ಒಡಿಶಾದಲ್ಲಿ ‘ತಿತ್ಲಿ’ ಎಫೆಕ್ಟ್

October 11, 2018 ⊄   By: Hasiru Suddimane

ಒಡಿಶಾದಲ್ಲಿ ಅಬ್ಬರಿಸಿರುವ ಅತ್ಯಂತ ತೀವ್ರ ಚಂಡಮಾರುತ ಅಪ್ಪಳಿಸಿದೆ. ಗಂಜಾಂ ಜಿಲ್ಲೆಯ ಗೋಪಾಲಪುರದಲ್ಲಿ ಇಂದು ಮುಂಜಾನೆಯಿಂದಲೇ ಗಂಟೆಗೆ 126 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಸಮುದ್ರ ಸುಂಟರಗಾಳಿಯಿಂದ ಭಾರೀ ಮಳೆಯಾಗುತ್ತಿದ್ದು ಅನೇಕ ಕಡೆ ಭೂಕುಸಿತಗಳು ಸಂಭವಿಸಿದೆ.

ತಿತ್ಲಿ ಚಂಡಮಾರುತ ಇಡೀ ಒಡಿಶಾ ಕರಾವಳಿ ಪ್ರದೇಶಗಳನ್ನು ಆವರಿಸುತ್ತಿದ್ದು, ಧಾರಾಕಾರ ಮಳೆಯೊಂದಿಗೆ ಭೂಕುಸಿತಗಳಾಗುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಿತ್ಲಿ ಚಂಡಮಾರುತದ ಪರಿಣಾಮ ಗಂಜಾಂ, ಗಜಪತಿ, ಪುರಿ, ಕುರ್ದಾ, ಜಗತ್‍ ಸಿಂಗ್‍ ಪುರ್‍ ಸೇರಿದಂತೆ ಐದು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತಗಳೂ ಸಂಭವಿಸಿವೆ.
ಬಿರುಗಾಳಿ ಹೆಚ್ಚಾಗಿ ಅನೇಕ ಮರಗಳು, ವಿದ್ಯುತ್‍ ಕಂಬಗಳು ಉರುಳಿ ಬಿದ್ದಿದ್ದು, ಕೆಲವು ಮನೆಗಳಿಗೆ ಹಾನಿಯಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿಮಾನ ಮತ್ತು ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು. ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ಕಾಳಿಂಗಪಟ್ಟಣಂನಲ್ಲಿ ಗಂಟೆಗೆ 56 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದು 3 ಲಕ್ಷಕ್ಕೂ ಅಧಿಕ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಮುಂದಿನ ಕೆಲವು ಗಂಟೆಗಳ ಅವಧಿಯಲ್ಲಿ ತಿತ್ಲಿ ಚಂಡಮಾರುತ ಭಾರೀ ವೇಗದಲ್ಲಿ ಬಂಗಾಳ ಕೊಲ್ಲಿ ಪ್ರವೇಶಿಸುವ ಸಾಧ್ಯತೆ ಇದ್ದು, ಕರಾವಳಿ ತೀರ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.