ಅಂಗವಿಕಲ ಪ್ರೇಯಸಿಗಾಗಿ ಆತನ ಸುದೀರ್ಘ ಪಯಣ!

April 16, 2018 ⊄   By: Hasiru Suddimane

ಪ್ರೀತಿ ಎಂಬುದೇ ಹಾಗೆ ನೋಡಿ, ಅದು ಮನುಷ್ಯರಾಗಿರಲಿ, ಪ್ರಾಣಿ, ಪಕ್ಷಿಗಳಾಗಿರಲಿ, ನಿಜವಾದ ಪ್ರೀತಿಗೆ ಎಂದೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾ.. ಇಲ್ಲೊಂದು ಕೊಕ್ಕರೆ ತನ್ನ ಪ್ರೇಯಸಿಗಾಗಿ ಪ್ರತಿ ವರ್ಷ ಸಾವಿರಾರು ಮೈಲಿಗಳ ದೂರ ಹಾರಿಕೊಂಡು ಬರುತ್ತಿದೆ.

ಇದು ಕ್ರೋಷಿಯಾ ದೇಶದಲ್ಲಿರುವ ಕ್ಲಿಪೀಟನ್ ಹಾಗೂ ಮಲೇನಾ ಎಂಬ ಎರಡು ಹಕ್ಕಿಗಳ ಲವ್ ಸ್ಟೋರಿ ಗಂಡು ಹಕ್ಕಿ ತನ್ನ ಪ್ರೇಯಸಿಯಾದ ಹೆಣ್ಣು ಹಕ್ಕಿ ಅಂಗವಿಕಲವಾಗಿದ್ದು, ಹಾರಲು ಸಾಧ್ಯವಾಗದ ಕಾರಣ ಗಂಡು ಹಕ್ಕಿ ಪ್ರತಿ ವರ್ಷ 14 ಸಾವಿರ ಕಿ.ಮೀ ದೂರದಿಂದ ತನ್ನ ಪ್ರೀತಿಯನ್ನ ಹುಡುಕಿಕೊಂಡು ಬರುತ್ತದೆ.

ದಕ್ಷಿಣ ಆಫ್ರಿಕಾದ ಚಳಿಗಾಲದ ಮನೆಯನ್ನು ಬಿಟ್ಟು ಕ್ಲಿಪೀಟನ್ ಇದೇ ಮಾರ್ಚ್ ನಲ್ಲಿ ಸತತ 16ನೇ ಬಾರಿಗೆ ಕ್ರೋಷಿಯಾದ ಸಣ್ಣ ಗ್ರಾಮವಾದ ಬ್ರೋಡ್ಸ್ಕಿ ವಾರೋಸ್ ಗೆ ಬಂದಿದೆ. ಇಲ್ಲಿಗೆ ಬಂದು ತನ್ನ ಪ್ರೇಯಸಿ ಮಲೇನಾಳನ್ನ ಭೇಟಿಯಾಗಿದೆ.

ಈ ಜೋಡಿಗೆ ಈಗಾಗಲೇ 62 ಮರಿಗಳಿದ್ದು, ಈಗ ಮತ್ತಷ್ಟು ಮರಿಗಳನ್ನ ಮಾಡಲು ಸಿದ್ಧವಾಗಿವೆ. 1993ರಲ್ಲಿ ಬೇಟೆಗಾರರ ಗುಂಡೇಟಿನಿಂದ ಗಾಯಗೊಂಡಿದ್ದ ಮಲೇನಾ ಕೊಳವೊಂದರ ಬಳಿ ಬಿದ್ದಿದ್ದಾಗ ಅದನ್ನು ನೋಡಿದ ಸ್ಟೀಫನ್ ವೋಕಿಕ್ ಎಂಬವರು ಹಕ್ಕಿಯನ್ನ ತಂದು ಸಾಕಿಕೊಂಡಿದ್ದಾರೆ.

ಗಂಡು ಹಕ್ಕಿ ಕ್ಲಿಪೀಟನ್ ಇಲ್ಲಿಗೆ ಬಂದು ಮರಿ ಮಾಡುತ್ತದೆ. ನಂತರ ಮರಿಗಳಿಗೆ ಹಾರುವುದನ್ನು ಕಲಿಸಿ ಆಗಸ್ಟ್ ತಿಂಗಳಲ್ಲಿ ಅವುಗಳ ಜೊತೆ ದಕ್ಷಿಣ ಆಫ್ರಿಕಾಗೆ ವಲಸೆ ಹೋಗುತ್ತದೆ. ಇತ್ತ ಮಲೆನಾ ತನ್ನ ಮಾಲೀಕ ವೀಕಿಕ್ ಜೊತೆ ಇರುತ್ತದೆ. ಈ ಎರಡು ಹಕ್ಕಿಗಳು ತಮ್ಮ Long Distance Relationship ನಿಂದಾಗಿ ಕ್ರೋಷಿಯಾದಲ್ಲಿ ಸೆಲೆಬ್ರಿಟಿಗಳಾಗಿವೆ


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ವಿಷಯದ ಆಯ್ಕೆ ನಿಮಗೆ ಬಿಟ್ಟಿದ್ದು
ವಿಷಯದ ಆಯ್ಕೆ ನಿಮಗೆ ಬಿಟ್ಟಿದ್ದು
October 15, 2018

ಕೃಷಿ, ವಿಜ್ಞಾನ, ನೀರು, ಪರಿಸರದ ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿಯಬೇಕೆ? ಹಾಗಾದರೆ ಈ ಬಾರಿಯ ಹಸಿರುವಾಸಿಯಲ್ಲಿ ವಿವಿಧ ರೀತಿಯ ರಸದೌತಣ ನಿಮಗಾಗಿ ತಪ್ಪದೇ ಓದಿ…