ಶುದ್ಧಗಾಳಿ ಮಾರುತ್ತಿದ್ದಾರೆ ಇವರು!!

October 08, 2018 ⊄   By: Hasiru Suddimane

ಎಂಥಾ ಕಾಲ ಬಂತಲ್ಲ!! ಆಸ್ತಿ, ಅಂತಸ್ತು ಇದ್ದರೇನು? ಶುದ್ಧ ನೀರು, ಗಾಳಿ ಇಲ್ಲದಿದ್ದರೆ. ಹಿಂದೆ ಪರಿಸರ ತಜ್ಞರು ಹೇಳುತ್ತಿದ್ದರು ಮುಂದೊಂದು ದಿನ ಗಾಳಿಯನ್ನು ಕೂಡ ಖರೀದಿಸುವ ಕಾಲ ಬರುತ್ತದೆ ಎಂದು. ಆ ದಿನ ಬಂದೇ ಬಿಟ್ಟಿದೆ! ನಗರ ಪ್ರದೇಶಗಳಲ್ಲಿ ಶುದ್ಧ ಗಾಳಿಯೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯೊಂದು ಶುದ್ಧ ಗಾಳಿಯನ್ನು ಬಾಟಲಿಯಲ್ಲಿ ತುಂಬಿ ಮಾರತೊಡಗಿದೆ.

ನ್ಯೂಜಿಲೆಂಡ್ ಮೂಲದ Kiwiana (ಕಿವಿಯಾನಾ) ಎಂಬ ವೆಬ್ ಸೈಟ್ 'ಶುದ್ಧ ತಾಜಾ ನ್ಯೂಜಿಲೆಂಡ್ ಗಾಳಿ'ಯನ್ನು ಬಾಟಲಿಗಳಲ್ಲಿ ಮಾರುತ್ತಿದೆ. 5 ಲೀಟರ್ಗಳ ಒಂದು ಬಾಟಲಿ 130 ರಿಂದ 140 ಆಳವಾದ ಉಸಿರಾಟಗಳಿಗೆ ಸಾಲುತ್ತದಂತೆ. ಒಂದು ಬಾಟಲಿಯ ಬೆಲೆ ಎಷ್ಟು ಗೊತ್ತೇ? 1,400 ರೂ.!
ನ್ಯೂಜಿಲೆಂಡ್ ನ ದಕ್ಷಿಣ ಆಲ್ಪ್ಸ್ ನ ಹಿಮಾಚ್ಛಾದಿತ ತುದಿಯಿಂದ ಈ ಗಾಳಿಯನ್ನು ಸಂಗ್ರಹಿಸಲಾಗಿದೆ. ತೀರಾ ಜನಸಂದಣಿಯಿಲ್ಲದ ಭೂಭಾಗದ ಮೇಲಾಗಿ ಬರುವ ದಕ್ಷಿಣ ಪೆಸಿಫಿಕ್ ಸಮುದ್ರದಿಂದ ಬೀಸುವ ಗಾಳಿಯನ್ನು ಅಲ್ಲಿ ಹಿಡಿದಿಡಲಾಗುತ್ತದೆ. ಆ ಸ್ಥಳ ವಿಶ್ವದಲ್ಲೇ ವಿಶಿಷ್ಟವಾಗಿದ್ದು, ಮಾನವರಿಂದ ಕಲುಷಿತವಾಗದ ಸಂಪೂರ್ಣ ಶುದ್ಧ ಗಾಳಿಯನ್ನು ಸಂಗ್ರಹಿಸಲು ನಮಗೆ ಅವಕಾಶ ನೀಡಿದೆ ಎಂದು ಕಂಪನಿ ಹೇಳಿಕೊಂಡಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
February 19, 2019

ಸಿಂಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಫೆ. 20ರಿಂದ 28ರವರೆಗೆ ಕೋಳಿ ಸಾಕಾಣಿಕ ತರಬೇತಿ ಹಾಗೂ ಕೌಶಲ್ಯಾಧಾರಿತ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮಶೀಲತಾ ಅಭಿವೃದ್ಧಿಯ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.