ಮುಂದಿದೆ ಜಲಕ್ಷಾಮ…

February 12, 2018 ⊄   By: Hasiru Suddimane

ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಿಸಲಿರುವ ವಿಶ್ವದ ಟಾಪ್ 11 ನಗರಗಳಲ್ಲಿ ಉದ್ಯಾನನಗರಿ 2 ನೇ ಸ್ಥಾನ ಪಡೆದಿದೆ. ನೀರಿನ ಸಮಸ್ಯೆಗಾಗಿ ವಿಶ್ವದಲ್ಲೇ ಕುಖ್ಯಾತಿ ಗಳಿಸಿರುವ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಮೊದಲ ಸ್ಥಾನದಲ್ಲಿದೆ.

ವಿಶ್ವಸಂಸ್ಥೆ ಮತ್ತು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನಡೆಸಿದ ಅಧ್ಯಯನವನ್ನು ಆಧರಿಸಿ ಬಿ.ಬಿ.ಸಿ. ನ್ಯೂಸ್ ವರದಿ ಪ್ರಕಟಿಸಿದೆ.
ದಕ್ಷಿಣ ಆಫ್ರಿಕಾದ ಬಂದರು ನಗರ ಕೇಪ್ ಟೌನ್ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಮಹಾನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು, ಬ್ರೆಜಿಲ್ ನ ಸಾವೊಪೊಲೊ, ಚೀನಾದ ಬೀಜಿಂಗ್, ಈಜಿಪ್ಟ್ ನ ಕೈರೋ, ಇಂಡೋನೇಷ್ಯಾದ ಜಕಾರ್ತಾ, ರಷ್ಯಾದ ಮಾಸ್ಕೋ, ಟರ್ಕಿಯ ಇಸ್ತಾಂಬುಲ್, ಮೆಕ್ಸಿಕೊ ಸಿಟಿ ಹಾಗೂ ಲಂಡನ್ ನಗರಗಳು ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ನಗರಗಳ ಪಟ್ಟಿಯಲ್ಲಿವೆ.

ಬೆಂಗಳೂರಿನಲ್ಲಿ ಕೆರೆಗಳ ಕಣ್ಮರೆ, ಜಲಮಾಲಿನ್ಯದ ಕಾರಣದಿಂದ ನೀರಿನ ಕೊರತೆ ಜಾಸ್ತಿಯಾಗಲಿದೆ. ಬೆಂಗಳೂರಿನ ಕೆರೆಗಳ ನೀರು ಕುಡಿಯುವುದಿರಲಿ, ದಿನಬಳಕೆಗೂ ಬರುವುದಿಲ್ಲ ಎಂದು ಹೇಳಲಾಗಿದೆ. ಬೆಂಗಳೂರು ನಿಯಂತ್ರಣಕ್ಕೆ ಸಿಗದಂತೆ ಬೆಳೆಯುತ್ತಿದೆ. ಮಾತ್ರವಲ್ಲ ಶೇ. 50 ರಷ್ಟು ನೀರು ಪೋಲಾಗುತ್ತಿದೆ. ನೀರಿನ ಕೊರತೆ ತೀವ್ರತರವಾಗಿ 2025 ರ ವೇಳೆಗೆ ಬೆಂಗಳೂರು ಜನ ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.