ಭಾರತಕ್ಕೊಂದು ಬಾಹ್ಯಾಕಾಶ ನಿಲ್ದಾಣ

June 14, 2019 ⊄   By: Hasiru Suddimane

ಚೀನಾವನ್ನು ಅನುಸರಿಸಲು ಮುಂದಾಗಿರುವ ಭಾರತ, 2030ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲು ನಿರ್ಧರಿಸಿದೆ.

ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ನಿಲ್ದಾಣ. ಇದರಲ್ಲಿ ಅಮೆರಿಕದ ನಾಸಾ, ಜಪಾನಿನ ಜಾಕ್ಸಾ, ಕೆನಡಾದ ಸಿಎಸ್ ಎ ಮತ್ತು ರಷ್ಯಾದ ರೊಸ್ಕೋಮೊಸ್ ಪಾಲ್ಗೊಂಡಿವೆ. ನವೆಂಬರ್ 20, 1998ರಲ್ಲಿ ಯೋಜನೆ ಜಾರಿಗೊಂಡಿತು. ತೂಕ 400 ಟನ್. ಇಲ್ಲಿ ಗಗನಯಾತ್ರಿಗಳು ನಿರಂತರ ಪ್ರಯೋಗ ಕೈಗೊಳ್ಳಬಹುದಾಗಿದ್ದು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಅತಿ ದೊಡ್ಡ ಸಹಯೋಗಿ ಯೋಜನೆ ಇದಾಗಿತ್ತು. ಭಾರತ ಈ ಯೋಜನೆಯಲ್ಲಿ ಪಾಲ್ಗೊಂಡಿಲ್ಲ.

ಭಾರತದ ಬಾಹ್ಯಾಕಾಶ ನಿಲ್ದಾಣ ಗಾತ್ರದಲ್ಲಿ (20 ಟನ್) ಚಿಕ್ಕದಾಗಿರಲಿದೆ. ಭೂಮಿಯಿಂದ ಕಡಿಮೆ ದೂರದ ಕಕ್ಷೆಯಲ್ಲಿ, ಅಂದಾಜು 400 ಕಿಮೀ ದೂರದಲ್ಲಿ ಇರಲಿದೆ.

ಬಾಹ್ಯಾಕಾಶ ಯೋಜನೆಗೆ ಮುನ್ನ ಮೂವರು ಗಗನಯಾತ್ರಿಗಳನ್ನು ಒಂದು ವಾರ ಕಾಲ ಬಾಹ್ಯಾಕಾಶಕ್ಕೆ ಕಳಿಸುವ "ಗಗನಯಾತ್ರಿ" ಯೋಜನೆ ಜಾರಿಗೊಳ್ಳಲಿದೆ. ಇದಕ್ಕಾಗಿ ಭಾರತೀಯ ವಾಯುಪಡೆಯ ಪೈಲಟ್ ಗಳ ಪರೀಕ್ಷೆ ಮುಂದಿನ ಆರು ತಿಂಗಳಲ್ಲಿ ನಡೆಯಲಿದೆ. ಆಯ್ಕೆಯಾದವರಿಗೆ ದೇಶ ಹಾಗೂ ವಿದೇಶದಲ್ಲಿ ಕಠಿಣ ತರಬೇತಿ ನೀಡಲಾಗುತ್ತದೆ. 2021ಕ್ಕೆ ಈ ಯೋಜನೆ ಅಂತ್ಯಗೊಳ್ಳಲಿದೆ.


ಆನಂತರ ಬಾಹ್ಯಾಕಾಶ ನಿಲ್ದಾಣ ಯೋಜನೆಯ ರೂಪರೇಷೆ ಸಿದ್ಧಗೊಳ್ಳಲಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಯೋಜನೆಗೆ 5 ರಿಂದ 7 ವರ್ಷ ಬೇಕಾಗಲಿದೆ. ನಿಲ್ದಾಣದಲ್ಲಿ ಗಗನಯಾತ್ರಿಗಳು 15 ರಿಂದ 20 ದಿನ ಉಳಿದುಕೊಳ್ಳಬಹುದು. ನೈಸರ್ಗಿಕ ವಿಪತ್ತುಗಳ ಕುರಿತು ಸೂಕ್ಷ್ಮ ನಿಗಾ ಇರಿಸಲು ಈ ನಿಲ್ದಾಣ ನೆರವಾಗಲಿದೆ.
ಇದಕ್ಕೂ ಮುನ್ನ ಅನುಷ್ಠಾನಗೊಳ್ಳಬೇಕಿರುವ ಇನ್ನೊಂದು ಯೋಜನೆ, 2020ರ ಸೂರ್ಯನ ಅಧ್ಯಯನದ ಆದಿತ್ಯ ಮಿಷನ್. ಚೀನಾ ಈಗಾಗಲೇ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.