ಅಪರೂಪದ ಪಿಪಿ ಬ್ಲಡ್ ಗ್ರೂಪ್ ಪತ್ತೆ

July 27, 2018 ⊄   By: Hasiru Suddimane

ಪ್ರತಿಯೊಂದು ರಕ್ತದ ಗುಂಪಿಗು ಅದರದ್ದೇ ಆದ ಲಕ್ಷಣಗಳಿರುತ್ತದೆ. ಒಂದೇ ರೀತಿಯ ರಕ್ತದ ಗುಂಪು ಇರುವುದು ಸಾಮಾನ್ಯ ಆದರೆ ವಿಶ್ವದಲ್ಲಿಯೇ ಬಹಳ ಅಪರೂಪ ರಕ್ತದ ಗುಂಪೊಂದನ್ನು ಇಲ್ಲಿನ ಕಸ್ತೂರಬಾ ಆಸ್ಪತ್ರೆಯ ವೈದ್ಯರು ಭಾರತದಲ್ಲಿ ಪ್ರಥಮ ಬಾರಿಗೆ ಪತ್ತೆ ಮಾಡಿದ್ದಾರೆ.

ಇದನ್ನು ಪಿಪಿ ಅಥವಾ ಪಿ ನಲ್ ಎಂದು ಗುರುತಿಸಲಾಗಿದೆ. ಇದು ಸಾವಿರದಲ್ಲಿ ಒಬ್ಬ ವ್ಯಕ್ತಿಗಿಂತಲೂ ಕಡಿಮೆ ಜನರಲ್ಲಿ ಕಂಡು ಬರುತ್ತದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ, ಆಸ್ಪತ್ರೆಯ ರಕ್ತ ತಂತ್ರಜ್ಞರಿಗೆ ಇದು ಯಾವ ಗುಂಪಿನ ರಕ್ತ ಎಂಬುದನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ.

ಆಸ್ಪತ್ರೆಯ ರಕ್ತನಿಧಿಯ ವೈದ್ಯಾಧಿಕಾರಿ ಡಾ.ಶಮಿ ಶಾಸ್ತ್ರೀ ಮತ್ತು ತಂಡದವರು ಸುಮಾರು 80ಕ್ಕೂ ಅಧಿಕ ರಕ್ತದ ಮಾದರಿಗಳೊಂದಿಗೆ ಈ ರೋಗಿಯ ರಕ್ತದ ಮಾದರಿಯನ್ನು ಹೋಲಿಸಿದರೂ ಅದು ತಾಳೆಯಾಗಲಿಲ್ಲ. ಕೊನೆಗೆ ಅದನ್ನು ಇಂಗ್ಲೇಡಿನ ಬ್ಲಡ್ ಗ್ರೂಪ್ ರೆಫರೆನ್ಸ್ ಲ್ಯಾಬೋರೇಟರಿಗೆ ಕಳುಹಿಸಲಾಯಿತು. ಅಲ್ಲಿ ಇದು ತೀರಾ ಅಪರೂಪದ ರಕ್ತದ ಗುಂಪು ಎಂದು ಖಚಿತಪಡಿಸಲಾಯಿತು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.