಇತ್ಯಾದಿ ಘಟಕಗಳ ವಿವರಗಳನ್ನು ಚಿತ್ರಸಹಿತ ತಲುಪಿಸಬೇಕು. ಜಿಲ್ಲೆಯಲ್ಲಿ ಯಾವುದೇ ಯೋಜನೆಯಡಿ ಪ್ರಗತಿ ಕುಂಠಿತಗೊಂಡಿದ್ದರೆ ಆ ಕುರಿತು ಜಂಟಿ ನಿರ್ದೇಶಕರು/ ತೋಟಗಾರಿಕೆ ಉಪನಿರ್ದೇಶಕರು ಗಮನಿಸಿ ಅಂತಹ ಯೋಜನೆಗಳ ಸ್ಥಳ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.

ಕಡ್ಡಾಯವಾಗಿ ಕ್ಷೇತ್ರ ಭೇಟಿಗೆ ನಿಗದಿಪಡಿಸಿರುವ ದಿನ ಬಿಟ್ಟು ಇತರೆ ದಿನಗಳಂದು ಸಹ ಅಗತ್ಯಕ್ಕೆ ಅನುಗುಣವಾಗಿ ಕ್ಷೇತ್ರ ಭೇಟಿ ಮಾಡುವುದು ಅಧಿಕಾರಿಗಳ ಕರ್ತವ್ಯ. ಸೂಕ್ತ ಕಾರಣವಿಲ್ಲದೆ ಹಾಗೂ ವಿಭಾಗೀಯ ಜಂಟಿ ನಿರ್ದೇಶಕರ ಅನುಮತಿ ಇಲ್ಲದೆ ಕ್ಷೇತ್ರ ಭೇಟಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸುವಂತಿಲ್ಲ. ಹಾಗೇನಾದರೂ ತಪ್ಪಿಸಿಕೊಂಡಲ್ಲಿ ಕೂಡಲೇ ಕ್ರಮ ತೆಗೆದುಕೊಂಡು ಶಿಸ್ತು ಕ್ರಮ ಜರುಗಿಸಲಾಗುವುದು. ಈ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದು ಕೊಂಡಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಯಾರ್ಯಾರಿಗೆ ಅನ್ವಯ?
ತೋಟಗಾರಿಕೆ ಅಪರ ನಿರ್ದೇಶಕರನ್ನು ಒಳಗೊಂಡಂತೆ ತೋಟಗಾರಿಕೆ ಜಂಟಿ ನಿರ್ದೇಶಕರು, ತೋಟಗಾರಿಕೆ ಉಪನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಪ್ರತಿ ಗುರುವಾರದಂದು ಕಡ್ಡಾಯವಾಗಿ ಕ್ಷೇತ್ರಕ್ಕೆ ಭೇಟಿ ನೀಡುವುದು ಮತ್ತು ಒಮ್ಮೆ ಭೇಟಿ ನೀಡಿದ ಕ್ಷೇತ್ರಕ್ಕೆ ಪುನಃ ಭೇಟಿ ನೀಡುವಂತಿಲ್ಲ.

ಪ್ರತಿ ಗುರುವಾರ ತೋಟಕ್ಕೆ
ಕ್ಷೇತ್ರಗಳಿಗೆ ಭೇಟಿ ನೀಡಲು ಗುರುವಾರವನ್ನು ನಿಗದಿ ಮಾಡಿದ್ದು, ಅಂದು ಸರಕಾರಿ ರಜೆ ಇದ್ದರೆ, ಅಥವಾ ಅನಿವಾರ್ಯ ರಜೆ ಘೋಷಿಸಿದ್ದರೆ, ಮರುದಿನ ತಪ್ಪದೇ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಹಾಗೆಯೇ ರಜೆಗೆ ಕಾರಣವೇನು ಎಂಬುದನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಸೂಚಿಸಲಾಗಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.