ಮಳೆಯು ಸುರಿಯಿತು, ಅರಣ್ಯವು ನಲಿಯಿತು!!

May 04, 2018 ⊄   By: Hasiru Suddimane

ಬೇಸಿಗೆಯ ಬಿಸಿ ಎಲ್ಲೆಲ್ಲೂ ತಟ್ಟಿತ್ತು. ಅತ್ತ ಬಿಸಿಲಿಗೆ ಜನರು ಬಳಲಿ ಬೆಂಡಾದರೆ, ಇತ್ತ ಅರಣ್ಯಗಳಲ್ಲಿ ಕಾಡ್ಗಿಚ್ಚು ನರ್ತನ ಶುರುಮಾಡಿತ್ತು. ಎಷ್ಟೋ ಅರಣ್ಯಗಳು ಬೆಂಕಿಗೆ ಆಹುತಿಯಾಗಿದ್ದವು. ಬಂಡೀಪುರ ಹಾಗೂ ನಾಗರಹೊಳೆಯು ಕೂಡ ಸ್ವಲ್ಪ ಮಟ್ಟಿಗೆ ಕಾಡ್ಗಿಚ್ಚಿಗೆ ಸಿಲುಕಿತ್ತು. ಆದರೆ ಈ ಬಾರಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸುರಿದ ಮಳೆ ಅರಣ್ಯದ ಬೆಂಕಿಯನ್ನು ಹಬ್ಬುವುದಕ್ಕೆ ಬಿಡಲಿಲ್ಲ.

ಕಾದಿದ್ದ ನೆಲಕ್ಕೆ ಮಳೆಯ ಸಿಂಚನ ಧರೆಯನ್ನ ತಂಪೆರೆಸಿದಲ್ಲದೆ ಅರಣ್ಯಗಳ ಬೆಂಕಿ ನಂದು, ಹಸಿರು ಹೆಚ್ಚಲು ಕಾರಣವಾಗಿದೆ. ಅಧಿಕಾರಿಗಳು ನಿಟ್ಟಿಸಿರು ಬಿಡುವಂತಾಗಿದೆ. ಕಾಡಿನಲ್ಲಿ ಕುಡಿಯಲು ನೀರಿಲ್ಲದೆ, ಹಾಹಾಕಾರ ಪಡುತ್ತಿದ್ದ ಪ್ರಾಣಿ, ಪಕ್ಷಿ ಸಂಕುಲಕ್ಕೆ ಮಳೆಯ ಸಿಂಚನ ಮತ್ತಷ್ಟು ಸಂತೋಷವನ್ನು ಹೆಚ್ಚಿಸಿ, ಕುಡಿಯುವ ನೀರಿಗೆ ದಾರಿಯಾಗಿದೆ. ನೀರಿಲ್ಲದೆ ಬತ್ತಿ ಹೋಗಿದ್ದ ಕೆರೆ. ಕುಂಟೆಗಳು ಮರುಜೀವ ಪಡೆದಿದೆ.
ಆಹಾರ, ನೀರಿಲ್ಲದೆ ವಲಸೆ ಹೋಗಿದ್ದ ಪ್ರಾಣಿ, ಪಕ್ಷಿಗಳೆಲ್ಲ ಮತ್ತೆ ಮರಳಿವೆ. ಪ್ರತಿ ವರ್ಷ ಕಾಡ್ಗಿಚ್ಚಿಗೆ ನೂರಾರು ಎಕರೆ ಭಸ್ಮವಾಗುತ್ತಿತ್ತು. ಆದರೆ ಇದೇ ಮೊದಲ ವರ್ಷ ಹೆಚ್ಚು ಪ್ರಕರಣಗಳು ದಾಖಲಾಗಲಿಲ್ಲ ಎಂದು ವರದಿ ತಿಳಿಸಿದೆ.

ಬಂಡೀಪುರ ಉದ್ಯಾನದ ಪಾರ್ವತಾಂಬಾ ತ್ರಿಯಂಭಕಪುರ ಬೆಟ್ಟಗಳಿಂದ ಹರಿದುಬಂದ ನೀರು ನೇರವಾಗಿ ಹರಿದು ಬಂದು ಹಳ್ಳಕೊಳ್ಳಗಳಿಗೆ ಸೇರುತ್ತಿರುವುದರಿಂದ ಕಾಡಂಚಿನ ಹಂಗಳದ ಹಿರಿಕೆರೆ, ಬರಗಿ ಕೆರೆ, ಹಾಗೂ ಬೇರಂಬಾಡಿಯ ಕೆಂಪುಸಾಗರ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.