ಜೀವಜಲವನಿತ್ತ ‘ಬೆಟ್ಟದ ಜೀವ’ಕ್ಕೆ ಬಸವ ಶ್ರೀ ಪ್ರಶಸ್ತಿ

April 11, 2018 ⊄   By: Hasiru Suddimane

ಕುರಿ ಕಾಯುತ್ತಲೇ ಬೆಟ್ಟದ ತಪ್ಪಲಲ್ಲಿ ಕೆರೆ ಕಟ್ಟಿ, ಪಶು-ಪಕ್ಷಿಗಳಿಗೆ ನೀರುಣಿಸಿದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರನ್ನು ಚಿತ್ರದುರ್ಗ ಮುರುಘಾಮಠದ 2017 ನೇ ಸಾಲಿನ ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅವಧೂತನ ಪರಿಚಯಿಸಿದ್ದ ಹಸಿರುವಾಸಿ
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕುಂದನಿ ಬೆಟ್ಟದ ತಪ್ಪಲಲ್ಲಿ ಕುರಿ ಮೇಯಿಸುತ್ತಲೇ ಪ್ರಾಣಿಗಳಿಗಾಗಿ 7 ಕೆರೆಗಳನ್ನು ಕಟ್ಟಿಸಿದ ಆಧುನಿಕ ಭಗೀರಥ ಮಂಡ್ಯದ ಕಾಮೇಗೌಡರನ್ನು ‘ಹಸಿರುವಾಸಿ’ ಪರಿಚಯಿಸಿತ್ತು. ಕಳೆದ ವರ್ಷದ ಡಿಸೆಂಬರ್ ಮೊದಲನೇ ಸಂಚಿಕೆಯಲ್ಲಿ ‘ಅವಧೂತನ ಜತೆ ಒಂದು ದಿನ’ ಎಂಬ ಶೀರ್ಷಿಕೆ ಹೊತ್ತ ಲೇಖನವು ಕಾಮೇಗೌಡರ ಯಶೋಗಾಥೆಯನ್ನು ತೆರೆದಿಟ್ಟಿತ್ತು. ಅಲ್ಲದೆ ‘ಕನ್ನಡಪ್ರಭ’ ದಿನಪತ್ರಿಕೆ ಹಾಗೂ ‘ಸುವರ್ಣ ನ್ಯೂಸ್’ ಸುದ್ದಿವಾಹಿನಿ ಕೊಡ ಮಾಡುವ ಪ್ರಸಕ್ತ ವರ್ಷದ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿಯೂ ಕಾಮೇಗೌಡರಿಗೆ ಲಭಿಸಿತ್ತು.


ಏಪ್ರಿಲ್ 15ರಂದು ಮುರುಘಾಮಠದ ಅಲ್ಲಮಪ್ರಭು ಸಭಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘಾಶರಣರು ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
ಜ.23ರಿಂದ 25ರವರೆಗೆ ಹೆಸರುಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ
January 21, 2019

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದಲ್ಲಿ ಜನವರಿ 23ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.