ಸ್ಕ್ರಾಮ್ ಜೆಟ್ ಪ್ರಯೋಗಾರ್ಥ ಪರೀಕ್ಷೆ

June 13, 2019 ⊄   By: Hasiru Suddimane

ಡಿಆರ್ ಡಿಓ ಅಭಿವೃದ್ಧಿಪಡಿಸಿರುವ ಮಾನವರಹಿತ, ದೇಶಿ ನಿರ್ಮಿತ ಸ್ಕ್ರಾಮ್ ಜೆಟ್ ರಾಕೆಟ್ ಪರೀಕ್ಷೆ ಬಾಲಾಸೋರ್ ನಲ್ಲಿ ನಡೆದಿದ್ದು, ಯಶಸ್ವಿಯಾಗಿದೆ.

ಬಂಗಾಳ ಕೊಲ್ಲಿಯ ಡಾ ಅಬ್ದುಲ್ ಕಲಾಂ ದ್ವೀಪದಲ್ಲಿ ಪರೀಕ್ಷೆ ನಡೆದಿದ್ದು, ಹೈಪರ್ ಸಾನಿಕ್ ಕ್ರೂಸ್ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಯೋಜನೆಗೆ ಪೂರಕವಾಗಿ ಈ ಪ್ರಯೋಗ ನಡೆದಿದೆ. ಹೈಪರ್ ಸಾನಿಕ್ ತಂತ್ರಜ್ಞಾನ ಪ್ರದರ್ಶಕ ವಾಹನ (ಎಚ್ ಎಸ್ ಟಿಡಿವಿ) ಯೋಜನೆಯಡಿ ಅಭಿವೃದ್ಧಿ ಪಡಿಸಿದ ಸ್ಕ್ರಾಮ್ ಜೆಟ್ ನ್ನು ನಾನಾ ಉದ್ದೇಶಗಳಿಗೆ ಬಳಸಬಹುದಾಗಿದೆ.

ದೇಶ ಉಪಗ್ರಹ ತಂತ್ರಜ್ಞಾನದಲ್ಲಿ ಮುಂದೆ ಇದ್ದು, ರಾಕೆಟ್ ಗಳು ಹಾಗೂ ಉಪಗ್ರಹಗಳನ್ನು ನಿಮಿಸಿ, ನಾನಾ ದೇಶಗಳಿಗೆ ಮಾರಾಟ ಮಾಡುತ್ತಿದೆ. ಅತಿ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲು ಸ್ಕ್ರಾಮ್ ಜೆಟ್ ನೆರವಾಗಲಿದೆ. ಸೆಕೆಂಡಿಗೆ 20 ಮ್ಯಾಕ್ ವೇಗದಲ್ಲಿ 32.5 ಕಿಮೀ ದೂರ ಚಲಿಸುವ ಸಾಮರ್ಥ್ಯ ಹೊಂದಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಬರದಲ್ಲಿ ರೈತರಿಂದ ನೆರವಿನ ಹಸ್ತ
ಬರದಲ್ಲಿ ರೈತರಿಂದ ನೆರವಿನ ಹಸ್ತ
July 12, 2019

ಮಹಾರಾಷ್ಟ್ರವನ್ನು ಬರ ಕಾಡುತ್ತಿದೆ. ರಾಸುಗಳಿಗೆ ಮೇವು, ನೀರಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಮೇವು ಪೂರೈಸಲೆಂದು ಸರ್ಕಾರ ಆರಂಭಿಸಿದ್ದ ಶಿಬಿರಗಳು ಜನಪ್ರತಿನಿಧಿಗಳು, ಅವರ ಹಿಂಬಾಲಕರು ಹಾಗೂ ಸ್ವಯಂಸೇವಾ ಸಂಘಟನೆಗಳಿಗೆ ಹಣದ ಹೊಳೆ ಹರಿಸುತ್ತಿವೆ.