'ಮರ'ವನ್ನು ವರಿಸಿದ 'ಮಧು'ಮಗಳು

March 14, 2018 ⊄   By: Hasiru Suddimane

ಮಳೆ ಬಾರದಿದ್ದರೆ ಕಪ್ಪೆ, ಕತ್ತೆ, ಪ್ರಾಣಿಗಳಿಗೆ ಮದುವೆ ಮಾಡಿ ವರುಣನಿಗೆ ಪ್ರಾರ್ಥಿಸಿಕೊಳ್ಳುವ ಜನರಿದ್ದಾರೆ. ಪ್ರಕೃತಿಯ ಮುಖ್ಯ ಭಾಗವಾಗಿರುವ ಮರಗಳನ್ನು ಉಳಿಸಲು ಹಿಂದೆ ಅಪ್ಪಿಕೊ ಚಳವಳಿ ನಡೆದಿತ್ತು. ಇತ್ತೀಚೆಗೆ ಮೆಕ್ಸಿಕೊದಲ್ಲಿ ಮರಗಳ ರಕ್ಷಣೆಗೆ ಮಹಿಳೆಯರೆಲ್ಲ ಸೇರಿ ಮದುವೆ ಚಳವಳಿ ನಡೆಸಿದ್ದಾರೆ. ಏನಪ್ಪ ಈ ಮದುವೆ ಚಳವಳಿ ಎಂದು ಯೋಚಿಸುತ್ತಿದ್ದೀರಾ?

ಮರಗಳ ಹನನ, ಅಭಿವೃದ್ಧಿ ಹೆಸರಲ್ಲಿ ಮರಗಳ ಬುಡಕ್ಕೆ ಕೊಡಲಿ ಹಾಕುವ ಪರಿಸ್ಥಿತಿಗೆ ತಲುಪುತ್ತಾರೆ. ಗಾಳಿ, ಮಳೆ, ನೆರಳು ನೀಡುತ್ತಿರುವ ವೃಕ್ಷಗಳನ್ನು ನಾಶ ಮಾಡುವುದರಲ್ಲೇ ಇರುತ್ತಾರೆ. ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸುಮಾರು 50ಕ್ಕೂ ಹೆಚ್ಚು ಮಂದಿ ಮರಗಳನ್ನು ಮದುವೆಯಾಗುವ ಮೂಲಕ ಪರಿಸರದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ.

ಮ್ಯಾರಿ ಎ ಟ್ರಿ ಎಂಬ ಹೆಸರಿನಲ್ಲಿ ಕೆಲವು ಸಾಮಾಜಿಕ ಹೋರಾಟಗಾರ್ತಿಯರು ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಾಂಪ್ರದಾಯಿಕ ವಿಧಿವಿಧಾನಗಳ ಪ್ರಕಾರವೇ ಮದುವೆ ನಡೆಯಿತು. ಕೊನೆಗೆ ಎಲ್ಲರೂ ಮರಕ್ಕೆ ಮುತ್ತು ನೀಡಿದರು. ಸಸಿಗಳನ್ನು ನೆಟ್ಟರು.

ಮದುವೆಯ ಉಳಿವು ಬದ್ಧತೆಗೆ ಸಂಬಂಧಪಟ್ಟಿರುತ್ತದೆ. ಹಾಗೆಯೇ ಈ ಮದುವೆಯ ಮೂಲಕ ಅನುಕ್ಷಣವೂ ಮರವನ್ನು ಪ್ರೀತಿಸುತ್ತೇವೆ. ಪರಿಸರ ರಕ್ಷಣೆಗೆ ಬದ್ಧವಾಗಿರುತ್ತೆವೆ ಎಂಬುದನ್ನು ಹೇಳಲು ಈ ಚಳವಳಿ ಆಯೋಜಿಸಿದ್ದೆವು ಎನ್ನುತ್ತಾರೆ ಆಯೋಜಕರು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.