ಅರಣ್ಯ ಪ್ರದೇಶ ಹೆಚ್ಚಳವಾಯ್ತು

February 13, 2018 ⊄   By: Hasiru Suddimane

ಅರಣ್ಯ ನಾಶ ನಾನಾ ಕಾರಣಗಳಿಂದ ಜರುಗುತ್ತಿದ್ದು, ಇದರ ವ್ಯತಿರಿಕ್ತ ಪರಿಣಾಮ ಪರಿಸರದ ಮೇಲೆ ಬೀಳಲಿದೆ. ಈ ಆತಂಕದಲ್ಲಿರುವಾಗ ದೇಶದಲ್ಲಿ ಕಳೆದ 2ವರ್ಷಗಳಲ್ಲಿ ಅರಣ್ಯ ಸಂಪತ್ತು ವಿಸ್ತಾರಗೊಂಡಿದೆ ಎಂಬ ಸಿಹಿ ಸುದ್ದಿಯೊಂದು ಹೊರಬಂದಿದೆ.

ಇನ್ನೂ ಖುಷಿಯ ಸಂಗತಿ ಎಂದರೆ ಹೀಗೆ ದೇಶದಲ್ಲಿ ಅರಣ್ಯಪ್ರದೇಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿಸ್ತಾರಗೊಂಡ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ.
ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್ ಸೋಮವಾರ ದೆಹಲಿಯಲ್ಲಿ ಅರಣ್ಯ ವರದಿ 2017 ಅನ್ನು ಬಿಡುಗಡೆ ಮಾಡಿದರು. ಇದರ ಅನ್ವಯ ಕಳೆದ 2 ವರ್ಷಗಳಲ್ಲಿ ದೇಶದ ಅರಣ್ಯ ಪ್ರದೇಶ 8021 ಚದರ ಕಿ.ಮೀನಷ್ಟು ಹೆಚ್ಚಳವಾಗುವ ಮೂಲಕ 802,088 ಚ.ಕಿಮೀ ತಲುಪಿದೆ. ಅಂದರೆ ಇದುವರೆಗೆ ಇದ್ದ ಅರಣ್ಯ ಪ್ರದೇಶದ ಶೇ.1ರಷ್ಟು ಏರಿಕೆಯಾಗಿದೆ. ಇದರೊಂದಿಗೆ ದೇಶವು, ತನ್ನ ಒಟ್ಟು ಭೌಗೋಳಿಕ ಪ್ರದೇಶದ ಪೈಕಿ ಶೇ.24.39ರಷ್ಟುಅರಣ್ಯ ಪ್ರದೇಶ ಹೊಂದಿದಂತೆ ಆಗಿದೆ. ಸರ್ಕಾರವು ಒಟ್ಟು ಭೌಗೋಳಿಕ ಪ್ರದೇಶದ ಶೇ.33ರಷ್ಟುಭಾಗವನ್ನು ಅರಣ್ಯದಿಂದ ಆವರಿಸುವಂತೆ ಮಾಡುವ ಗುರಿ ಹೊಂದಿದೆ.

8021 ಚ.ಕಿಮೀ ಪೈಕಿ 6778 ಚ.ಕಿಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೆ, 1243 ಚ.ಕಿಮೀನಷ್ಟುಮರಗಳು ಆವರಿಸಿರುವ ಪ್ರದೇಶ ಹೆಚ್ಚಳವಾಗಿದೆ. ಟಾಪ 5 ಏರಿಕೆ ಕಂಡ ರಾಜ್ಯಗಳು: ಕಳೆದ 2 ವರ್ಷಗಳಲ್ಲಿ ಆಂಧ್ರಪ್ರದೇಶ (2141ಚ.ಕಿಮೀ), ಕರ್ನಾಟಕ (1101 ಚ.ಕಿಮೀ), ಕೇರಳ (1043 ಚ.ಕಿ.ಮೀ), ಒಡಿಶಾ (885 ಚ.ಕಿಮೀ) ಮತ್ತು ತೆಲಂಗಾಣ (565 ಚ.ಕಿಮೀ) ಅತಿ ಹೆಚ್ಚು ಅರಣ್ಯಪ್ರದೇಶ ವಿಸ್ತಾರ ಕಂಡ ಟಾಪ್ 5 ರಾಜ್ಯಗಳಾಗಿವೆ. ಅರುಣಾಚಲಪ್ರದೇಶ, ಉತ್ತರಪ್ರದೇಶ, ಹರ್ಯಾಣ ಮತ್ತು ಬಿಹಾರ ಹೊರತುಪಡಿಸಿದರೆ ಉಳಿದೆಲ್ಲಾ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರಮಾಣ ಹೆಚ್ಚಳವಾಗಿರುವುದು ಕಂಡುಬಂದಿದೆ.

ಟಾಪ್ 10: ವಿಶ್ವದಲ್ಲೇ ಅತಿ ಹೆಚ್ಚು ಅರಣ್ಯ ಹೊಂದಿರುವ ದೇಶಗಳ ಪೈಕಿ ಭಾರತ ಹಾಲಿ 10ನೇ ಸ್ಥಾನದಲ್ಲಿದೆ. ಜೊತೆಗೆ ಅರಣ್ಯ ಪ್ರದೇಶ ಹೆಚ್ಚಳ ಕಾಣುತ್ತಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ.

7,08,273 ಚ.ಕಿ.ಮೀ ದೇಶದಲ್ಲಿರುವ ಒಟ್ಟು ಅರಣ್ಯ ಪ್ರದೇಶ
8,021 ಚ.ಕಿ.ಮೀ ಎರಡು ವರ್ಷಗಳಲ್ಲಿ ಹೆಚ್ಚಾದ ಅರಣ್ಯ ಪ್ರದೇಶ
8,02,088 ಚ.ಕಿ.ಮೀ ಅರಣ್ಯ ಮತ್ತು ಮರಗಳು ಸೇರಿ ಇರುವ ಪ್ರದೇಶ
1% ಹೆಚ್ಚಳವಾಗಿರುವ ಅರಣ್ಯ ಪ್ರದೇಶ
77,414 ಚ.ಕಿ.ಮೀ ಅತ್ಯಂತ ಹೆಚ್ಚು ಅರಣ್ಯ ವಿಸ್ತಾರ- ಮಧ್ಯಪ್ರದೇಶ
6,778 ಚ.ಕಿ.ಮೀ ಅರಣ್ಯ ವಿಸ್ತರಣೆ ಆಗಿರುವ ಪ್ರದೇಶ
66,964 ಚ.ಕಿ.ಮೀ 2ನೇ ಅತ್ಯಂತ ಹೆಚ್ಚು ಅರಣ್ಯ ವಿಸ್ತಾರ- ಅರುಣಾಚಲ
1,243 ಚ.ಕಿ.ಮೀ ಮರಗಳ ವ್ಯಾಪ್ತಿ ಹೆಚ್ಚಾಗಿರುವ ಪ್ರದೇಶ
55,547 ಚ.ಕಿ.ಮೀ 3ನೇ ಅತ್ಯಂತ ಹೆಚ್ಚು ಅರಣ್ಯ ವಿಸ್ತಾರ- ಛತ್ತೀಸ್ಗಡ


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.