'ಕಸ' ಕಡಿಮೆಯಾದರೂ, 'ದುರ್ವಾಸನೆ' ತಪ್ಪಿಲ್ಲ

April 10, 2018 ⊄   By: Hasiru Suddimane

ಬೆಳ್ಳಂದೂರು ಕೆರೆ ಇಲ್ಲಿನ ನಿವಾಸಿಗಳಿಗೆ ಬೆನ್ನತ್ತಿದ ಬೇತಾಳವಾಗಿದೆ. ಸದಾ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ಈಗ ದುರ್ವಾಸನೆ ತಲೆನೋವಾಗಿದೆ. ಕೆರೆಗೆ ರಾಸಾಯನಿಕ ತ್ಯಾಜ್ಯ ಬಿಡುಗಡೆಯಾಗುತ್ತಿರುವುದರಿಂದ ಈ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಗೆ ಈ ಬಗ್ಗೆ ದೂರು ನೀಡಿದ್ದು, ಕೆರೆಗೆ ತ್ಯಾಜ್ಯ ಸೇರುವುದನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬೆಳ್ಳಂದೂರು, ಇಬ್ಬಲೂರು ಮತ್ತು ಗ್ರೀನ್ ಗ್ಲೆನ್ ಲೇಔಟ್ ನ ನಿವಾಸಿಗಳು ಸೇರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ.ಮೊದಲಿನಿಂದಲೂ ಬೆಳ್ಳಂದೂರು ಕೆರೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದೀಗ ನಿರ್ದಿಷ್ಟ ಸಮಯದಲ್ಲಿ ಎಂದು ಬೆಳ್ಳಂದೂರಿನ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಬೆಳಗಿನ ಜಾವ 1ರಿಂದ2 ಗಂಟೆಯ ವೇಳೆ ಇದ್ದಕ್ಕಿದ್ದಂತೆ ದುರ್ವಾಸನೆ ಹೆಚ್ಚುತ್ತದೆ.ಕಣ್ಣಿನಲ್ಲಿ ಉರಿ ಅನುಭವವಾಗುತ್ತದೆ.ವಾಸನೆಯಿಂದ ಉಸಿರುಗಟ್ಟಿದಂತಾಗುವುದರಿಂದ ಕಿಟಕಿ ಮುಚ್ಚುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ ಸ್ಥಳ ಪರಿಶೀಲಿಸಿ ವಾಸನೆ ಎಲ್ಲಿಂದ ಬರುತ್ತದೆ ಎಂಬುದನ್ನು ಕಂಡು ಹಿಡಿಯಲಾಗುವುದು. ಅಗತ್ಯ ಬಿದ್ದಲ್ಲಿ ನೀರಿನ ಪರೀಕ್ಷೆ ಮಾಡಿ ಬೆಳಗಿನ ಜಾವದ ಸಂದರ್ಭ ರಾಸಾಯನಿಕವನ್ನು ಬಿಡಿಗಡೆ ಮಾಡಲಾಗುತ್ತಿದೆಯೇ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದರು.

ಕೆಲ ತಿಂಗಳಿನಿಂದ ಬೆಳ್ಳಂದೂರು ಕೆರೆಯನ್ನು ಉಳಿಸಲು ಮಾಜಿ ಸೈನಿಕರು ಪಣ ತೊಟ್ಟಿದ್ದಾರೆ, ಕೆರೆಯ ಸುತ್ತಮುತ್ತಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ. ತ್ಯಾಜ್ಯವನ್ನು ಸುರಿಯದಂತೆ ಕಣ್ಗಾವಲಿಟ್ಟಿದ್ದಾರೆ. ಇದರ ಮಧ್ಯೆಯೂ ಇಂತಹ ಕಾರ್ಯಗಳು ನಡೆಯುತ್ತಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಅಂದು ನೆರಳೇ ಕಾಣುವುದಿಲ್ಲ!! ಪರೀಕ್ಷಿಸಿ
ಅಂದು ನೆರಳೇ ಕಾಣುವುದಿಲ್ಲ!! ಪರೀಕ್ಷಿಸಿ
April 21, 2018

ನಮ್ಮನ್ನು ಸದಾ ಹಿಂಬಾಲಿಸುವವರು ಯಾರು ಎಂದರೆ ಸದ್ದಿಲ್ಲದೆ ನಮ್ಮ ನೆರಳು ಎಂದು ಹೇಳುತ್ತೇವೆ. ಅಂದಿನ ದಿನ 11.30 ರಿಂದ 12.30ರ ನಡುವೆ ನೆರಳು ಕಾಣುವುದೇ ಇಲ್ಲ. ನೀವೇ ನಿಂತು ನೋಡಿ ಇಲ್ಲವೇ ವಸ್ತುವೊಂದನ್ನು ಇಟ್ಟು ಪರೀಕ್ಷಿಸಿ.