ರಸ್ತೆಗಿಳಿಯಲಿದೆ 'ಕಸ' ಗುಡಿಸಲು ಎಲೆಕ್ಟ್ರಿಕ್ 'ವಾಹನ'

April 10, 2018 ⊄   By: Hasiru Suddimane

ಪರಿಸರ ಮಾಲಿನ್ಯ ತಡೆಗಟ್ಟಲು ಹಲವು ದಾರಿ ಹುಡುಕುತ್ತಿರುವ ನಿಟ್ಟಿನಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬೈಕ್, ಬಸ್, ಆಟೋಗಳು ರಸ್ತೆಗಿಳಿದಿವೆ. ಆದರೆ ಇದೇ ಮೊದಲ ಬಾರಿಗೆ ನಗರದಲ್ಲಿ ಕಸ ಗುಡಿಸಲು ಎಲಕ್ಟ್ರಿಕ್ ವಾಹನ ಕಾರ್ಯನಿರ್ವಹಿಸಲಿದೆ. ಅದಕ್ಕಾಗಿಯೇ ಬಿಬಿಎಂಪಿ ಬೆಲ್ಜಿಯಂನಿಂದ ತಂದಿರುವ ಕಸ ಗುಡಿಸುವ 2 ಎಲೆಕ್ಟ್ರಿಕ್ ವಾಹನಗಳನ್ನು ಪ್ರಾಯೋಗಿಕವಾಗಿ ರಸ್ತೆಗಿಳಿಸಿದೆ.

ಈ ಹಿಂದೆಯೇ ರಸ್ತೆ ಗುಡಿಸಲು ಬಿಬಿಎಂಪಿ ಕಸಗುಡಿಸುವ 8 ವಾಹನಗಳನ್ನು ಖರೀದಿಸಿದೆ. ಅವುಗಳಿಂದ ಪ್ರಮುಖ ರಸ್ತೆಗಳನ್ನು ಈಗಾಗಲೇ ಗುಡಿಸಲಾಗುತ್ತಿದೆ. ಅವುಗಳ ಜತೆಗೆ ಮತ್ತೆ 34ವಾಹನ ಖರೀದಿಗೆ ಮುಂದಾಗಿರುವ ಬಿಬಿಎಂಪಿ ಅದರಲ್ಲಿ 2 ವಾಹನಗಳನ್ನು ಮೊದಲಿಗೆ ಪ್ರಾಯೋಗಿಕವಾಗಿ ಬಳಸಲಿದೆ. ಅವು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಖರೀದಿಸಲಾಗುತ್ತದೆ.

ಇಲ್ಲದಿದ್ದರೆ, ಈ ಹಿಂದೆಯೇ ಖರೀದಿಸಿದ್ದ ಕಂಪನಿಯ ವಾಹನಗಳನ್ನು ಖರೀದಿಸಿ ರಸ್ತೆಗಿಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಈ 2 ವಾಹನಗಳನ್ನು ಬೆಲ್ಜಿಯಂನ ಖಾಸಗಿ ಸಂಸ್ಥೆಯಿಂದ ತರಿಸಿಕೊಳ್ಳಲಾಗಿದ್ದು, ಅವುಗಳ ಕಾರ್ಯದ ಬಗ್ಗೆ ಪರಿಶೀಲಿಸಲಾಗುವುದು . ಅದಕ್ಕಾಗಿ ಕನಿಷ್ಟ 2 ರಿಂದ 3 ತಿಂಗಳ ಕಾಲ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಈ ವಾಹನದಿಂದ ಕಸ ಗುಡಿಸಲಾಗುತ್ತದೆ. ಸೇಂಟ್ ಮಾರ್ಕ್ಸ್ ರಸ್ತೆ, ವಿಠ್ಠಲ ಮಲ್ಯ ರಸ್ತೆ ಸೇರಿ ಇನ್ನಿತರೆ ರಸ್ತೆಗಳನ್ನು ಗುರುತಿಸಲಾಗಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.