ದೆಹಲಿಯಲ್ಲಿ ಮತ್ತೆ ಸುತ್ತುವರಿದಿದೆ ವಾಯು ಮಾಲಿನ್ಯ

October 15, 2018 ⊄   By: Hasiru Suddimane

ದೆಹಲಿಯಲ್ಲಿ ಹೊಗೆ ಮಾಲಿನ್ಯ ಈ ಬಾರಿ ಮತ್ತೆ ಹೆಚ್ಚಾಗಿದೆ. ವಾಯು ಗುಣಮಟ್ಟವು ಮಧ್ಯಮದಿಂದ ಕಳಪೆ ಗುಣಮಟ್ಟಕ್ಕೆ ಕುಸಿದಿದ್ದು, ಜನರನ್ನು ಚಿಂತೆಗೀಡು ಮಾಡಿದೆ. ಈ ಕಾರಣ, ಸೋಮವಾರದಿಂದಲೇ ದಿಲ್ಲಿಯಲ್ಲಿ ರಕ್ಷಣಾ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಪಂಜಾಬ್‍ ಮತ್ತು ಹರ್ಯಾ‍ಣದಲ್ಲಿ ಬೆಳೆಯ ತ್ಯಾಜ್ಯ ಸುಡುವಿಕೆ ನಿಷೇಧವಿದ್ದರೂ, ಭತ್ತದ ಬೆಳೆಗಾರರು ಈ ನಿಷೇಧವನ್ನು ಉಲ್ಲಂಘಿಸಿ ಬೆಳೆಯ ತ್ಯಾಜ್ಯವನ್ನು ಸುಡಲು ಆರಂಭಿಸಿದ್ದಾರೆ ಇದರಿಂದಾಗಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆ ಮಾಲಿನ್ಯ ತೀವ್ರಗೊಳ್ಳುತ್ತಿದ್ದು ಉಸಿರಾಡುವಿಕೆಗೆ ಸಮಸ್ಯೆ ಎದುರಾಗುವ ಭೀತಿ ಹೆಚ್ಚಾಗಿದೆ.

ಕಳಪೆ ಮಟ್ಟಕ್ಕೆ ಮಾಲಿನ್ಯ

ಭಾನುವಾರ ಬೆಳಗ್ಗೆ ದೆಹಲಿಯಲ್ಲಿ ಒಟ್ಟಾರೆ ಮಾಲಿನ್ಯ ಸೂಚ್ಯಂಕ 201 ಪಿಎಂ (ಪಿಎಂ- ಪ್ರತಿ 10 ಮೈಕ್ರೋಮೀಟರ್ ಸುತ್ತಳತೆಯ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟ) ಮಟ್ಟದಲ್ಲಿತ್ತು. ಇದನ್ನು ಕಳಪೆ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ 51-100ರ ಮಟ್ಟವನ್ನು ತೃಪ್ತಿದಾಯಕ, 101-200 ರ ಮಟ್ಟವನ್ನು ಸಾಮಾನ್ಯ, 201-300 ಕಳಪೆ ಎಂದೂ, 301-400 ಅತ್ಯಂತ ಕಳಪೆ ಹಾಗೂ 401-500ರ ಮಟ್ಟವನ್ನು ಅತ್ಯಂತ ಗಂಭೀರ ಸ್ವರೂಪದ ವಾಯುಗುಣಮಟ್ಟ ಎಂದು ಅಳೆಯಲಾಗುತ್ತದೆ.

ಮಾಲಿನ್ಯ ತಡೆಗೆ ಕ್ರಮ
ಬೆಳೆ ತ್ಯಾಜ್ಯ ಸುಡುವಿಕೆಯಿಂದ ದಿಲ್ಲಿಯಲ್ಲಿ ಸೃಷ್ಟಿಯಾಗುತ್ತಿರುವ ಹೊಗೆ ಮಾಲಿನ್ಯ ತಡೆಗಟ್ಟಲು ಸೋಮವಾರದಿಂದಲೇ ಜಾರಿಯಾಗುವಂತೆ, ದಿಲ್ಲಿ ಆಡಳಿತ ಹಲವು ಕಾರ್ಯತಂತ್ರಗಳನ್ನು ರೂಪಿಸಿದೆ. ಕಸ ಸುಡುವಿಕೆ, ಭಟ್ಟಿಗಳ ಕಾರ್ಯ ಸ್ಥಗಿತಗೊಳಿಸುವಿಕೆ, ಡೀಸೆಲ್ ಜನರೇಟರ್ ಬಳಕೆ ನಿಷೇಧ, ಖಾಸಗಿ ವಾಹನ ಬಳಕೆ ತಡೆಗೆ ಪಾರ್ಕಿಂಗ್ ಫೀ 3-4 ಪಟ್ಟು ಹೆಚ್ಚಳ, ಮೆಟ್ರೋ ರೈಲು-ಬಸ್ಗಳ ಸಂಖ್ಯೆ ಹೆಚ್ಚಳ- ಇತ್ಯಾದಿ ಯೋಜನೆ ರೂಪಿಸತೊಡಗಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.