ಭೌತವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ ಇನ್ನಿಲ್ಲ

March 14, 2018 ⊄   By: Hasiru Suddimane

ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಪ್ರೊ.ಸ್ಟೀಫನ್ ಹಾಕಿಂಗ್(76)ಬುಧವಾರ ಬೆಳಗ್ಗೆ ಕೇಂಬ್ರಿಡ್ಜ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಈ ಕುರಿತು ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಅವರು ಪ್ರಕಣೆಯಲ್ಲಿ ಮಾಹಿತಿ ನೀಡಿ, ‘ನಮ್ಮ ಪ್ರೀತಿಯ ತಂದೆಯವರ ನಿಧನದಿಂದ ದುಃಖವಾಗಿದೆ’ ಎಂದು ಹೇಳಿದ್ದಾರೆ.
ಇಂಗ್ಲಿಷ್ ಭೌತಶಾಸ್ತ್ರಜ್ಞ, ಕಾಸ್ಮೊಲಾಜಿಸ್ಟ್, ಸ್ಟೀಫನ್ ಹಾಕಿಂಗ್ (8 ಜನವರಿ 1942-14 ಮಾರ್ಚ್ 2018) 40 ವರ್ಷಕ್ಕೂ ಅಧಿಕ ಕಾಲದಿಂದ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು.

ಹಾಕಿಂಗ್ ಅವರು ಸ್ನಾಯುವಿಗೆ ಸಂಬಂಧಿಸಿದ ಅಪರೂಪದ ತೀವ್ರತರದ ನರಕೋಶದ ಕಾಯಿಲೆಗೆ ತುತ್ತಾಗಿದ್ದರು. (ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಟ್ಟ ಸ್ಥಿತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ಗೆ (ALS) ಸಂಬಂಧಿಸಿದ ನರ-ಸ್ನಾಯು ಕ್ಷಯ ರೋಗ) ಅಲ್ಲದೆ, ಬೆನ್ನು ಹುರಿಯ ಸ್ನಾಯು ಕ್ಷೀಣತೆಯಿಂದಲೂ ಬಳಲುತ್ತಿದ್ದರು.

1942ರ ಜನವರಿ 8ರಂದು ಆಕ್ಸ್ಫರ್ಡ್ನಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಅವರು ಭೌತಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿದ್ದಾರೆ. ವಿಶ್ವವಿಜ್ಞಾನ ಹಾಗೂ ಕ್ವಾಂಟಮ್ ಗುರುತ್ವಾಕರ್ಷಣೆ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರದ ವಿವರಗಳನ್ನು ಕುರಿತ ಅಧ್ಯಯನ ಮತ್ತು ಸಂಶೋಧನಾ ಕೊಡುಗೆಗಳಿಂದ ಪ್ರಸಿದ್ಧಿ ಹೊಂದಿದ್ದರು.

40 ವರ್ಷಗಳ ಕಾಲ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಹಾಕಿಂಗ್, ಗಾನ್ವಿಲ್ಲೆ ಆ್ಯಂಡ್ ಕಾಯಸ್ ವಿದ್ಯಾಲಯದಲ್ಲಿ ಫೆಲೋ ಆಗಿ, ಕೇಂಬ್ರಿಡ್ಜ್ ಮತ್ತು ಒಂಟಾರಿಯೊದ ವಾಟರ್ಲೂನ, ಪೆರಿಮೀಟರ್ ಇನ್ಸ್ಟಿಟ್ಯೂಟ್ ಫಾರ್ ಥಿಯೊರೆಟಿಕಲ್ ಫಿಸಿಕ್ಸ್ ಸಂಸ್ಥೆಯಲ್ಲಿ ಪ್ರತ್ಯೇಕ ಸಂಶೋಧಕ ಪ್ರಾಧ್ಯಾಪಕ ಸ್ಥಾನವನ್ನು ಅಲಂಕರಿಸಿದ್ದರು.

2008ನೇ ಇಸವಿಯಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ 50ನೇ ವರ್ಷಾಚರಣೆಯ ಸಂದರ್ಭದಲ್ಲಿ, ಮಾನವ ಜನಾಂಗ ಆಕಾಶದ ಅನ್ವೇಷಣೆಗೆ ಯಾಕೆ ಮುಂದಾಗುತ್ತದೆ ಎಂಬುದರ ಕುರಿತು ಆಸಕ್ತಿದಾಯಕ ಭಾಷಣ ನೀಡಿ ಹಾಕಿಂಗ್ ವಿಶ್ವದ ಗಮನ ಸೆಳೆದಿದ್ದರು.

ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಹಾಕಿಂಗ್ ಉನ್ನತ ಅಧ್ಯಯನ ನಡೆಸಿದ್ದಾರೆ. ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳು ಹಾಕಿಂಗ್ರನ್ನು ಅರಸಿಕೊಂಡು ಬಂದಿವೆ.
ಗಣಿತದಲ್ಲಿ ಆಸಕ್ತಿ ಹೊಂದಿದ್ದ ಬಾಲಕ ಭೌತಶಾಸ್ತ್ರ ವಿಜ್ಞಾನಿಯಾದ!: ಹಾಕಿಂಗ್ ಅವರ ಕುಟುಂಬವೂ ವೈಜ್ಞಾನಿಕ ಕ್ಷೇತ್ರ ಹಿನ್ನೆಲೆಯುಳ್ಳದ್ದೇ ಆಗಿದೆ. ಅವರ ತಂದೆ ಡಾ. ಫ್ರಾಂಕ್ ಹಾಕಿಂಗ್ ಖ್ಯಾತ ಜೀವಶಾಸ್ತ್ರಜ್ಞರಾಗಿದ್ದರು. ಹಾಕಿಂಗ್ಗೆ ಎಳವೆಯಲ್ಲೇ ವಿಜ್ಞಾನ ಬಗ್ಗೆ ಅಪಾರ ಆಸಕ್ತಿ ಇತ್ತು ಎನ್ನಲಾಗಿದೆ. ಆದರೆ, ಆರಂಭದಲ್ಲಿ ಗಣಿತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು, ಅದನ್ನೇ ಅಧ್ಯಯನ ಮಾಡಬೇಕು ಎಂದುಕೊಂಡಿದ್ದರಂತೆ. ಅವರ ತಂದೆ ತಾವು ವ್ಯಾಸಂಗ ಮಾಡಿದ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಆದರೆ, ಆ ಸಂದರ್ಭ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಷಯಕ್ಕೆ ಪ್ರಾಧ್ಯಾಪಕರೇ ಇಲ್ಲವಾದ್ದರಿಂದ ಹಾಕಿಂಗ್ರ ಅರ್ಜಿಯನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತ್ತು! ಇದರಿಂದಾಗಿ ಅವರು ಭೌತವಿಜ್ಞಾನ ಅಧ್ಯಯನದಲ್ಲಿ ತೊಡಗಿಸಿಕೊಂಡರು ಎನ್ನಲಾಗಿದೆ.

ಸ್ಟೀಫನ್ ಕುರಿತು ಒಂದಿಷ್ಟು
- ಪಿಎಚ್ಡಿ ಅಧ್ಯಯನಕ್ಕೂ ಮುನ್ನ 1959 ರಲ್ಲಿ ಆಕ್ಸ್ಪರ್ಡ್ ವಿಶ್ವವಿದ್ಯಾಲಯದಲ್ಲಿ ನೈಸಗ್ರಿಕ ವಿಜ್ಞಾನ ಅಧ್ಯಯನ.
- 1963 ರ ಹೊತ್ತಿಗೆ , ಮೋಟಾರ್ ನರಕೋಶ ತೊಂದರೆಗೆ ಸಿಲುಕಿದ ಸ್ಟೀಫನ್
- 1974 ರಲ್ಲಿ ಕಪ್ಪು ಕುಳಿಗಳು ವಿಕಿರಣವನ್ನು ಹೊರಸೂಸುತ್ತವೆ ಎಂಬ ತನ್ನ ಸಿದ್ಧಾಂತವನ್ನು ವಿವರಿಸಿದರು. ನಂತರ ಅದು ಹಾಕಿಂಗ್ ವಿಕಿರಣಗಳು ಎಂದೇ ಹೆಸರಾಯಿತು.
- 1988 ರಲ್ಲಿ ಸ್ಟೀಫನ್ ಪ್ರಕಟಿಸಿದ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕ 10 ದಶಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ.
- ಸ್ಟೀಫನ್ ಅವರ ಜೀವನಾಧಾರಿತ ಕಥೆಯು 2014ರಲ್ಲಿ ಎಡ್ಡಿ ರೆಡಿಮೇನ್ ನಟನೆಯಲ್ಲಿ ‘ದ ಥಿಯರಿ ಆಫ್ ಎವೆರಿಥಿಂಗ್’ ಸಿನಿಮಾವಾಯಿತು.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
December 11, 2018

ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.