ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!

June 14, 2019 ⊄   By: Hasiru Suddimane

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.

ನೀರಿನ ನಳ ಮತ್ತು ನೀರಿನ ಬಾಟಲಿಯಿಂದ ಹೆಚ್ಚು ಪ್ರಮಾಣದಲ್ಲಿ ಬರಿಗಣ್ಣಿಗೆ ಕಾಣದ ಸೂಕ್ಷ್ಮ ಪ್ಲಾಸ್ಟಿಕ್ ಗಳು ದೇಹ ಸೇರುತ್ತಿವೆ. ಬಿಯರ್, ಉಪ್ಪು ಹಾಗೂ ಶೆಲ್ ಮೀನಿನಲ್ಲೂ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ದಿನವೊಂದಕ್ಕೆ ಕ್ರೆಡಿಟ್ ಕಾರ್ಡ್ ನ ತೂಕದಷ್ಟು, ವಾರ್ಷಿಕ 250 ಗ್ರಾಂ ಪ್ಲಾಸ್ಟಿಕ್ ದೇಹ ಸೇರುತ್ತಿದೆ.
ಇನ್ನೊಂದು ಅಧ್ಯಯನ ಗ್ರಾಂಡ್ ವ್ಯೆ ರಿಸರ್ಚ್, ಅಮೆರಿಕದ ಪ್ರಜೆಯೊಬ್ಬ 130 ಮೈಕ್ರಾನ್ ಗಿಂತ ಸಣ್ಣ ಗಾತ್ರದ 45,000 ಪ್ಲಾಸ್ಟಿಕ್ ಕಣಗಳನ್ನು ವರ್ಷವೊಂದಕ್ಕೆ ಸೇವಿಸುತ್ತಾನೆ ಹಾಗೂ ಅಷ್ಟೇ ಪ್ರಮಾಣದ ಪ್ಲಾಸ್ಟಿಕ್ ಕಣಗಳನ್ನು ಉಸಿರಾಡುತ್ತಾನೆ ಎಂದು ಹೇಳಿದೆ.


ಇಂಥ ಸೇರ್ಪಡೆ ಬೇಡವೆಂದಾದರೆ, ಪ್ರಕೃತಿಗೆ ಪ್ರತಿ ವರ್ಷ ಲಕ್ಷಾಂತರ ಟನ್ ಪ್ಲಾಸ್ಟಿಕ್ ಸೇರಿಸುವುದನ್ನು ನಿಲ್ಲಿಸಬೇಕು. ಇಡೀ ಚರಿತ್ರೆಯಲ್ಲಿ ಉತ್ಪಾದಿಸದಷ್ಟು ಪ್ಲಾಸ್ಟಿಕ್ ನ್ನು ಕಳೆದ ಎರಡು ದಶಕದಲ್ಲಿ ತಯಾರಿಸಲಾಗಿದೆ. ಉದ್ಯಮ 2025ರವರೆಗೆ ವಾರ್ಷಿಕ ಶೇ. 4 ರಷ್ಟು ಪ್ರಗತಿ ಹೊಂದಲಿದೆ ಎಂದು ಗ್ರಾಂಡ್ ವ್ಯೆ ಹೇಳಿದೆ.

ಉತ್ಪಾದನೆಯಾಗುವ ಪ್ಲಾಸ್ಟಿಕ್ ನಲ್ಲಿ ಶೇ. 75ರಷ್ಟು ತ್ಯಾಜ್ಯ ಎಂದು ಎಸೆಯಲ್ಪಡುತ್ತದೆ. ಇದರಲ್ಲಿ 1/3 ರಷ್ಟು ಅಂದರೆ, ಅಂದಾಜು 100 ದಶ ಲಕ್ಷ ಟನ್ ಎಸೆಯಲ್ಪಡುತ್ತದೆ ಇಲ್ಲವೇ ಭೂಮಿ, ನದಿಗಳು ಹಾಗೂ ಸಾಗರಕ್ಕೆ ಸೇರಿಕೊಳ್ಳುತ್ತದೆ. ನ್ಯೂ ಪ್ಲಾಸ್ಟಿಕ್ ಎಕಾನಮಿಯ ಅಂದಾಜಿನ ಪ್ರಕಾರ, 2025ರಲ್ಲಿ ಸಮುದ್ರದಲ್ಲಿ 3 ಮೆಟ್ರಿಕ್ ಟನ್ ಮೀನಿಗೆ ಒಂದು ಮೆಟ್ರಿಕ್ ಟನ್ ಪ್ಲಾಸ್ಟಿಕ್ ಇರುತ್ತದೆ!
ಪ್ಲಾಸ್ಟಿಕ್ ಎಷ್ಟು ಸರ್ವವ್ಯಾಪಿಯಾಗಿದೆ ಎಂದರೆ, ಸಮುದ್ರದ ತೀರ ಆಳದಲ್ಲಿ ವಾಸಿಸುವ ಮೀನುಗಳಲ್ಲಿ, ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ಪೈರೆನ್ನೆಸ್ ಪರ್ವತದ ಪರಿಶುದ್ಧ ಮಂಜಿನಲ್ಲೂ ಇತ್ತೀಚೆಗೆ ಪ್ಲಾಸ್ಟಿಕ್ ಪತ್ತೆಯಾಗಿತ್ತು. ನಾವೆಲ್ಲರೂ ತನು, ಮನ, ಉಸಿರಿನಲ್ಲಿ ಪ್ಲಾಸ್ಟಿಕ್ ತುಂಬಿಕೊಂಡು ಗತಪ್ರಾಣರಾಗುತ್ತಿದ್ದೇವೆ.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.