ಗ್ರಾಹಕರಿಗೆ ಅರಣ್ಯ ಇಲಾಖೆಯಿಂದಲೇ ಮರಮುಟ್ಟು

July 17, 2017 ⊄   By: Hasiru Suddimane

ಮನೆ ಕಟ್ಟುವವರಿಗೆ ಗುಣಮಟ್ಟದ ಮರಮುಟ್ಟನ್ನು ಹುಡುಕುವುದು ಶ್ರಮದ ಕೆಲಸ. ಹಲವು ಸಾಮಿಲ್ಗಳು ಇದ್ದರೂ, ಅಲ್ಲಿ ಸಿಗುವ ಸರಕಿನ ಗುಣಮಟ್ಟದ ಖಾತ್ರಿ ಇರುವುದಿಲ್ಲ.ಹೀಗಾಗಿ ಮೋಸದ ಸಾಧ್ಯತೆ ಇರಲಿದೆ. ಜತೆಗೆ, ಜನರಿಗೆ ಯಾವ ಮರ ಯಾವುದಕ್ಕೆ ಸೂಕ್ತ ಎಂಬ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಸಾಮಿಲ್ನವರು ಕೊಟ್ಟದ್ದನ್ನೇ ಖರೀದಿಸುವುದು ಅನಿವಾರ್ಯ. ಇಂಥ ಸನ್ನಿವೇಶದಲ್ಲಿ ರಾಜ್ಯ ಅರಣ್ಯ ಇಲಾಖೆ ಗ್ರಾಹಕರಿಗೆ ನೇರವಾಗಿ ಮರಮುಟ್ಟು ಖರೀದಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ.

ಮಳೆಗಾಲದಲ್ಲಿ ಮರಗಳು ಬೀಳುವುದು ಸಾಮಾನ್ಯ. ಇಂಥ ಮರಗಳನ್ನು ಇಲಾಖೆ ತನ್ನ ಡಿಪೋಗಳಲ್ಲಿಸಂಗ್ರಸುತ್ತದೆ. ಅಂದಾಜು ವಾರ್ಷಿಕ50,00 ಘನ ಮೀಟರ್ನಷ್ಟು ಮರಮುಟು ಸಂಗ್ರಹವಾಗುತ್ತದೆ ಎನ್ನಲಾಗಿದೆ. ಈ ಹಿಂದೆ ಇವನ್ನು ಹರಾಜಿನ ಮೂಲಕ ವಿಲೇವಾರಿ ಮಾಡಲಾಗುತ್ತಿತ್ತು. ಸುಮಾರು 90 ಮಂದಿ ಇಂಥ ಹರಾಜಿನಲ್ಲಿ ಭಾಗವಸುತ್ತಿದ್ದರು. ಅನೇಕ ಅನುಮತಿ ಪಡೆಯಬೇಕಾಗಿರುವುದು ಮತ್ತು ಕೆಂಪು ಪಟ್ಟಿ ಇದಕ್ಕೆ ಕಾರಣ. ಇವು ಹಲವು ಕೈಗಳನ್ನು ಹಾಯ್ದು ಗ್ರಾಹಕರನ್ನು ತಲುಪುವ ಹೊತ್ತಿಗೆ ಬೆಲೆ ಮುಗಿಲು ಮುಟ್ಟುತ್ತಿತ್ತು. ತಮಗೆ ಬೇಕಾಗುವ ಕನಿಷ್ಠ ಪ್ರಮಾಣದ ಮರಮುಟ್ಟನ್ನು ಗ್ರಾಹಕರು ಹರಾಜಿನ ಮೂಲಕ ಖರೀದಿಸಲು ಮುಂದಾಗುವುದಿಲ್ಲ. ಅವರಿಗೆ ಸರ್ಕಾರದ ನಡೆ ವರದಾನವಾಗಲಿದೆ.

ರಾಜ್ಯದೆಲ್ಲೆಡೆ ಸರ್ಕಾರದ 42 ಡಿಪೋಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆ ನಿರ್ಮಾಣ ವೆಚ್ಚದಲ್ಲಿ ಶೇ 20ರಷ್ಟು ಮರಮುಟ್ಟಿಗೆ ವೆಚ್ಚವಾಗುತ್ತದೆ. ಒಂದು ಚದರ ಮೀಟರ್ ಮನೆಗೆ ಒಂದು ಘನ ಅಡಿ ಮರಮುಟ್ಟು ಬೇಕಾಗುತ್ತದೆ ಎಂಬ ಲೆಕ್ಕವಿದೆ. ಖಾಸಗಿಯವರಿಂದ ಖರೀದಿಸುವ ಬದಲು ಸರ್ಕಾರಿ ಡಿಪೋಗಳಿಂದ ಖರೀದಿಸುವುದರಿಂದ ಹಣ ಉಳಿತಾಯ ವಾಗಲಿದೆ. ಜತೆಗೆ, ಹೊನ್ನೆ ಎಂದರೆ ಹೊನ್ನೆ, ಹಲಸು ಎಂದರೆ ಹಲಸಿನ ಮರ ಸಿಗಲಿದೆ. ಗುಣಮಟ್ಟದ ಖಾತ್ರಿಯೂ ಇರಲಿದೆ. ಮೋಸದ ಸಾಧ್ಯತೆ ಕಡಿಮೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.