ಶಿರಸಿ ಟಿ.ಎಸ್.ಎಸ್ ನಿಂದ ಭರ್ಜರಿ ಕೊಡುಗೆ

October 14, 2017 ⊄   By: Hasiru Suddimane

ಶಿರಸಿಯ ಹೆಸರಾಂತ ಸಂಸ್ಥೆ ಟಿ.ಎಸ್.ಎಸ್ ಜನತೆಗೆ ಭರ್ಜರಿ ಕೊಡುಗೆ ನೀಡುತ್ತಿದ್ದು ಇಂದು ಮತ್ತು ನಾಳೆ( 14 ಮತ್ತು 15) ಆಟೋ ಮತ್ತು ಪ್ರಾಪರ್ಟಿ ಎಕ್ಸ್-ಪೋ ಮೇಳ ಹಮ್ಮಿಕೊಂಡಿದೆ. ಇದರೊಟ್ಟಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮವೂ ನಡೆಯಲಿದೆ.

EXPO ದಲ್ಲಿ ಸಾಕಷ್ಟು ಕಂಪೆನಿಯ ಬೈಕ್ ಗಳು ಹಾಗು ವಿವಿಧ ಶ್ರೇಣಿಯ ಕಾರ್ ಗಳು ಪ್ರದರ್ಶನ ಹಾಗು ಮಾರಾಟಕ್ಕೆ ಲಭ್ಯವಿದೆ. ಹಳೆಯ ವಾಹನಗಳ ಮಾರಾಟ ಖರೀದಿಗೆ ಕೂಡ ಇಲ್ಲಿ ಅವಕಾಶವಿದ್ದು ಸಾಕಷ್ಟು ಹಳೆಯ ಬೈಕ್ ಗಳು ಕಾರುಗಳು ಜೀಪುಗಳು ಮಾರಾಟಕ್ಕಾಗಿ ಬಂದಿವೆ.

ಪ್ರತಿ ವಾಹನ ಖರೀದಿಗೆ ಖಚಿತ ಬೆಳ್ಳಿ ನಾಣ್ಯದ ಉಡುಗೊರೆ ಇದೆ. ಇದರ ಹೊರತಾಗಿ ವಿಚಾರಣೆಯ ಮೇಲೆ ಹಾಗೂ ಖರೀದಿಗೆ ಪ್ರತ್ಯೇಕ ಲಕ್ಕಿ ಡ್ರಾಗಳು ಮತ್ತು ಚಿನ್ನದ ನಾಣ್ಯಗಳು, ವಿಶೇಷ ರಿಯಾಯಿತಿಗಳು ಈ ಮೇಳದ ಆಕರ್ಷಣೆ. ಅಲ್ಲದೆ ಬ್ಯಾಂಕಿಂಗ್ ಸಾಲ ಸೌಲಭ್ಯ ಕೂಡ ಸ್ಥಳದಲ್ಲೇ ಲಭ್ಯವಿದೆ.

ಜಮೀನು ಆಸ್ತಿ ಹಾಗು ನಿವೇಶನಗಳ ಖರೀದಿ ಹಾಗು ಮಾರಾಟಕ್ಕೆ ಕೂಡ ಇಲ್ಲಿ ವೇದಿಕೆ ಒದಗಿಸಲಾಗಿದೆ. *ಸಹ್ಯಾದ್ರಿ ಲೇ ಔಟ್ ಇಸಳೂರು* ಇವರು ಈ ಮೇಳದಲ್ಲಿ ನಿವೇಶನ ಖರೀದಿ ಹಾಗು ಬುಕ್ಕಿಂಗ್ ಮೇಲೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದ್ದು ಇದರ ಜೊತೆ ದಿನವೊಂದಕ್ಕೆ 12 ಕ್ಕಿಂತ ಹೆಚ್ಚಿನ ಬುಕ್ಕಿಂಗ್ ಆದಲ್ಲಿ ಲಕ್ಕಿ ಡಿಪ್ ಮೂಲಕ ಅದೃಷ್ಟಶಾಲಿಗೆ ಹೆಚ್ಚುವರಿ ನಿವೇಶನದ ಉಡುಗೊರೆ ನಿಡಲಿದ್ದಾರೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.