ಈ ಕೈಗಳಿಗೆ ಇನ್ನೆಷ್ಟು ಬಲವಿರಬಹುದು?

August 02, 2018 ⊄   By: Hasiru Suddimane

ತಂತ್ರಜ್ಞಾನ, ವಾಸ್ತುಶಿಲ್ಪ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುದಕ್ಕೆ ಇದೊಂದು ಸುದ್ದಿ ಸಾಕ್ಷಿ. ನಿಮ್ಮೆಲ್ಲರಿಗೂ ವಾಸ್ತುಶಿಲ್ಪದ ಬಗ್ಗೆ ಅಚ್ಚರಿ ಮೂಡಿಸುವಂತ ವಿಷಯ ತಿಳಿಸಲೇಬೇಕು. ವಿಯೇಟ್ನಾಮ್‍ ನ ಡಾನಂಗ್‍ ಪ್ರದೇಶದಲ್ಲಿ ನೂತನವಾಗಿ ಗೋಲ್ಡನ್‍ ಬ್ರಿಡ್ಜ್‍ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯನ್ನು ನೋಡಿದರೆ ನೀವು ಯಾವುದೋ ಹೊಸ ಪ್ರಪಂಚಕ್ಕೆ ಬಂದಿರಬಹುದು ಎಂದು ಅನಿಸುವುದು ಕಂಡಿತ. ಪ್ರಕೃತಿ ಸೊಬಗಿನಲ್ಲಿ ಇಂತಹ ಒಂದು ಕಲೆ ಅನಾವರಣಗೊಂಡಿದ್ದು ನೋಡುಗರಿಗೆ ಅಚ್ಚರಿ ಮೂಡಿಸುತ್ತಿದೆ.

ವಿಯೇಟ್ನಾಮ್ ನ ‘ಬಾ ನಾ’ ಬೆಟ್ಟಗಳು ಸಮುದ್ರ ಮಟ್ಟದಿಂದ 1,400 ಮೀಟರ್‍ ಎತ್ತರದಲ್ಲಿದ್ದು, ಇದರ ಹತ್ತಿರವೇ ಇರುವ ಟ್ರುಂಗ್‍ ಸೋನ್‍ ಪರ್ವತದ ಬಳಿ ಗಾಳಿಯಲ್ಲಿ ರಿಬ್ಬನ್‍ ಹಾರಿ ಹೋಗುತ್ತಿರುವಂತೆ ಗೋಲ್ಡನ್‍ ಬ್ರಿಡ್ಜ್‍ ನಿರ್ಮಾಣ ಮಾಡಲಾಗಿದೆ.ಮರಗಳಿಂದ ಹೊರಚಾಚಿದ ಎರಡು ಬೃಹದಾಕಾರ, ಕೈಗಳು ಆಕಾಶದಲ್ಲಿ ಸೇತುವೆಯನ್ನು ಎತ್ತಿ ಹಿಡಿದಿರುವಂತೆ ನಿರ್ಮಾಣ ಮಾಡಲಾಗಿದೆ.

ಈ ಸುಂದರ ಮನೋಹರ ಸೌಂದರ್ಯಕ್ಕೆ ತಲೆ ಬಾಗಿರುವ ಸಾರ್ವಜನಿಕರು ಇದನ್ನು ಕಣ್ತುಂಬಿಕೊಳ್ಳಲು ಹಾಗೂ ಸೇತುವೆ ಮೇಲೆ ಓಡಾಡಲೆಂದು ಇಲ್ಲಿಗೆ ಬರುತ್ತಿದ್ದಾರೆ. ಈ ಗೋಲ್ಡನ್‍ ಸೇತುವೆಯ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸಖತ್‍ ವೈರಲ್‍ ಆಗಿವೆ. ಅಲ್ಲದೇ ಈ ಅತ್ಯದ್ಭುತ ವಾಸ್ತುಶಿಲ್ಪಕ್ಕೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ವೈರಲ್‍ ಆಗಿರುವ ಈ ಸೇತುವೆ. ಇನ್ನೆಷ್ಟು ಸುಂದರವಾಗಿರಬಹುದು. ನೋಡುಗರನ್ನು ಕೈಬೀಸಿ ಕರೆಯುತ್ತಿದ್ದು. ನಿಬ್ಬೆರಗಾಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. ಈ ಸೇತುವೆ ನಿರ್ಮಾಣ ಮಾಡಿರುವ ವಾಸ್ತುಶಿಲ್ಪಿಗೆ ನಾವು ಕೂಡ ಸೆಲ್ಯೂಟ್‍ ಹೊಡೆಯಲೇಬೇಕು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.