ಉರಗ ತಜ್ಞ ಕಾಶಿನಾಥ್ ನೆಗಳೂರು ಮಠ ನಿಧನ

March 14, 2018 ⊄   By: Hasiru Suddimane

ಬಳ್ಳಾರಿಯ ವಿಮ್ಸ್ ಉದ್ಯೋಗಿ, ಹವ್ಯಾಸಿ ಛಾಯಾಗ್ರಾಹಕ, ಉರಗ ತಜ್ಞ ಕಾಶಿನಾಥ್ ನೆಗಳೂರುಮಠ(49) ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಟತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಇಬ್ಬರು ಸಹೋದರರು, ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ.

ಕಳೆದ ಆರು ತಿಂಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹದಿಮೂರು ಮರ್ಷಗಳಿಂದ ಮಾಡ್ಯುಲರ್ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾಶಿನಾಥ್ ಮೂಲತಃ ಹಾವೇರಿ ಜಿಲ್ಲೆಯ ಗುತ್ತಲದವರಾದ ನೇಗಳೂರು ಮಠ ಅವರ ಅಂತ್ಯಕ್ರಿಯೆ ಅದೇ ಗ್ರಾಮದಲ್ಲಿ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಾವಿರಕ್ಕೂ ಹೆಚ್ಚು ಹಾವು ಹಿಡಿದು ಅರಣ್ಯಕ್ಕೆ ಕಳುಹಿಸಿದ ಉರಗ ತಜ್ಞರಾಗಿ, ತಮ್ಮ ನೆಚ್ಚಿನ ತಾಣ ಕರಡಿಧಾಮದಲ್ಲಿಯೂ ಸೇರಿದಂತೆ ಅನೇಕ ಕಡೆ ಪರಿಸರ ಹಾಗೂ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕರಾಗಿ, ಪ್ರತಿ ವರ್ಷ ಮಣ್ಣಿನ ಗಣಪ ತಯಾರಿಸಿ ಪ್ರಸಿದ್ಧಿ ಪಡೆದಿದ್ದರು.
ಪರಿಸರ ಪ್ರೇಮಿಯಾಗಿದ್ದ ಅವರ ಕಾರ್ಯಸಾಧನೆಗೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.