ಮೇ 25ರಿಂದ 27ರವರೆಗೆ ಸಾವಯವ ಆಹಾರ ಮೇಳ

March 14, 2018 ⊄   By: Hasiru Suddimane

ವೆಲ್ ನೆಸ್ ಮತ್ತು ಆರ್ಗನಿಕ್ ಎಕ್ಸ್ ಪೊ 2018 ವತಿಯಿಂದ ಸಾವಯವ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.
ಮೇ 25 ರಿಂದ 27 ರವರೆಗೆ ಮೂರು ದಿನಗಳ ಕಾಲ, ಡಾ. ಪ್ರಭಾಕರ್ ಕೋರೆ ಕನ್ವೆಷನ್ ಸೆಂಟರ್, ಪೀಣ್ಯ ಮೆಟ್ರೋ ಸ್ಟೇಷನ್ ಎದುರು, ಯಶವಂತಪುರ ಬಳಿ ನಡೆಯಲಿದೆ.

ಆರೋಗ್ಯ ವೃದ್ಧಿಯಲ್ಲಿ ಆಯುರ್ವೇದ ಔಷಧಿಯ ಮಹತ್ವ, ಧ್ಯಾನ, ಯೋಗ, ಕೌಶಲ್ಯ ಅಭಿವೃದ್ಧಿಯ ಚಟುವಟಿಕೆಗಳು, ಆಯುರ್ವೇದ ಹಾಗೂ ಹರ್ಬಲ್ ಉತ್ಪನ್ನ, ಸಾವಯವ ಆಹಾರ ಮತ್ತು ಪಾನೀಯ, ಸಿರಿಧಾನ್ಯ ಇನ್ನು ಮುಂತಾದ ಆರೋಗ್ಯಪೂರ್ಣ ಉತ್ಪನ್ನಗಳು ಜನರಿಗೆ ಒಂದೇ ಸೂರಿನಡಿ ಲಭ್ಯವಿದೆ.

ಕ್ರಿಮಿನಾಶಕಗಳ ತಡೆಗೆ ಆಹಾರ ಪದಾರ್ಥ ಹಾಗೂ ತರಕಾರಿಯಲ್ಲಿ ರಾಸಾಯನಿಕ ಬಳಕೆ ಯಥೇಚ್ಚವಾಗಿ ಬಳಕೆಯಾಗುತ್ತಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಬೆಳೆಗಳಲ್ಲಿ ರಾಸಾಯನಿಕಗಳನ್ನು ಉಪಯೋಗಿಸದೆ, ಸಾವಯವದ ಕಡೆ ಗಮನ ನೀಡಬೇಕಿದೆ.

ಈ ಸಿರಿಧಾನ್ಯಗಳು ಸಾವಯವ ಕೃಷಿಯ ಮೂಲಕ ಬೆಳೆದಿರುವುದರಿಂದ ದೇಹಕ್ಕೆ ಉತ್ತಮ ಆರೋಗ್ಯ ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಏಕೆಂದರೆ ಈ ಸಿರಿಧಾನ್ಯಗಳ ಅಧಿಕ ಫೈಬರ್ ಕಂಟೆಂಟ್ ಹೊಂದಿದ್ದು ಯಾವುದೇ ರೋಗವು ನಿಮ್ಮನ್ನು ಬಾಧಿಸುವುದಕ್ಕೆ ಬಿಡುವುದಿಲ್ಲ.

ಹಲವು ವರ್ಷಗಳಿಂದ ಸಾವಯವ-ಸಹಜ ಕೃಷಿಯಲ್ಲಿ ತೊಡಗಿರುವ ರೈತರು, ರೈತರ ಗುಂಪುಗಳು ಮತ್ತು ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವಾಗಿದೆ. ಉತ್ಪಾದಕರು ಮತ್ತು ರೈತರೊಡನೆ ನೇರ ಸಂಪರ್ಕ-ಸಂವಾದವನ್ನು ಹಮ್ಮಿಕೊಂಡಿದ್ದಾರೆ.

200ಕ್ಕು ಹೆಚ್ಚು ಮಳಿಗೆಗಳು ಹಾಗೂ 20,000 ಕ್ಕು ಹೆಚ್ಚು ಮಂದಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಹೆಚ್ಚಿನ ಮಾಹಿತಿಗಾಗಿ: 98864 16665/ 98869 26665, 98863 26665


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.