ಹವಾಮಾನ ಬದಲಾವಣೆಯಿಂದ ಪ್ರಯೋಜನ!!!!

June 11, 2019 ⊄   By: Hasiru Suddimane

ಸೈಬೀರಿಯಾ ನಿಮಗೆ ಗೊತ್ತಿರಬಹುದು. ಜನವರಿಯಲ್ಲಿ - 13 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆ ಇರುವ ಕಡು ಚಳಿಯ ಪ್ರದೇಶ. ಗುಲಾಮರನ್ನು ಸೆರೆಯಿಡುವ ಜೇಲುಗಳ ಸಾಮ್ರಾಜ್ಯ. ಎರಡನೇ ಮಹಾಯುದ್ಧ ಕಾಲದಲ್ಲಿ ಆಹಾರ ಕೊರತೆಯಿಂದ ಐದು ಲಕ್ಷಕ್ಕೂ ಅಧಿಕ ಜನ ಇಲ್ಲಿನ ಗುಲಾಮರ ಶಿಬಿರಗಳಲ್ಲಿ ಮೃತಪಟ್ಟಿದ್ದರು. 500 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿದ ಅತ್ಯಂತ ಬೃಹತ್ತಾದ್ದು ಎನ್ನಲಾದ ಜ್ವಾಲಾಮುಖಿ ಸ್ಪೋಟ ಸಂಭವಿಸಿದ್ದು, ಈ ಜ್ವಾಲಾಮುಖಿ 10 ಲಕ್ಷಕ್ಕೂ ಅಧಿಕ ವರ್ಷ ಜೀವಂತವಾಗಿತ್ತು. ಇದರಿಂದ ಆಗ ಇದ್ದ ಶೇ 90ರಷ್ಟು ಜೀವ ಪ್ರಭೇದಗಳು ನಾಶವಾದವು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹವಾಮಾನ ಬದಲಾವಣೆಯಿಂದ ಇಂಥ ಸೈಬೀರಿಯಾ ಕೂಡ ಜನರು ವಾಸ ಮಾಡಲಿಕ್ಕೆ ಯೋಗ್ಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರಷ್ಯಾದ ಕ್ರಾಸ್ನೋಯಾರ್ಕ್ ಫೆಡರಲ್ ರಿಸರ್ಚ್ ಸೆಂಟರ್ ಹಾಗೂ ಅಮೆರಿಕದ ನ್ಯಾಷನಲ್ ಏರೋಸ್ಪೇಸ್ ಇನ್ಸ್ಟಿಟ್ಯೂಟ್ ನ ವಿಜ್ಞಾನಿಗಳ ಪ್ರಕಾರ, ವಾತಾವರಣದ ಉಷ್ಣತೆ ಇದೇ ರೀತಿ ಹೆಚ್ಚುತ್ತ ನಡೆದರೆ, 21ನೇ ಶತಮಾನದ ಅಂತ್ಯದ ಹೊತ್ತಿಗೆ ಏಷಿಯನ್ ರಷ್ಯಾ ವಾಸಯೋಗ್ಯ ಆಗಲಿದೆ. 13 ದಶ ಲಕ್ಷ ಚದರ ಕಿಮೀ ವಿಸ್ತೀರ್ಣ ಹೊಂದಿರುವ ಈ ಪ್ರದೇಶ ರಷ್ಯಾದ ಒಟ್ಟು ಭೂಪ್ರದೇಶದ ಶೇ 77ರಷ್ಟಿದ್ದರೂ, ಇಲ್ಲಿ ವಾಸವಾಗಿರುವುದು ಶೇ 27ರಷ್ಟು ಮಂದಿ ಮಾತ್ರ. ವಾತಾವರಣದ ಉಷ್ಣತೆ ಹೆಚ್ಚಿದಲ್ಲಿ ಕಡಿಮೆ ವಾಸಯೋಗ್ಯ ಪ್ರದೇಶಗಳೆಲ್ಲ ವಾಸಿಸಲು ಸಾಧ್ಯವಾಗುವಂತೆ ಬದಲಾಗಲಿದೆ.


ಭೂಮಿಯನ್ನು 30/40 ನಿವೇಶನದ ಲೆಕ್ಕದಲ್ಲಿ ಗ್ರಹಿಸುವವರು, ಇದರಿಂದ ಉಪಯೋಗ ಆಗುತ್ತದೆ ಎನ್ನಬಹುದು. ಆದರೆ, ಹವಾಮಾನ ಬದಲಾವಣೆ ವಿನಾಶಕ್ಕೆ ದಾರಿ ಮಾಡಿ ಕೊಡಲಿದೆ. ಮಳೆ, ಸುಂಟರಗಾಳಿ, ಜ್ವಾಲಾಮುಖಿ ಸ್ಪೋಟ ಸೇರಿದಂತೆ ವಿವರಿಸಲು ಸಾಧ್ಯವಿಲ್ಲದ ಅನಿಶ್ಚಿತ ಬದಲಾವಣೆಗಳಿಗೆ ಅದು ಕಾರಣವಾಗಲಿದೆ.
ಆದ್ದರಿಂದ, ಅಂದಾದುಂದಿ ಬದುಕಿನ ಶೈಲಿ ಬಿಟ್ಟು ಪರಿಸರಸ್ನೇಹಿಗಳಾಗಲೇ ಬೇಕಿದೆ.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.