ಗಂಗೆಯ ಇತಿಹಾಸ, ಜಲವಿದ್ಯುತ್ ಮತ್ತು ವಿಕಾಸ- ಭಾಗ -2

October 11, 2018 ⊄   By: ಡಾ. ಶ್ರೀನಿಧಿ. ವಿ

ಎತ್ತರದ ಅಣೆಕಟ್ಟಿಗೆ ಒಂದು ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿಯಲಾಯಿತು. ಒಂದು ಕಡಿಮೆ ಎತ್ತರದ ಅಣೆಕಟ್ಟು ಅಥವಾ ತಡೆ ಗೋಡೆಯ ಮೂಲಕ ನೀರಿನ ಮಾರ್ಗವನು ್ನಬದಲಿಸಿ, ಪಕ್ಕದ ಬೆಟ್ಟದಲ್ಲಿ ಒಂದು ಮಹಾನ್ಗಾತ್ರದ ಪೈಪಿನ ಸುರಂಗವನ್ನು ತೋಡಿ, ಅದರಲ್ಲಿ ಈ ನೀರನ್ನು ಒಳಗೊಳಗೇ ೧೦-೧೫ ಕಿಮೀ ಕರೆದೊಯ್ದು ಸುರಂಗದ ಬಾಯಿಯಿಂದ ೧೦೦-೨೫೦ ಮೀ ಎತ್ತರದಿಂದ ಮತ್ತೆ ಅದೇ ನದಿಯ ಪಾತ್ರಕ್ಕೊ ಅಥವಾ ಇನ್ನೊಂದು ಝರಿಯಲ್ಲೋ ಆ ನೀರನ್ನು ಬೀಳಿಸಿ, ಅಲ್ಲೊಂದು ಟರ್ಬೈನ್ ಜೋಡಿಸಿ ಜಲ-ವಿದ್ಯುತ್ತನ್ನು ಉತ್ಪಾದಿಸಿ, ನೀರನ್ನು ಕೈ ಚೆಲ್ಲುವುದು. ಈ ವ್ಯವಸ್ಥೆಯಲ್ಲಿ ಎತ್ತರದ ಅಣೆಕಟ್ಟನ್ನು ಕಟ್ಟಬೇಕಾಗಲಿಲ್ಲ; ಆದರೆ, ಬೆಟ್ಟದಲ್ಲಿ ಉದ್ದನೆಯ ಸುರಂಗವನ್ನು ತೋಡಬೇಕಾಯಿತು. ಜಲಾಶಯವೇನೋ ಆಗಲಿಲ್ಲ, ಆದರೆ, ಸುರಂಗದಿಂದ ಬೀಳುವ ಮಣ್ಣು, ಕಲ್ಲಿನ ಪುಡಿಗಳ ಸಮಸ್ಯೆ. ನೀರಿನಲ್ಲಿ ಹರಿವೇನೋ ಉಳಿಯಿತು, ಆದರೆ ನೀರಿನೊಂದಿಗೆ ಪ್ರಾಕೃತಿಕ ಗಿಡಗಂಟಿಗಳ ಹಾಗೂ ಗಾಳಿಯ ಸಂಪರ್ಕ ಕಡಿಯಿತು. ಜಲಚರಗಳ ಜೀವಾಪಾಯವಂತೂ ಇದ್ದೇ ಇದೆ. ಬೆಟ್ಟದಲ್ಲಿ ದೊಡ್ಡವ್ಯಾಸದ ಉದ್ದನೆಯ ಸುರಂಗಗಳನ್ನು ಮಾಡುವುದರಿಂದ ಜಲಮೂಲಗಳ ಹಾಗೂ ಬೆಟ್ಟದ ಸ್ಥಿರತೆಯ ಮೇಲೆ ಹೊಸ ಸಮಸ್ಯೆಗಳು ಎದುರಾಗುತ್ತವೆ ಅಥವಾ ಬೆಟ್ಟಗಳ ಬಿರುಕು, ಕುಸಿತ ಮೊದಲಾದ ಸಮಸ್ಯೆಗಳೂ ಹೆಚ್ಚಾಗುತ್ತವೆ.

ಬ೪: ಮೇಲೆ ತಿಳಿಸಿದ ಎಲ್ಲ ಸಮಸ್ಯೆಗಳು ಹಾಗೂ ಕೆಟ್ಟ ಪರಿಣಾಮಗಳು ಇದ್ದಾಗ್ಯೂ, ಪರಿಸರದ ಮೇಲಾಗುವ ದುಷ್ಪರಿಣಾಮಗಳಿಗೆ ಬೆಲೆ ಕಟ್ಟದಿದ್ದರೆ, ಆಗ ಪಶುಬಲವೊಂದನು ್ನಹೊರತುಪಡಿಸಿ, ಬೇರೆಲ್ಲ ಮೂಲಗಳಿಗಿಂತ ಜಲವಿದ್ಯುತ್ತೇ ವಿದ್ಯುತ್ನ ಅತ್ಯಂತ ಅಗ್ಗದ ಮೂಲವಾಗಿ ತೋರುತ್ತದೆ. ಮೊದಲು ಇದನ್ನು ಸ್ಥಾಪಿಸಲು ದೊಡ್ಡ ಮಟ್ಟದ ಖರ್ಚಿದ್ದರೂ, ಇದನ್ನು ನೋಡಿಕೊಳ್ಳಲು ಬೇಕಾದ ಬಳಕೆಯ ಖರ್ಚು ಅತಿ ಕಡಿಮೆಯಾದ್ದರಿಂದ, ಹೆಚ್ಚಚೂ ಕಡಿಮೆ ಉಚಿತವಾಗಿಯೇ ಭಾರೀ ಪ್ರಮಾಣದ ವಿದ್ಯುತ್ ದೊರೆಯಲಾರಂಭಿಸುತ್ತದೆ. ಈ ವಿಷಯದಲ್ಲಿ ಇನ್ನೂ ಒಂದು ವಿಷಯವನ್ನು ಗಮನಿಸಬೇಕು. ವಿದ್ಯುತ್ತಿನ ಬೇರೆ ಮೂಲಗಳಿಗೆ ಹೋಲಿಸಿದರೆ, ಜಲವಿದ್ಯುತ್ತಿನ ಉತ್ಪಾದನೆಯಲ್ಲಿ ತಗಲುವ ಹೆಚ್ಚಿನ ಖರ್ಚು ಯಂತ್ರಗಳಿಗಲ್ಲ; ಬದಲಿಗೆ ತಡೆಗೋಡೆ ಕಟ್ಟಲು ಅಥವಾ ಸುರಂಗ ಕೊರೆಯಲು ಬೇಕಾಗುತ್ತದೆ. ಇದನ್ನು ಸರಕಾರಗಳೂ ಇಷ್ಟಪಡುತ್ತವೆ. ಏಕೆಂದರೆ, ವರ್ಷಗಟ್ಟಲೆ ಕಾಲ ಬಹಳ ಜನರಿಗೆ ಉದ್ಯೋಗ ಲಭಿಸುತ್ತದೆ. ರಸ್ತೆಗಳ ನಿರ್ಮಾಣವಾಗುತ್ತದೆ. ಈ ಪ್ರದೇಶವೆಲ್ಲ ಹೊರಪ್ರದೇಶಕ್ಕೆ ತೆರೆದುಕೊಳ್ಳುತ್ತದೆ.

ಬ೫: ಜಲವಿದ್ಯುತ್ತಿನ ಒಂದು ವಿಶೇಷತೆಯೆಂದರೆ ಬೇಕೆನಿಸಿದಾಗ ನಿಮಿಷಗಳಲ್ಲೇ ವಿದ್ಯುತ್ ಉತ್ಪಾದನೆ ಆರಂಭಿಸಬಹುದು, ಬೇಡವಾದಾಗ ನಿಮಿಷಗಳಲ್ಲೇ ನಿಲ್ಲಿಸಬಹುದು. ಹಾಗಾಗಿ, ವಿದ್ಯುತ್ತಿನ ಅಧಿಕ ಆವಶ್ಯಕತೆಯಿದ್ದಾಗ (ಸಂಜೆ ೬ ರಿಂದ ರಾತ್ರಿ ೧೧ ರವರೆಗೆ) ಉತ್ಪಾದನೆ ನಡೆಸುವುದು; ನಂತರ ಮರುದಿನಾ ಸಂಜೆಯವರೆಗೆ ನಿಲ್ಲಿಸುವುದು. ಇದರ ಪರಿಣಾಮ ಕೆಳಗಿನ ಪ್ರದೇಶದಲ್ಲಿನ ನದಿಯ ಹರಿವಿನ ಮೇಲೆ ಹಾಗೂ ಜೀವಜಂತುಗಳ ಜೀವನದ ಮೇಲೆ ಬೀಳುತ್ತದೆ. ಉದಾಹರಣೆಗೆ, ಮನೇರೀ - ಭಾಲೀಪರಿ ಯೋಜನೆಯಿಂದಾಗಿ ಉತ್ತರಕಾಶಿಯ ಘಾಟ್ನ ಮೇಲೆ ಅಥವಾ ತೆಹ್ರಿಯಿಂದಾಗಿ ಹೃಷೀಕೇಶ ದತ್ರಿವೇಣಿ ಘಾಟ್ನ ಮೇಲೆ ಬೀಳುವ ಪರಿಣಾಮಗಳಂತೆ. ಇವುಗಳಿಗೇನೂ ಬೆಲೆಯೇ ಇಲ್ಲವೇ?

(ಕ) ಗಂಗೆ ಮತ್ತು ಜಲವಿದ್ಯುಚ್ಛಕ್ತಿ
ಕ೧: ಗಂಗೆ ಹಾಗೂ ಉತ್ತರಾಖಂಡದಲ್ಲಿನ ಆಕೆಯ ಉಪನದಿಗಳ ಕುರಿತಾಗಿ ದೊಡ್ಡಪ್ರಮಾಣದ ಹಸ್ತಕ್ಷೇಪ ಮುಘಲರ ಆಳ್ವಿಕೆಯ ಕಾಲದವರೆಗೂ ಇರಲಿಲ್ಲ. ಆದಾಗ್ಯೂ ಚಿಕ್ಕಮಟ್ಟದಲ್ಲಿಯ ಮುನೆಯ ನೀರನ್ನು ತೆಗೆಯಲು ಪಶ್ಚಿಮ ಯಮುನಾ ಕಾಲುವೆಯ ನಿರ್ಮಾಣ ಕಾರ್ಯದ ಆರಂಭ ಅಕ್ಬರನ ಕಾಲದಲ್ಲೂ, ಹಾಗೆಯೇ ಶಹಜಹಾನನ ಕಾಲದಲ್ಲಿ ಆ ಕಾಲುವೆಯ ಮೂಲಕ ಡಾಕ-ಪತ್ಥರದಿಂದ ಕರನಾಲ, ಕುರುಕ್ಷೇತ್ರ, ಪಾಣಿಪತ್ ಮಾರ್ಗವಾಗಿ ದೆಹಲಿಯ ಚಾಂದನೀ ಚೌಕ್ ಮತ್ತು ಕೆಂಪುಕೋಟೆಯ ತನಕ ಯಮುನೆಯ ನೀರು ಹರಿಸಲಾಯಿತು. ಬಾದಶಾಹರ ಈ ಕಾಲುವೆಯನ್ನು ೧೮೨೦ರ ದಶಕದಲ್ಲಿ ಬ್ರಿಟಿಷರು ನವೀಕರಿಸಿದರು. ಅಲ್ಲದೇ ಪೂರ್ವ ಯಮುನಾ ಕಾಲುವೆಯನ್ನು ನಿರ್ಮಿಸಿ; ಅದರ ಮೂಲಕ ಸಹಾರನಪುರ, ಶಾಮಲೀ, ಬಡೌತ್, ಬಾಗಪತ್ಮಾರ್ಗವಾಗಿ ದಿಲ್ಲೀ ಶಾಹದಾರದ ತನಕ ನೀರಾವರಿಯ ಕಲ್ಪಿಸಲಾಯಿತು. ೧೮೪೦ರಲ್ಲಿ ಬ್ರಿಟಿಷ್ ಸರಕಾರ ಗಂಗೆಯಲ್ಲಿ ಹಸ್ತಕ್ಷೇಪ ಮಾಡುವ ಸಾಹಸ ಮಾಡಿತು. ಗಂಗೆಯಿಂದ ಹೊರಡುವ ಮೊದಲ ಕಾಲುವೆಯ ನಿರ್ಮಾಣ ೧೮೪೧ರಲ್ಲಿಆರಂಭಗೊಂಡು ೧೮೪೬ರಲ್ಲಿ ಪೂರ್ಣಗೊಂಡಿತು. ಈ ಕಾಲುವೆಯ ಪಾತ್ರದಲ್ಲಿ ನೀರಿನ ಹರಿವಿಗೆ ಬೇಕಾದ್ದಕಿಂತ ದೊಡ್ಡ ಮಟ್ಟದ ಪ್ರಪಾತಗಳೂ ಅಲ್ಲಲ್ಲಿ ಇದ್ದವು, ಕೆಲವೆಡೆಯಲ್ಲಂತೂ ಚಿಕ್ಕ ಜಲಪಾತಗಳೇ ಆಗಿಹೋದವು. ಉದಾಹರಣೆಗೆ ಪಥರೀ, ಆಸಫ್ನಗರ, ಮುಹಮ್ಮದಪುರ ಇತ್ಯಾದಿ.ಕ೨: ಕಾಂಟ್ಲೇಯು ಮಾಡಿದ ಭೀಮ ಗೋಡಾಹೆಡ್ವರ್ಕ್, ಬಹಳ ಕಡಿಮೆ ಎತ್ತರದ (೧.೫ ಮೀ) ಕಲ್ಲಿನ ಗೋಡೆಯಾಗಿತ್ತು; ನೀರು ಕಡಿಮೆಯಾದಾಗ ಅದರ ಎತ್ತರವನ್ನು ಹೆಚ್ಚಿಸಲು ೦.೫ ಮೀನ ಹಲಗೆಗಳನ್ನು ಇಡಲಾಗುತ್ತಿತ್ತು. ಅದರ ಒಂದು ಭಾಗದಲ್ಲಿ ಮೀನುಗಳಿಗೆ ಮೇಲೆ-ಕೆಳಗೆ ಓಡಾಡಲು ್ಛಜಿ ್ಝಛ್ಟಿ ಇತ್ತು. ಬಲಭಾಗದಿಂದ ಕಾಲುವೆಯೊಂದು ಹರ್ಕೀಪೌಡೀ ಮಾರ್ಗವಾಗಿ ಹೋಗುತ್ತಿತ್ತು. ಅವಶ್ಯಕತೆಗಿಂತ ಹೆಚ್ಚಿನ ನೀರನ್ನು ಎಡಭಾಗದಿಂದ ದಡಕ್ಕೆ ಹಾಕಿದ ಹಲಗೆಗಳ ಬಾಗಿಲುಗಳಿಂದ ತೆಗೆದು ಪುನಃ ನೀಲಧಾರೆಗೆ ಸೇರಿಸಲಾಗುತ್ತಿತ್ತು. ಈ ರೀತಿಯಾಗಿ ಅವಿರಳತೆಯೂ ಭಂಗವಾಗುತ್ತಿರಲಿಲ್ಲ; ಗಂಗೆಯ ವಿಶೇಷ ಕಣಗಳಿಗಾಗಲೀ, ಜಲಚರ ಜೀವಿಗಳ ಓಡಾಟಕ್ಕಾಗಲೀ ಬಾಧೆಯಗಲಿಲ್ಲ. ನಂಬಿಕೆಯೂ ಹಾಗೇ ಇತ್ತು, ಒಂದು ಮಟ್ಟದ ತನಕ ಸತ್ಯವೂ ಸಹ; ಅದೇನೆಂದರೆ, ರೂರ್ಕಿ, ದೇವಬಂದ್, ಖತೌಲೀ, ಮುರಾದನಗರ, ಬುಲಂ ದಶಹರದ ತನಕ ಗಂಗಾಕಾಲುವೆ ಗಂಗೆಯಧಾರೆಯೆಂದೇ ನಂಬಬಹುದು. ಇದೇ ಶ್ರದ್ಧೆಯಿಂದ ಜನರು ಸ್ನಾನ ಮಾಡುತ್ತಾರೆ, ಪೂಜೆಮಾಡುತ್ತಾರೆ.

ಕ೩: ೧೯೦೫-೧೯೧೦ ರ ಮಧ್ಯದಲ್ಲಿ ಭೀಮ ಗೋಡಾಹೆಡ್ವರ್ಕ್ಸ್ನ ಆಧುನೀಕರಣವಾಯಿತು; ಕಾಂಕ್ರೀಟಿನ ಗೋಡೆಗಳು, ಕಬ್ಬಿಣದ ಬಾಗಿಲುಳ್ಳ ಸ್ಲೂಯಿಸ್ಗಳು ಇತ್ಯಾದಿ; ಹಾಗೆಯೇ, ಮಾಯಾಪುರದ ಅಣೆಕಟ್ಟೂ ಆಯಿತು. ಹರ್ಕೀಪೌಡಿಗಿಂತ ಮೇಲೆಯೇ ಗಂಗೆಯ ನಿರಂತರ ಪ್ರವಹಿಸುವಿಕೆಗೆ ಭಂಗವಾಯಿತು. ಅನೇಕ ವರ್ಷಗಳ ಹೋರಾಟದ ನಂತರ ಮಾನ್ಯ ಮದನಮೋಹನ ಮಾಲವಿಯಾರ ನೇತೃತ್ವದಲ್ಲಿ ಹರ್ಕೀಪೌಡಿಯ ಅವಿರಳಧಾರೆ, ಹೆಸರಿಗಾಗಿಯಾದರೂ ಪುನಃ ಸ್ಥಾಪಿತಗೊಂಡಿತು; ಆದರೆ ಕೆಳಗಿನ ಕಾಲುವೆ ಹಾಗೂ ನೀಲಧಾರಾ - ಗಂಗೆಯ ಮೂಲಧಾರೆ, ಯಾವ ಧಾರೆಯಲ್ಲಿ ಎಲ್ಲೆಲ್ಲಿ ಗಾಂಗೇಯ ತೀರ್ಥಗಳಿವೆಯೋ (ಶುಕ್ರತಾಲ್, ಬೃಜಘಾಟ್, ರಾಜಘಾಟ್, ಬ್ರಹ್ಮಾವರ್ತ, ಶೃಂಗವೇರಪುರ, ಪ್ರಯಾಗ, ವಾರಣಾಸೀ), ಅವವೆಲ್ಲವೂ ಗಂಗೆಯ ನಿರಂತರ ಹರಿವಿನಿಂದ ವಂಚಿತವಾಗಿವೆ. ಗಂಗಾತ್ವ ಅಥವಾ ಗಂಗೆಯ ವಿಶೇಷ ಗುಣಗಳನ್ನರಿಯದ, ಹರಿದ್ವಾರಕ್ಕಿಂತ ಕೆಳಗಿನ ನೀರಿನಲ್ಲಿನ ಕೊಳೆ-ರೋಧಕ ವೈಶಿಷ್ಟ್ಯವನ್ನ್ನು ನಿರ್ಲಕ್ಷಿಸುವ, ಪ್ರಾಚೀನ ಗ್ರಂಥಗಳ (ಅಥವಾ ಶಾಸ್ತ್ರಗಳೆಂಬ ಹೆಸರಿನವುಗಳ) ಕಥೆಗಳ ಬಗ್ಗೆ ಅಂಧ ವಿಶ್ವಾಸವಿಡುವ, ಮೂರ್ಖ, ಆಸೆಬುರುಕ, ಸ್ವಾರ್ಥಿಯಾದ ನಮ್ಮ ಸಮಾಜಕ್ಕೆ ಏನಾಗಬೇಕಿತ್ತು?ಅವರಿಗಂತೂ ಬರೀ ಬೇಡಿಕೆಗಳನ್ನು ಬೇಡುವುದು; ಸಂಪ್ರದಾಯವನ್ನು ನಿಭಾಯಿಸುವುದು.ಕ೪: ೧೯೨೦ ರ ನಂತರ ಜಲವಿದ್ಯುತ್ ಉತ್ಪಾದನೆಯ ಬಗ್ಗೆ ಬ್ರಿಟಿಷ್ ಸರಕಾರದ ಗಮನ ಹರಿಯಿತು. ಗಂಗೆಯ ಕಾಲುವೆಯಲ್ಲಿದ್ದ ಎರಡು ದೊಡ್ಡ ಜಲಪಾತಗಳಲ್ಲಿ (ಪಥರೀ ಹಾಗೂ ಮುಹಮ್ಮದಪುರ) ಜಲ-ವಿದ್ಯುತ್ಕೇಂದ್ರಗಳನ್ನು ಸ್ಥಾಪಿಸಲಾಯಿತು; ಇಲ್ಲಿ ಜಲಾಶಯದ ಅಣೆಕಟ್ಟುಗಳೂ ಇರಲಿಲ್ಲ; ಸುರಂಗಗಳೂ ಇರಲಿಲ್ಲ. ಕಾಲುವೆ ಎಂದ ಮೇಲೆ ಅವಿರಳತೆ ಮತ್ತು ಗಂಗಾತ್ವದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ವಿದ್ಯುತ್ ಕೇಂದ್ರಗಳಿಂದ ಯಾವುದೇ ದೊಡ್ಡ ಕೆಟ್ಟ ಪರಿಣಾಮವಾದಂತೆ ನನಗನ್ನಿಸುವುದಿಲ್ಲ. ೧೯೫೨-೫೫ರಲ್ಲಿ ಮೇಲಿನ ಎರಡು ಚಿಕ್ಕಕಂದಕಗಳನ್ನು ತೆಗೆದು, ಇಡೀ ಹರಿವನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ಆರಂಭಿಸಲಾಯಿತು ಹಾಗೂ ಡಿಸೈನ್ನಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಪಥರೀ ಜಲ ವಿದ್ಯುತ್ಕೇಂದ್ರದ ಉತ್ಪಾದನೆಯನ್ನು ಸುಮಾರು ಮೂರು ಪಟ್ಟು ಹೆಚ್ಚಿಸಲಾಯಿತು. ನಾನು ಆಗ ರೂರ್ಕಿಯಲ್ಲಿ ಓದುತ್ತಿದ್ದೆ; ಅಲ್ಲಿಂದ ಪಥರೀ ಬರೀ ೧೮ ಕಿಮೀ ದೂರದಲ್ಲಿತ್ತು. ಜಲವಿದ್ಯುತ್ಕೇಂದ್ರದಡಿ ಸೈನ್ಹಾಗೂ ನಿರ್ಮಾಣದ ಮೊದಲ ಪಾಠಗಳನ್ನು ನಾನು ಅಲ್ಲಿಂದಲೇ ಕಲಿತದ್ದು.ಕ೫: ಉತ್ತರಾಖಂಡದಲ್ಲಿ ಮುಖ್ಯ ಧಾರೆಗಳಲ್ಲೇ ಜಲ ವಿದ್ಯುತ್ ಪರಿಯೋಜನೆಗಳನ್ನು ನಡೆಸುವ ಯಾವುದೇ ಕೆಲಸವೂ ೧೯೬೦ರ ತನಕ ಆರಂಭವಾಗಿರಲಿಲ್ಲ. ಉತ್ತರಪ್ರದೇಶದಲ್ಲೇ ನೋಶಾರದಾ ಜಲ - ವಿದ್ಯುತ್ ಯೋಜನೆಯಡಿಯಲ್ಲಿ ಜಲ-ವಿದ್ಯುತ್ತಿನ ಉತ್ಪಾದನೆ ಹಾಗೂ ಜಲ-ವಿದ್ಯುತ್ ವಿಭಾಗವೂ ಆರಂಭವಾಗಿತ್ತು. ಆ ವಿಭಾಗದಡಿಯಲ್ಲಿದ್ದ, ಒಂದು ದೊಡ್ಡ ಕಾಂಕ್ರೀಟ್ ಅಣೆಕಟ್ಟನ್ನು ಆಧರಿಸಿದ್ದ ರಿಹಂದ್ಜಲ- ವಿದ್ಯುತ್ ಪರಿಯೋಜನೆಯಲ್ಲಿ ನಿರ್ಮಾಣದ ತಂಡದಲಿ ್ಲ ಒಬ್ಬನಾಗಿ ೧೯೫೪ ರಿಂದ ೧೯೬೦ರ ವರೆಗೆ ನಾನೂ ಕೆಲಸ ಮಾಡಿದ್ದೆ. ೧೯೬೦ರ ಕೊನೆಯ ೬ ತಿಂಗಳುಗಳಲ್ಲಿ ಉತ್ತರಪ್ರದೇಶದ ಕೇಂದ್ರೀಯ ಡಿಸೈನ್ ಡೈರೆಕ್ಟೋರೇಟ್ನಲ್ಲಿ ಕೆಲಸಮಾಡುತ್ತಿದ್ದೆ; ಅಲ್ಲೇ ನನಗೆ ಮೊಟ್ಟ ಮೊದಲ ಬಾರಿಗೆ ಗಂಗಾ-ಯಮುನಾ ನದಿಗಳಿಂದ ವಿದ್ಯುತ್ ಉತ್ಪಾದಿಸುವ ವಿಷಯದಲ್ಲಿ ಸಂಪರ್ಕ ಆರಂಭವಾಗಿದ್ದು; ಆದರೆ, ಇದು ಬಹಳ ಪ್ರಾಥಮಿಕ ಹಂತದ, ಅದರಲ್ಲೂ ಬರಿಯ ತಾತ್ತ್ವಿಕ ವಿಚಾರಗಳಿಗೆ ಸಂಬಂಧಿಸಿದಂತಿತ್ತು. ೧೯೬೧ರ ಆರಂಭದಲ್ಲೇ ನಾನು ಉತ್ತರಪ್ರದೇಶ ಸರ್ಕಾರದ ಕೆಲಸವನ್ನು ಬಿಟ್ಟು, ಐಐಟಿ ಕಾನ್ಪುರದಲ್ಲಿ ಅಧ್ಯಾಪಕನಾಗಿ ಸೇರಿಕೊಂಡೆ; ಶೀಘ್ರವಾಗಿಯೇ ನೀರಾವರಿ-ಜಲವಿದ್ಯುತ್ ಕ್ಷೇತ್ರದಿಂದ ದೂರಾಗಿ ಪರಿಸರ-ವಿಜ್ಞಾನಿ ಎಂದು ಹೆಸರಾದೆ. ಅದರ ಹಳೆಯ ಸಂಬಂಧಗಳು ಬಿಡುತ್ತವೆಲ್ಲಿ? ನಾನು ನೀರಾವರಿ ಹಾಗೂ ಜಲವಿದ್ಯುತ್ಯೋಜನೆಗಳಿಗೆ ಹೋಗುತ್ತಲೇ ಇದ್ದೆ. ನನ್ನ ದೌರ್ಭಾಗ್ಯವೆಂದರೆ, ೧೯೭೮ ರಲ್ಲಿ, ಯಾವಾಗ ಗಂಗೆಯ ಒಂದು ಪ್ರಮುಖ ಧಾರೆಗೆ ಮೊದಲ ವಿದ್ಯುತ್ ಪರಿಯೋಜನೆ ಆರಂಭವಾಗುತ್ತಿತ್ತೋ (ಭಾಗೀರಥಿಯ ಮೇಲಿನ ಮನೇರೀ-ಭಾಲೀ ಪರಿಯೋಜನೆ), ಆಗ ನನ್ನನ್ನು ಅದರ ನಿರ್ಮಾಣದ ತಜ್ಞನೆಂದು ಪರಿಗಣಿಸಿ ೧೫ ದಿನಗಳ ಕಾಲ ಆ ಮನೇರೀ ನಿರ್ಮಾಣದ ಸ್ಥಳದಲಿ ್ಲಇರಬೇಕಾದ ಅವಕಾಶ ನೀಡಲಾಯಿತು. ಆಗಲೇ ದೂರದೃಷ್ಟಿಯಿದ್ದು, ಆ ಯೋಜನೆಯಿಂದ ಭಾಗೀರಥಿಯ ಮೇಲಾಗುವ ದುಷ್ಪ್ರಭಾವ ಅರಿತು ವಿರೋಧಿಸಬೇಕಿತ್ತು ! ಮನೇರೀ -ಭಾಲೀ ಒಂದು ಸುರಂಗದ ಪರಿಯೋಜನೆಯಾಗಿತ್ತು; ಇದರಿಂದ ಭಾಗೀರಥಿಯ ಅವಿರಳತೆಯೂ ಭಗ್ನವಾಯಿತು ಹಾಗೂ ಆಕೆಯ ಜಲದಲ್ಲಿನ ಗಂಗಾತ್ವಕ್ಕೂ ಬಹಳ ಹಾನಿಯುಂಟಾಯಿತು. ಈಗಂತೂ ಮನೇರೀ-ಭಾಲೀ ಪರಿಯೋಜನೆಯ ಎರಡನೇ ಹಂತವೂ (ಉತ್ತರಕಾಶೀ-ಧರಾಸೂ) ಪೂರ್ಣಗೊಂಡಿದೆ; ಮನೇರಿಯಿಂದ ಒಂದು ಕಿಮೀ ಮೇಲ್ಭಾಗದಿಂದ ಹಿಡಿದು, ತೆಹ್ರಿಯ (ಅಥವಾ, ಕೋಟೇಶ್ವರದ) ಕೆಳಭಾಗದ ತನಕದ ಸುಮಾರು ೧೫೦ ಕಿಮೀಗಳಲ್ಲಿ ಭಾಗೀರಥಿಯು ಧಾರೆಯ ರೂಪದಲ್ಲಿ ಕಾಣುವುದು ಬರೀ ಉತ್ತರಕಾಶಿಯ ಘಟ್ಟದಲ್ಲಿ ೨-೩ ಕಿಮೀ, ಇಲ್ಲದಿದ್ದರೆ ಬರೀ ಸುರಂಗ ಅಥವಾ ಜಲಾಶಯಗಳಲ್ಲಿ ಕಣ್ಮರೆಯಾಗಿದ್ದಾಳೆ. ಅಕಸಾತ್ ಈಗ ಉದ್ದೇಶಿತ ಎಲ್ಲ ತಡೆಗೋಡೆಗಳು ಪೂರ್ಣಗೊಂಡರೆ ಏನಾದೀತು?
ಜಲವಿದ್ಯುತ್ತಿಗಾಗಿ ಗಂಗಾ ಮಾತೆಯ ಬಲಿ!!

ಇಂತಹ ಪರಿಸ್ಥಿತಿಯನ್ನು ತಡೆಯಲು ಈ ನಶ್ವರವಾದ ಜೀವನವನು ್ನಒತ್ತೆಯಿಡುವುದು ದೊಡ್ಡ ವಿಷಯವೇ ?
ನನ್ನ ಪ್ರಕಾರ, ಅಲ್ಲ!

Share This :
  •  
  •  

RELATED ARTICLES 

Readers Comments (0) 

COMMENT

Characters Remaining : 1000

Latest News

ಭೂಮಿ ಬಳಕೆಯಲ್ಲಿ ಬದಲಾವಣೆ
ಭೂಮಿ ಬಳಕೆಯಲ್ಲಿ ಬದಲಾವಣೆ
August 16, 2019

ತೀವ್ರ ನೀರಾವರಿ ಮತ್ತು ರಸಾಯನಿಕಗಳ ಬಳಕೆಯು ಭೂಮಿಯ ಫಲವತ್ತತೆ ಹಾನಿಗೆ ಕೊಡುಗೆ ನೀಡಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಹೇಳಿದೆ.

Photos

ರೆಕ್ಕೆ ಇದ್ದರೆ ಸಾಕೇ...

Videos